ಪುಟ:ಪ್ರಬಂಧಮಂಜರಿ.djvu/೧೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮ ೮ ಪ್ರಬಂಧಮಂಜರಿ-ಎರಡನೆಯ ಭಾಗ ಹುದ್ದೆದಾರರಿಗೂ, ಸಭಾಧ್ಯಕ್ಷರಿಗೂ ಮರ್ಯಾದಾರ್ಥವಾಗಿ ಸೊಗಸಾದ ಹೂವಿನ ಹಾರಗಳನ್ನು ಕೊರಳಿಗೆ ಹಾಕುವ ವಾಡಿಕೆ ವಿಶೇಷವಾಗಿದೆ. ಮನುಷ್ಯರು ಉಪಯೋಗಿಸುವ ಹೂಗಳು ಸ್ವಲ್ಪ. ಅವರು ಕೈಹಾಕದಿ. ರುವುವು ಇನ್ನೂ ಎಷ್ಟೋ ಇವೆ, ಅವರು ನೋಡದೆಯೇ ಇರುವುವುಎಣಿಕೆಯಿಲ್ಲದಷ್ಟಿವೆ. ಅವುಗಳೆಲ್ಲಾ ಕಾಡಿನಲ್ಲಿ ಬಾಡಿ ಉದುರಿಹೋಗುತ್ತವೆ. ಅನೇಕ ಪುಷ್ಪಗಳ ಹೆಸರೇ ಮನುಷ್ಯರಿಗೆ ತಿಳಿಯದು. ಪಟ್ಟಣವಾಸಿಗಳಿಗಿಂತ ಹಳ್ಳಿಯ ವರು ಬಹಳ ಹೂಗಳನ್ನು ಬಲ್ಲರು, ವಿದ್ಯಾವಂತರಾದವರು ಕಾಡಿಗೆ ಆಗಾಗ್ಗೆ ಹೋಗಿ ಹೊಸಹೊಸದಾಗಿ ಹಗಳ ಪರಿಚಯ ಮಾಡಿಕೊಂಡು ಅವುಗಳ ನ್ನು ಚೆನ್ನಾಗಿ ಪರೀಕ್ಷಿಸುತ್ತಾ ಬರಬೇಕು. ಇದರಿಂದ ಅವರಿಗೆ ನೇತ್ಯಾನಂದವೂ ಉಲ್ಲಾಸವೂ ಆಗುವುದಲ್ಲದೆ ಗುಣಗ್ರಹಣಶಕ್ತಿಯ ವೃದ್ಧಿ ಹೊಂದುವುದು. 24, ಪುಸ್ತಕ ಭಂಡಾರಗಳುಜನಾಭಿವೃದ್ಧಿಗೆ ಪುಸ್ತಕಭಂಡಾರವು ಬಲುಸಹಕಾರಿಯು. ನಾವು

  • ಆ ಸ್ವಂತವಾಗಿ ಕೊಳ್ಳಲಾರದೆ ಅನೇಕ ಪುಸ್ತಕಗಳನ್ನು ಆ ಭಂಡಾರಗಳಲ್ಲಿ ಓದಬಹುದು, ಪುಸ್ತಕಭಂಡಾರಗಳು ದರಿದ್ರರಾದ ವಿದ್ಯಾರ್ಥಿಗಳಿಗೆ ವಿಶೇಷ ಸಹಾಯಮಾಡುತ್ತವೆ; ಏಕೆಂದರೆ ಕೊಂಡುಕೊಳ್ಳಲು ಅವರಿಗೆ ಹಣವಿರುವದಿಲ್ಲ. ಎರವಲು ತಂದ ಪುಸ್ತಕಗಳನ್ನು ಮಟ್ಟಿಗೆ ಓದುವುದಾದರೆ, ಜ್ಞಾನವು ಹೆಚ್ಚಲು ಅವಕಾಶವಿಲ್ಲದೆ ಅವರ ವಿದ್ಯಾಭ್ಯಾಸಕ್ಕೆ ವಿಘ್ನ ವುಂಟಾಗುವುದು, ಹಣವಂತರಾದವರು ಕೂಡ ತಮಗೆ ಬೇಕಾದ ಪುಸ್ತಕಗಳೆಲ್ಲವನ್ನೂ ಕೊಳ್ಳುವುದಕ್ಕಾಗುವುದಿಲ್ಲ. ಆದುದರಿಂದ ಬಡವರಿಗೂ ಭಾಗ್ಯವಂತರಿಗೂ ಓದಲು ಅನುಕೂಲಿಸುವಂತೆ, ಸರಕಾರದವರು ಎಲ್ಲತರದ ಪುಸ್ತಕಗಳನ್ನೂ ಭಂಡಾರಗಳಲ್ಲಿ ಸೇರಿಸಿಡುತ್ತಾರೆ.

ಒಳ್ಳೆಯ ಪುಸ್ತಕಭಂಡಾರದಲ್ಲಿ ಎಲ್ಲಿಯೂ ಸಿಕ್ಕದ ಅಮೂಲ್ಯವಾದ ಪುಸ್ತ ಕಗಳು ದೊರೆವುದಲ್ಲದೆ, ಅದರಿಂದ ಇತರ ವಿಧದಲ್ಲಿಯೂ ವಿದ್ಯಾಭಿವೃದ್ಧಿಗೆ ಒತ್ತಾಸೆಯುಂಟು. ಮನೆಯಲ್ಲಿ ಓದುತ್ತಿರುವಾಗ ಗದ್ದಲವೇ ಮೊದಲಾದ ಹಲವು ತೊಂದರೆಗಳಾಗುವುವು. ಇದರಿಂದ ವಿದ್ಯಾರ್ಥಿಗೆ ಪುಸ್ತಕದ ಮೇಲೆ ಚಿತ್ತೈಕಾಗ್ರತೆ ತಪ್ಪಿ, ಓದಿದ ವಿಷಯವು ಮನಸ್ಸಿಗೆ ಹತ್ತುವುದೇ ಕಷ್ಟ, ಪುಸ್ತಕಭಂಡಾರಗಳಲ್ಲಿಯಾದರೂ ಯಾವ ವಿಧವಾದ ತೊಂದರೆಯೂ ಇಲ್ಲದೆ