ಪುಟ:ಪ್ರಬಂಧಮಂಜರಿ.djvu/೧೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸುಗ್ಗಿ ಯು ಕಾಲ, ೧೬೧ ಪಾರವೇ ಇಲ್ಲ. ಮನೆಯಲ್ಲಿ ರಾಶಿರಾಶಿಯಾಗಿ ಬಿದ್ದಿರುವದವಸವನ್ನು ಕಂಡು, ರೈತನೂ ಅವನ ಹೆಂಡತಿಮಕ್ಕಳೂ ಬಲು ಹಿಗ್ಗು ವರು, ರೈತನು ಮನೆಗೆ ಬೇಕಾದಷ್ಟು ಧಾನ್ಯವನ್ನಿಟ್ಟು ಕೊಂಡು, ಉಳಿದುದನ್ನು ಮಾರಿಬಿಡುವನು. ಆಗ ಅವನಿಗೆ ಕೈತುಂಬ ಹಣಸಿಕ್ಕುವುದು, ಗೊಬ್ಬರಹೊಡೆದು, ಆರಿನಿಂದ ಚೆನ್ನಾಗಿ ಉತ್ತು, ಒಳ್ಳೆಯ ಬೀಜಗಳನ್ನು ತಕ್ಕ ಕಾಲದಲ್ಲಿ ಬಿತ್ತಿ, ಕಳೆಕಿತ್ತು, ಪೈರನ್ನು ದನಕರುಗಳು ಮೇಯದಂತೆ ಕಾದು, ವರ್ಷವೆಲ್ಲ ಬೆಳೆಗಾಗಿ ಪಟ್ಟ ಕಷ್ಟವು ರೈತನಿಗೆ ಸುಗ್ಗಿಯ ಕಾಲದಲ್ಲಿ ಮರೆತುಹೋಗುವುದು; ಮತ್ತೆ ಬೆಳೆಯ ಬೇಕೆಂಬ ಕುತೂಹಲವೂ ಹುಟ್ಟುವುದು, ಹಿಂದಿನ ವರ್ಷಕ್ಕಿಂತ ಲೇಸಾಗಿ ಧಾನ್ಯವನ್ನು ಪಡೆಯಬೇಕೆಂಬ ಮನಸ್ಸುಂಟಾಗುವುದು. ಇದಲ್ಲದೆ ಮನೆಯಲ್ಲಿ ಹೆಚ್ಚು ತಿಂಡಿಗಳನ್ನು ಮಾಡಿಕೊಳ್ಳಲನುಕೂಲಿಸುವುದು. ಕೆಲವೆಡೆಗಳಲ್ಲಿ ಸುಗ್ಗಿ ಗಾಗಿ ದೊಡ್ಡ ಹಬ್ಬವನ್ನೇ ಮಾಡುವರು; ಆಗ ರೈತರೆಲ್ಲ ಸೇರಿ ಸಂತೋಷದಿಂದಹಿಗ್ಗು ತಕುಣಿದಾಡುವರು. ಇದಕ್ಕೆ ಸುಗ್ಗಿಯಕುಣಿತ'ಎಂದುಹೆಸರು, ಸುಗ್ಗಿ ಯು ಅದ್ದೂರಿಯಾಗಿರಬೇಕಾದರೆ,ರೈತರ ಶ್ರಮದೊಡನೆ ದೈವಸಹಾಯವೂ ಬೇಕು: ಬೆಳೆ ಚೆನ್ನಾಗಬೇಕಾದರೆ, ಮಳೆ ಸರಿಯಾಗಿ ಬರಬೇಕು, ಒಂದೊಂದು ಸಲ ಹೊತ್ತಿಗೆ ಮಳೆ ಬಾರದೆ ಪೈರೆಲ್ಲ ಒಣಗಿ ಸೀಕಲುಬಿದ್ದು ಧಾನ್ಯವು ಕೆಟ್ಟು ಹೋಗುವುದುಂಟು. ಆಗ ರೈತರಿಗೆ ನಷ್ಟವಾಗುವುದು ; ಆದರೂ ಅವರು ಹೆದರುವುದಿಲ್ಲ. ಅವರು ಅಂತಹ ಸಮಯಕ್ಕೊದಗುವಂತೆ ಹಿಂದಿನ ವರ್ಷದ ದವಸವನ್ನು ಕೈಕಾವಲಿಟ್ಟೇ ಇರುವರು. ಅದರಿಂದ ಕಾಲಕ್ಷೇಪಮಾಡಿಕೊಳ್ಳುವರು. ಒಂದು ಸಲ ಮಳೆ ನಿಂತುದಕ್ಕೆ ಮುಳುಗಿಹೋಗಿ ತಿಂಡಿಗಿಲ್ಲದೆ ಸಾಲಗಾರರಾಗುವಷ್ಟು ಮೈ ಮರೆತಿರುವ ರೈತರು ಬಲುಕಡಮೆ. ಎಲ್ಲರಿಗೂ ಈ ವಿಷಯದಲ್ಲಿ ತಕ್ಕ ಮಟ್ಟಿಗೆ ಮುಂದಾಲೋಚನೆಯಿದೆ. ಸುಗ್ಗಿಯ ಕಾಲದಲ್ಲಿ ಹೊಲಗದ್ದೆ ಗಳ ಮೇಲೆ ಸಂಚಾರ ಹೊರಟರೆ ಸೊಗಸಾದ ಬಗೆಬಗೆಯ ನೋಟಗಳು ಕಂಗೊಳಿಸುವುವು. ಪೈರು ಸೊಂಪಾಗಿ ಬೆಳೆದು ಕೊಹ್ಲಿಗೆ ಬಂದಿರುವ ಕಡೆಗಳಲ್ಲಿ ರೈತರು ಮನೆಯವರೆಲ್ಲರೊಡನೆ ಕೊಯ್ಯಲಾರಂಭಿಸುವರು. ಆಗ ಹೊಲಗದ್ದೆಗಳಲ್ಲಿಎಲ್ಲಿನೋಡಿದರೂ ಗಂಡಸರೂ ಹೆಂಗಸರೂ ಮಕ್ಕಳೂ ತುಂಬಿರುವರು, ವಿನೋದವಾಗಿ ಮಾತುಗಳನಾ ಡುತ್ತಲೂ, ಹಾಡುಗಳನ್ನು ಹೇಳುತ್ತ, ಕೆಲಸ ಮಾಡುತಿರುವ ಈ 11