ಪುಟ:ಪ್ರಬಂಧಮಂಜರಿ.djvu/೧೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨೫ ಅಚ್ಚು ಹಾಕುವುದು, ಮಧ್ಯಭಾಗದಲ್ಲಿ ಯೂರೋಪಿನಲ್ಲಿ ಆರಂಭಿಸಲ್ಪಟ್ಟು, ಐವತ್ತು ವರ್ಷಗಳೊಳಗೆ ಇಟಲಿ, ಜರ್ಮನಿ, ಫ್ರಾನ್ಸ್, ಇಂಗ್ಲೆಂಡ್ ದೇಶಗಳಲ್ಲೆಲ್ಲಾ ಸಾಮಾನ್ಯ ವಾಗಿ ಪ್ರಚಾರಕ್ಕೆ ಬಂದಿದ್ದಿತು. ಈಗ ನಾಗರಿಕತೆಯುಳ್ಳ ದೇಶಗಳಲ್ಲೆಲ್ಲಾ ಅಚ್ಚು ಹಾಕುವುದು ಹರಡಿಕೊಂಡಿದೆ. ಇದರಿಂದಾಗಿರುವ ಉಪಯೋಗಗಳು ಅಪರಿಮಿತವಾದುವು. ಇವಗಳಲ್ಲಿ ಎಲ್ಲಾಗ್ರಂಥಗಳೂ ಅಲ್ಪ ಕ್ರಯಕ್ಕೆ ಸಿಕ್ಕು ವಂತಾದುದು ಬಲುಮುಖ್ಯವು. ಕ್ರಿ.ಶ.15ನೆಯ ಶತಮಾನದ ಮಧ್ಯ ಭಾಗಕ್ಕೆ ಮುಂಚೆ ಪುಸ್ತಕಗಳನ್ನು ಹೆಚಿ ಸಬೇಕಾಗಿದ್ದರೆ, ಬಹುವರ್ಷಗಳವರೆಗೂ ಶ್ರಮಪಟ್ಟು ಬರೆಯ ಬೇಕಾಗಿದ್ದಿತು. ಇದರಿಂದಲೂ, ಬರೆದವರು ವಿರಳವಾಗಿದ್ದುದರಿಂದಲೂ ಗ್ರಂಥಗಳ ಪ್ರತಿಗಳೇ ದುರ್ಲಭವಾಗಿದ್ದು ವು. ಬರೆಸಬೇಕಾದರೆ ತುಂಬಾ ವೆಚ್ಚ ಆಗುತಿದ್ದಿತು. ಯೂರೋಪಿನಲ್ಲಿ ಮೊದಲು ವೈದಿಕರೇ ಪುಸ್ತಕಗಳನ್ನು ಬರೆಯುವ ತಿದ್ದರು. ಇವರು ಬರೆಯುತ್ತಿದ್ದು ಎಲ್ಲ ಮತಕ್ಕೆ ಸಂಬಂಧಿಸಿದ್ದು ವು. ಆದುದರಿಂದ ಮುದ್ರಾ ಯಂತ್ರವು ಬರುವುದಕ್ಕೆ ಮೊದಲು ಯೂರೋಪಿನಲ್ಲಿಯೂ ಪುಸ್ತಕಗಳು ಎಲ್ಲಿಯೋ ಕೆಲವೇ ಇದ್ದುವು; ಅವುಗಳನ್ನು ಬರೆಸುವುದಕ್ಕೂ ಕೊಳ್ಳುವುದಕ್ಕೂ ತುಂಬಾ ಹಣ ಬೇಕಾಗಿದ್ದಿತು; ಇದ್ದ ಪುಸ್ತಕಗಳಲ್ಲಿಯೂ ಮುಕ್ಕಾಲೂ ಮೂರುವೀ ಸವಾಲು ಮತವಿಷಯಕವಾಗಿದ್ದು ವು. ಇದರಿಂದ ಜನರ ತಿಳಿವಳಿಕೆ ಇದ್ದ ಸ್ಥಿತಿಯಲ್ಲಿಯೇ ಇದ್ದು ಹೆಚ್ಚುವುದಕ್ಕವಕಾಶವೇ ಇರಲಿಲ್ಲ. ಆದರೆ ಅಚ್ಚು ಹಾಕುವುದು ಬಂದಮೇಲೆ ಮತವಿಷಯಕವಾದ ಪುಸ್ತಕಗಳೇ ಅಲ್ಲದೆ, ಎಣಿಸಲಾಗದಷ್ಟು ಹಲವು ಬಗೆಯ ಪುಸ್ತಕಗಳು ಪ್ರಕಟಿಸಲ್ಪಟ್ಟು ವು. ಇದರಿಂದ ಜನರೆಲ್ಲರೂ ಪುಸ್ತಕಗಳನ್ನೋದಿ ಜ್ಞಾನವನ್ನು ಅಭಿವೃದ್ಧಿ ಪಡಿಸಿಕೊಂಡರು. ಬೈಬಲ್ ಎಂಬ ಕ್ರಿಸ್ತರ ವೇದದ ಅಚ್ಚಾದ ಪ್ರತಿಗಳು ಸಾಮಾನ್ಯರಿಗೆಲ್ಲ ಸಿಕ್ಕಲು, ಅದನ್ನು ತಾವೇ ಓದಿ ಅರ್ಥಮಾಡಿ ಕೊಂಡು, ಅದುವರೆಗೂ, ರೋಮನ್ ಕ್ಯಾಥಲಿಕ್ ಜನರು ಹೇಳಿಕೊಡು. ತಿದ್ದ ರ್ಥವನ್ನು ನಿರಾಕರಿಸುತ್ತ ಬಂದರು. ಇದರಿಂದ ಯೂರೋಪಿನಲ್ಲಿ ಮತವಿಚಾರದಲ್ಲಿ ಬಹಳ ಬದಲಾವಣೆಗಳು ನಡೆದುವು. - ಅಚ್ಚು ಹಾಕುವುದು ಯೂರೋಪಿನಲ್ಲಿ ಮತವಿಷಯಕವಾದ ಜ್ಞಾನವನ್ನು