ಪುಟ:ಕಥಾಸಂಗ್ರಹ ಸಂಪುಟ ೨.djvu/೧೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸೇತುಬಂಧನದ ಕಥೆ 117, ಲವಾಗಿ ಕಿತ್ತು ಮೇಲೆತ್ತಿದನು. ಆಗ ಈಶ್ವರನು ಬೆರಗಾಗಿ ಅಂಗದನನ್ನು ಕುರಿತು ಎಲೈ ಕಪಿವೀರನೇ! ಈ ಗಿರಿಯು ನಮ್ಮದು. ನಿನ್ನ ರಾಮನು ನನಗೆ ಮಿತ್ರನು. ಇದು ನಿಶ್ಚಯವು, ಹುಸಿಯಲ್ಲ. ಅದು ಕಾರಣ ಚಿತ್ತೈಕಾಗ್ರತೆಯಿಂದ ನಮ್ಮನ್ನು ನೋಡು ಎಂದು ಸುರಮುನಿಗಳ ಅಗತ್ಯವಾದ ತಪಸ್ಸಿಗೂ ದುರ್ಲಭವಾದ ತನ್ನ ಸದ್ಯೋಜಾತಾ ದಿಪಂಚಮುಖಗಳನ್ನು ಧರಿಸಿ ಕಾಣಿಸಿಕೊಂಡನು. ಅಂಗದನು ನೋಡಿ ಮನಸ್ಸಿನಲ್ಲಿ ವಂದಿಸಿ-ನಾನೇನು ಹೆಡ್ಡನೇ ? ನೀನು ಶಂಕರನೆಂದೂ ಈ ಪರ್ವತವು ನಿನ್ನದೆಂದೂ ತಿಳಿಯೆನೇ ? ನೀನು ನನ್ನೊಡೆಯನಿಗೆ ಮಿತ್ರನಾಗಿದ್ದ ಮೇಲೆ ಈ ಗಿರಿಯು ಆತನ ಕಾರ್ಯಕ್ಕೆ ಉಪಯೋಗವಾಗತಕ್ಕುದೇ ನ್ಯಾಯವು. ನಾನು ಇಷ್ಟು ಮಾತ್ರಕ್ಕೆ ಸ್ವಾಮಿ ಕಾರ್ಯವನ್ನು ಬಿಡತಕ್ಕವನಲ್ಲ. ಇದೆಲ್ಲಾ ಏತಕ್ಕೆ? ನನ್ನೊಡೆಯನಿರುವ ಸ್ಥಳವು ಇಲ್ಲಿಗೆ ಬಹುದೂರವೇ ? ಈ ಗಿರಿಯನ್ನು ತರಬೇಡ ಎಂದು ಆತನ ಅಪ್ಪಣೆಯು ಬರಲಿ. ಆಮೇಲೆ ಈ ಗಿರಿಯನ್ನು ಇಲ್ಲೇ ಬಿಟ್ಟು ಮತ್ತೊಂದು ಕಡೆಗೆ ಹೋಗುವೆನು ಎನ್ನಲು ಆಗ ಮಹೇಶ್ವರನು ನಗುತ್ತ ಸಮೀಪದಲ್ಲಿರುವ ತನ್ನ ಮಕ್ಕಳಾದ ಗುಹಗಣೇಶರನ್ನು ನೋಡಿ ಆಗಲೆ ರಾಮನ ಮೂರ್ತಿಯನ್ನು ಧರಿಸಿ ಅಂಗದನನ್ನು ಕುರಿತು-ಎಲೈ ಕಂದಾ! ಕೇಳು. ಈ ಶಂಕರನಿಗೂ ನನಗೂ ಭೇದವಿಲ್ಲ. ಲೋಕರಕ್ಷಣಾರ್ಥವಾಗಿ ಭೇದವನ್ನು ಕಲ್ಪಿಸಿಕೊಂಡಿರುವೆವು. ವಿಚಾರದಿಂದ ಅದು ಮಿಥ್ಯವಾಗಿರುವುದು. ಆದುದರಿಂದ ಈ ಗಿರಿಯನ್ನು ಬಿಟ್ಟು ಇದರ ಸುತ್ತು ಮುತ್ತಣ ಬೆಟ್ಟಗಳನ್ನು