ಪುಟ:ಕಥಾಸಂಗ್ರಹ ಸಂಪುಟ ೨.djvu/೧೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಥಾಸಂಗ್ರಹ-೪ ನೆಯ ಭಾಗ ನನ್ನನ್ನು ಈ ದುಃಖಸಮುದ್ರದ ದೆಸೆಯಿಂದ ದಾಟಿಸುವುದೂ ನನಗೆ ಒಳ್ಳೆಯ ಭಾಗ್ಯ ವುಂಟಾಗುವುದೂ ನಿಜವಾಗಿದ್ದರೆ ನಿನ್ನ ಉಷ್ಣವು ಈ ಹನುಮಂತನಿಗೆ ಹಿಮೋದಕದಂತೆ ಶೀತಲವಾಗಲಿ ಎಂದು ಭಯಭರಿತಭಕ್ತಿಭಾವದಿಂದ ಕೂಡಿ ಅನೇಕ ಪ್ರಕಾರವಾಗಿ ಪ್ರಾರ್ಥಿಸಿದಳು. ಇತ್ತಲಾ ಹನುಮಂತನು ತನ್ನ ಬಾಲವು ಅಗ್ನಿ ಮಹಾಜ್ವಾಲೆಯಿಂದ ಕೂಡಿರು ವುದನ್ನು ನೋಡಿ ನನ್ನ ಬಾಲದಲ್ಲಿ ಅಗ್ನಿಯ ಮಹಾಜ್ವಾಲೆಯು ಕಾಣುತ್ತಿದೆ. ಆದಾಗ ಸ್ವಲ್ಪವೂ ಸುಡುವುದಿಲ್ಲ. ಪನ್ನೀರನ್ನು ಸುರಿದಂತೆ ಶೀತಲವಾಗಿದೆ. ಸೀತೆಯ ಪಾತಿವ್ರತ್ಯ ಧರ್ಮದಿಂದಲೂ ಶ್ರೀರಾಮನ ಸತ್ಯ ಪ್ರಭಾವದಿಂದಲೂ ನನ್ನ ತಂದೆ ಯಾದ ವಾಯುದೇವನ ಕರುಣದಿಂದಲೂ ಈ ಅಗ್ನಿಯ ಉಷ್ಣತೆಯು ನನ್ನನ್ನು ಮುಟ್ಟಲಾರದು ಎಂದು ನಿಶ್ಚಯಿಸಿ ಸಂತೋಷವುಳ್ಳವನಾಗಿ ಅತ್ಯುನ್ನತರೂಪವನ್ನು ಧರಿಸಿ ರಾಕ್ಷಸರು ತನ್ನ ನಡುವಿಗೆ ಕಟ್ಟಿದ್ದ ಹಗ್ಗಗಳನ್ನು ತುಂಡು ತುಂಡಾಗುವಂತೆ ಕಿತ್ತು ಬಿಸುಟು ನೆಗೆಯುತ್ತ ಬಂದು ಊರುಬಾಗಿಲ ಕಬ್ಬಿಣದ ಲಾಳ್ಳುಂಡಿಗೆಯನ್ನು ತೆಗೆದು ಕೊಂಡು ತನ್ನ ಜತೆಯಲ್ಲಿ ಸಾರುತ್ತ ಬರುತ್ತಿದ್ದ ರಕ್ಕಸರನ್ನೆಲ್ಲಾ ಬಡಿದುರುಳಿಸಿ ಕುಪ್ಪಳಿಸಿ ಊರುಬಾಗಿಲ ಉಪ್ಪರಿಗೆಯ ಮೇಲೆ ಕುಳಿತು ಕೊಂಡು ಇನ್ನು ಮೇಲೆ ನಾನು ಮಾಡತಕ್ಕ ಕೆಲಸವಾವುದಿರುವುದು ? ವನವನ್ನು ಮುರಿದೆನು. ಶ್ರೇಷ್ಠರಾದ ರಾಕ್ಷಸರನ್ನು ಕೊಂದೆನು. ಇಲ್ಲಿರುವ ಚತುರಂಗಬಲದಲ್ಲಿ ಕಾಲುಪಾಲನ್ನು