ಪುಟ:ಪ್ರಬಂಧಮಂಜರಿ.djvu/೧೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೬ ಪ್ರಬಂಧಮಂಜರಿ-ಎರಡನೆಯ ಭಾಗ, 50. ಸೋಮಾರಿತನ. ಕೆಲಸಮಾಡುತ್ತಿರಬೇಕಾದಕಾಲದಲ್ಲಿ ಕೆಲಸಮಾಡದೆ ಸುಮ್ಮನಿರುವುದಕ್ಕೆ ಸೋಮಾರಿತನವೆಂದು ಹೆಸರು. ಸೋಮಾರಿತನದಿಂದ ಹಲವು ಕೆಡಕುಗಳುಂ ಟಾಗುವುವೆನ್ನುವುದಕ್ಕೆ ಏನೂ ಸಂದೇಹವಿಲ್ಲ. ವಿದ್ಯಾರ್ಥಿ ಸೋಮಾರಿತನ ದಿಂದ ವ್ಯರ್ಥವಾಗಿ ಕಾಲಕಳೆವುದನ್ನು ಕಲಿತರೆ ಮುಂದೆದುಃಖಕ್ಕೂ ಕೊರತೆ. ಗೂ ಗುರಿಯಾಗುವನು. ಸರಿಯಾಗಿ ಬಾಳುವುದಕ್ಕೆ ಯೋಗ್ಯತೆಯನ್ನು ಕೊಡುವವಿದ್ಯೆಯನ್ನು ಸೋಮಾರಿತನದಿಂದ ಸಂಪಾದಿಸಿಕೊಳ್ಳಲಾರದೆಕೆಡುವನು. ಬಾಲ್ಯದಲ್ಲಿ ಕಲಿತ ಸೋಮಾರಿತನವು ಅವನಿಗೆ ಸ್ವಭಾವವಾಗಿ, ಅವನು ದೊಡ್ಡವನಾದಾಗ ಯಾವ ಕಸಬನ್ನವಲಂಬಿಸಿದರೂ ಚೆನ್ನಾಗಿ ಕಷ್ಟ ಪಟ್ಟು ಕೆಲಸಮಾಡಲಾಗುವುದಿಲ್ಲ. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಿತೆ? ಒಬ್ಬ ಹುಡುಗನು ಬುದ್ದಿವಂತನಾಗಿರಬಹುದು; ಆದರೆ ಅವನು ಸೋಮಾರಿಯಾಗಿದ್ದರೆ, ಅವನಿಗಿಂತ ಬುದ್ದಿ ಯಲ್ಲಿ ಕೀಳಾಗಿದ್ದರೂ ಕಷ್ಟ ಪಟ್ಟು ಆಸಕ್ತಿ. ಯಿಂದ ಕೆಲಸಮಾಡುವವರಿಗೆ ಹಿಂದೆಬೀಳುವನು, ಸೋಮಾರಿಯ ಮುಖ್ಯಾಭಿಪ್ರಾಯವು ಕೆಲಸಮಾಡುವುದನ್ನು ದ್ವೇಷಿಸುವುದು, ಇದರಿಂದ ಅವನ ಕೋರಿಕೆಗೇ ಕುಂದು ಬರುವುದು. ಯಾವನು ಕೆಲಸ ಮಾಡುತ್ತಿರಬೇಕಾದ ವೇಳೆಯಲ್ಲಿ ಕೆಲಸಮಾಡದೆ ಕಾಲಕಳೆವನೋ ಅವನು ಬಹಳ ಕೆಲಸವನ್ನು ಒಟ್ಟಿಗೆ ಮಾಡಬೇಕಾಗಿ ಬರುವುದು. ಪ್ರತಿದಿನವೂ ಸ್ಕೂಲಿನಲ್ಲಿ ಹೇಳಿಕೊಡುವ ಪಾಠವನ್ನು ಒಬ್ಬ ವಿದ್ಯಾರ್ಥಿ ಆಯಾದಿನವೇ ಓದದೆ ಸೋಮಾರಿತನ. ದಿಂದ ಉಪೇಕ್ಷಿಸಿದರೆ, ಕೊನೆಗೆ ಪರೀಕ್ಷೆ ಸಮೀಪಿಸಿದಾಗ ಹಿಂದ ಪಾಠಗಳನ್ನೆಲ್ಲಾ ಒಟ್ಟಿಗೆಸ್ವಲ್ಪ ಕಾಲದಲ್ಲಿಯೇ ಕಲಿಯಬೇಕಾಗಿಬರುವುದು, ಒಬ್ಬಧಿ ಕಾರಿಯು ಬಂದ ಕಾಗದಗಳಿಗೆ ಆಯಾದಿನವೇ ಯೋಚಿಸಿ ಉತ್ತರಕೊಡುವುದನ್ನು ಉದಾಸೀನಮಾಡಿದರೆ, ಕೊನೆಗೆ ನೂರಾರು ಕಾಗದಗಳಿಗೆ ಒಂದೇಸಲ ಉತ್ತರಕೊಡಬೇಕಾಗಿ ಬಂದು ತೊಂದರೆಯಾಗಬಹುದು. ಹಣಗಾರರು ಕೆಲಸಮಾಡುವ ಆವಶ್ಯಕತೆಯೇನೂ ಇಲ್ಲವೆಂದು ಕೆಲವರು ಯೋಚಿಸಬಹುದು. ಹಣಗಾರರಿಗೂ ಸೋಮಾರಿತನದಿಂದ ಕೇಡುಗಳಾಗುವುವೇ ಹೊರತು ಯಾವ ಲಾಭವೂ ಇಲ್ಲ. ಇವರು ಇಲ್ಲಿದ್ದ ಹುಲ್ಲುಕಡ್ಡಿ - ಯನ್ನು ಅಲ್ಲಿ ಎತ್ತಿ ಹಾಕದೆ ಸುಮ್ಮನೆ ಕುಳಿತಿರುವುದಕ್ಕೆ ಯಾರ ಅಡ್ಡಿಯ