ಕಿತ್ತು ಕೊಂಡು ಬಾ ಎಂದು ಹೇಳಿ ಅದೃಶ್ಯನಾಗಲು ಆಗ ಅಂಗದನು ಆ ಕೈಲಾಸಪರ್ವತವನ್ನು ಹೆಚ್ಚು ಕಡಿಮೆಯಾಗದಂತೆ ಮೊದಲಿದ್ದ ಹಾಗೆಯೇ ಇಟ್ಟು ಅದರ ಸಮೀಪದಲ್ಲಿದ್ದ ಗಿರಿಗಳನ್ನು ಕಿತ್ತು ತೆಗೆದು ಕೊಂಡು ಬಂದು ನಳನಿಗಿತ್ತನು. ಅನಂತರದಲ್ಲಿ ನೀಲನು ಮ೦ದರಪರ್ವತಕ್ಕೆ ಹಾರಿಹೋಗಿ ಅದನ್ನು ಕೀಳವುದ ಕ್ರಾರಂಭಿಸಲು ಆ ಕೂಡಲೆ ದೇವೇಂದ್ರನು ಓಡಿಬಂದು-ಎಲೈ ಕಪಿನಾಯಕನೇ ! ಈ ಪರ್ವತದಲ್ಲಿ ನನ್ನೊಡನೆ ಸಕಲ ದೇವತೆಗಳೂ ವಾಸಮಾಡಿಕೊಂಡಿರುವರು. ಇದ ರಲ್ಲಿ ಮೃತಸಂಜೀವಿನ್ಯಾದಿ ದಿವೌಷಧಿಗಳಿವೆ. ಇದು ಲಕ್ಷ್ಮೀಪತಿಯಿಂದ ಪ್ರತಿಷ್ಠಿತವಾ ದ ಪರ್ವತವು. ಇದನ್ನು ಕೀಳಬೇಡವೆಂದು ಬೇಡಿಕೊಳ್ಳಲು ನೀನು ಓರೆಗಣ್ಣಿನಿಂದ ನೋಡಿ-ನೀನಾರು ? ಇಂದ್ರನೇ ? ಹು, ಹು, ಇಂದ್ರನಾಗು ! ಚಂದ್ರನಾಗು ! ಹರ ನಾಗು ! ಹಿರಣ್ಯಗರ್ಭನಾಗು ! ಅದರಿಂದ ನಮಗೇನು ಎಂದು ಕೇಳುತ್ತಿರಲು ಕೂಡಲೆ ನಾರದ ಮಹರ್ಷಿಯು ಬಂದು-ಎಲೈ ವೀರನಾದ ನೀಲನೇ ! ಶ್ರೀರಾಮನು ನಿಮ್ಮೆಲ್ಲರಿಗೂ ಒಡೆಯನಾಗಿರುವಂತೆ ನಮಗೂ ಒಡೆಯನಾಗಿರುವನು. ಅದು ಕಾರಣ ದೇವನಿವಾಸಸ್ಥಾನವಾದ ಈ ಗಿರಿಯನ್ನು ಕೀಳಬೇಡ ಎಂದು ಬಹಳ ವಿಧವಾಗಿ ಹೇಳಿ ಕೊಂಡಾದ್ರೂ ಕೇಳದೆ ಹೋದುದರಿಂದ ಕಡೆಗೆ ಅವನ ತಂದೆಯಾದ ಅಗ್ನಿಯನ್ನು ಕರೆ ದುಕೊಂಡು ಬಂದು ಹೇಳಿಸಿದುದರಿಂದ ನೀನು ಆ ಗಿರಿಯನ್ನು ಅಲ್ಲೇ ಬಿಟ್ಟು ಅದರ ಸಮಿಾಪದ ಪರ್ವತಗಳನ್ನು ಕಿತ್ತು ತೆಗೆದುಕೊಂಡು ಬಂದು ನಳನ ಕೈಗೆ ಕೊಟ್ಟನು. ಮೊದಲು ಅಂಗದನು ತಂದ ಗಿರಿಗಳಿಂದ ಸೇತುವು ಹತ್ತು ಗಾವುದಗಳ ವರೆಗೂ ಸಾಗಿ ದ್ದಿತು. ಈಗ ಈ ನೀಲನು ತಂದ ಪರ್ವತಗಳಿಂದ ಹತ್ತು ಯೋಜನಗಳ ವರೆಗೂ ಸಾಗಿತು.