ಸದೆದೆನು. ಇನ್ನು ಈ ಲಂಕಾದುರ್ಗವನ್ನು ಸುಟ್ಟು ಹಾಳುಮಾಡುವುದೊಂದೇ ಕೆಲಸ ಉಳಿದಿರು ವುದು. ಈಗ ನನಗೆ ಸ್ವಲ್ಪವಾದರೂ ನೋವನ್ನು ಕೊಡದೆ ನನ್ನ ಬಾಲದಲ್ಲಿ ಉರಿಯು ತಿರುವ ಅಗ್ನಿ ದೇವತೆಗೆ ಪ್ರತ್ಯುಪಕಾರವಾಗಿ ಈ ನಗರವನ್ನು ಆಹುತಿಕೊಡುವುದು ಕೃತಜ್ಞತೆಯಾಗಿರುವುದು ಎಂದು ಯೋಚಿಸಿಕೊಂಡು ಅಲ್ಲಿಂದ ಹೊರಟು ಮನೆಯಿಂದ ಮನೆಗೆ ನೆಗೆಯುತ್ತ ಅವುಗಳಿಗೆಲ್ಲಾ ಬೆಂಕಿಯನ್ನು ಹೊತ್ತಿಸುತ್ತ ಪಲ್ಲಿ ರಿದಣಕಿಸಿ ಅಬ್ಬರಿ ಸುತ್ತ ನಿರ್ಭಯದಿಂದ ಸಂಚರಿಸುತ್ತ ಅಲ್ಲಿಂದ ಪ್ರಹಸ್ತನ ಮನೆಯ ಮೇಲಕ್ಕೆ ಹಾರಿ ಅದಕ ಬೆಂಕಿಯನ್ನು ಹೊತ್ತಿಸಿ ವಿಭೀಷಣನ ಮನೆಯಿಂದ ಹೊರತು ಮಹಾ ಪಾರ್ಶ್ವಾದಿ ಸಮಸ್ತ ರಾಕ್ಷಸರ ಮನೆಗಳಿಗೆಲ್ಲಾ ಬೆಂಕಿಯನ್ನು ಹೊತ್ತಿಸಿ ಕಡೆಗೆ ರಾವ ಣನ ಮನೆಗೂ ಅಗ್ನಿಯನ್ನ ಂಟಿಸಿ ಸಂತೋಷದಿಂದ ನೋಡುತ್ತಿರಲು ಅಗ್ನಿಯು ವ್ಯಾಪಿಸಿಕೊಂಡು ಲಂಕಾಪಟ್ಟಣವನ್ನೆಲ್ಲಾ ದಹಿಸುತ್ತಿತ್ತು. ಆಗ ಪುಣ್ಯನಾಶದಲ್ಲಿ ಸ್ವರ್ಗದಿಂದ ಭೂಮಿಗುರುಳುವ ವಿಮಾನಗಳಂತೆ ನವರತ್ನ ಖಚಿತಗಳಾದ ಮಹಾಸೌಧ ಗಳೂ ಸಪ್ತಭೂಮಿಕಾ ಗೃಹಗಳೂ ಮರಿದು ಮುರಿದು ಭೂಮಿಯಲ್ಲಿ ಬೀಳುತ್ತಿದ್ದವು. ಆಗ ೨೦ಕಾಪಟ್ಟಣದ ಸ್ಥಿತಿಯು ಪರಿತಾಪಕರವಾಗಿದ್ದಿತು. ಆಗ ರಾಕ್ಷಸರೆಲ್ಲರೂ ತಮ್ಮ ತಮ್ಮ ಮನೆಗಳ ಪದಾರ್ಥಗಳನ್ನು ಕಾಪಾಡುವು ದರಲ್ಲಿ ಆಶೆಯನ್ನು ತೊರೆದು ತಮ್ಮ ತಮ್ಮ ಪ್ರಾಣರಕ್ಷಣೆಯಲ್ಲೇ ಉದ್ಯುಕ್ತರಾಗಿ ದಿಕ್ಕು ದಿಕ್ಕಿಗೆ ಓಡುತ್ತಿದ್ದರು. ಅವರಲ್ಲಿ ಕೆಲರು-ಅಯ್ಯೋ ! ಇದು ನಿಜವಾಗಿಯೂ ಕೋಡಗನಲ್ಲ. ಸತ್ಯವಾಗಿ ಕಪಿರೂಪನ್ನು ಧರಿಸಿ ಬಂದ ಅಗ್ನಿಯೇ ಸರಿ, ಅಯ್ಯೋ !