ಪುಟ:ಕಥಾ ಸಂಗ್ರಹ - ಭಾಗ ೨.djvu/೧೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

110 ಕಥಾಸಂಗ್ರಹ-೪ ನೆಯ ಭಾಗ ಗಿಯೂ ಇರುವ ಇವನನ್ನು ಇಲ್ಲಿಗಟ್ಟುವುದು ನಿಶ್ಚಯವೆಂದು ನಂಬುವುದು ಹೇಗೆ ? ಅಣ್ಣನು ವಿರೋಧಿಯಾಗಿದ್ದರೆ ಇವನು ಇಷ್ಟು ದಿನಗಳ ಪರ್ಯ೦ತರವೂ ಅವನಿಗೆ ವಿಧೇಯನಾಗಿದ್ದು ಈ ವೇಳೆಯಲ್ಲಿ ಮಾತ್ರ ನಮ್ಮ ಬಳಿಗೆ ಬರುವುದುಂಟೇ ? ನನ್ನ ಬುದ್ದಿಗೆ ಇದೇನೋ ಒ .ದು ಕಪಟಯುಕ್ತಿಯಾಗಿ ಕಾಣುತ್ತದೆ. ಪೂರ್ವದಲ್ಲಿ ಹುಲಿಯ ವೇಷದಿಂದ ಹಸುಗಳ ಮಂದೆಯನ್ನು ಹೊಕ್ಕು ಅವುಗಳನ್ನು ಸಂಹರಿಸಿ ನಿರ್ಮಲಮಾಡಿದ ಹಾಗೆ ಇವನು ಬಂದು ನಮ್ಮಲ್ಲಿ ಸೇರಿ ಕಡೆಗೆ ನಮ್ಮನ್ನು ವಂಚಿ ಸದೆ ಬಿಡನು. ಹಿಂದೆಲ್ಲಾ ಈ ರಾಕ್ಷಸರ ಮಾಯೆಯು ನಮ್ಮನ್ನು ಅಪಾರವಾದ ಕಷ್ಟಕ್ಕೂ ನಷ್ಟಕ್ಕೂ ಗುರಿಮಾಡಿರುವುದು ಅನುಭವಸಿದ್ದವಾಗಿದೆ. ಅದು ಕಾರಣ ಇವನನ್ನು ಖಂಡಿತವಾಗಿ ಸೇರಿಸಿಕೊಳ್ಳಕೂಡದು ಎಂದು ಹೇಳಿದನು. ಅದಕ್ಕೆ ಜಗದೇಕವೀರನಾದ ಶ್ರೀರಾಮಚಂದ್ರನು ಸುಗ್ರೀವನನ್ನು ನೋಡಿ ಎಲೈ ಪ್ರಿಯ ಸ್ನೇಹಿತನೇ, ನೀನು ನಮ್ಮಲ್ಲಿರುವ ಸ್ನೇಹಾತಿಶಯದಿಂದ ಹಿತಕಾ೦ಕ್ಷಿ ಯಾಗಿ ಇಂಥ ಯೋಚನೆಯನ್ನು ಹೇಳಿದುದು ಯುಕ್ತವೇ ಸರಿ. ಆದರೆ ಯುದ್ಧರಂಗ ದಲ್ಲಿ ಇದಿರಾದವರನ್ನು ಇರಿಯುವುದೂ ಮರೆಹೊಕ್ಕವರನ್ನು ಪರಿಪಾಲಿಸುವುದೂ ಧರ್ಮವನ್ನು ಕಾಪಾಡುವುದೂ ಅಧರ್ಮವನ್ನು ನಾಶಮಾಡುವದೂ ಅರಸುಗಳಿಗೆ ವಿಹಿತವಾದ ಧರ್ಮವು, ನಮಗೆ ಭುಜಬಲವಿಲ್ಲದಿದ್ದರೆ ಭಯಪಡಬೇಕು. ಕೀಳಾದ ಬಲವುಳ್ಳವರು ನಮ್ಮೊಳಹೊಕ್ಕು ನಮಗೇನು ತಾನೆ ಮಾಡಬಲ್ಲರು ? ಕತ್ತಲೆಯು ಮಧ್ಯಾನಾದಿತ್ಯನನ್ನು ಹೇಗೆ ಒಯಿಸಲಾರದೋ ಹಾಗೆ ಕಪಟವು ಸತ್ಯವನ್ನು ಎಂದಿಗೂ ಸೋಲಿಸಲಾರದು. ಇದಲ್ಲದೆ ನಮ್ಮ ಇಕ್ಷಾಕುವಂಶದಲ್ಲಿ ಹುಟ್ಟಿ ದವ ರಿಗೆ ಶರಣಾಗತರನ್ನು ರಕ್ಷಿಸುವುದೇ ಮುಖ್ಯವಾದ ಬಿರುದಾಗಿರುವದು, ಈ ವಿಷಯ ದಲ್ಲಿ ನಾನು ನಿನಗೆ ವಿಶೇಷವಾಗಿ ಹೇಳಬೇಕೆ ? ನೀನು ಈ ಸರ್ವ ವಿಷಯಗಳನ್ನೂ ತಿಳಿಯದವನೇ ? ತಮ್ಮ ಮರೆಹೊಕ್ಕವರನ್ನು ಕಾಪಾಡುವುದಕ್ಕಾಗಿ ತಮ್ಮ ಒಡಲನ್ನಾ ದರೂ ಈಯವ್ರದು ಲೋಕದಲ್ಲಿ ಉತ್ತಮ ಕ್ಷತ್ರಿಯರ ಧರ್ಮವ್ಯ. ಪೂರ್ವಕಾಲದಲ್ಲಿ ಪಾರಿವಾಳದ ಹಕ್ಕಿಯು ಮಳೆಯಿಂದ ನೆನೆದು ಕಂಗೆಟ್ಟು ತನ್ನ ಮನೆಗೆ ಬಂದ ಕಿರಾ ತನಿಗೆ ಕಟ್ಟಿಗೆಯನ್ನು ತಂದು ಅಗ್ನಿ ಯನ್ನು ಉರಿಮಾಡಿ ಅವನ ಚಳಿಯ ನಡುಕವನ್ನು ತಪ್ಪಿಸಿದುದಲ್ಲದೆ ಅವನಿಗೆ ತನ್ನ ದೇಹವನ್ನೇ ಆಹಾರಕ್ಕಾಗಿ ಕೊಟ್ಟ ಚರಿತ್ರೆಯನ್ನು ನೀನು ಕೇಳಿ ಅರಿಯೆಯಾ ? ಈ ಭಾಗದಲ್ಲಿ ನೀನು ಬದಲು ಯೋಚನೆಯನ್ನು ಮಾಡ ಬೇಡ, ಈ ವಿಭೀಷಣನು ಧರ್ಮಜ್ಞನಾದುದರಿಂದ ಇವನಣ್ಣನೂ ದುಷ್ಟನೂ ಆದ ರಾವಣನು ನಿಮ್ಮಣ್ಣನಾದ ವಾಲಿಯಂತೆ ದುರ್ಮಾರ್ಗಪ್ರವರ್ತಕನಾಗಿ ಪಾಪಕೃತ್ಯ ದಲ್ಲಿ ಉದ್ಯುಕ್ತನಾದುದರಿಂದಲೂ ನಾನು ವಾಲಿಯನ್ನು ಕೊಂದು ಸತ್ಪುರುಷನಾದ ನಿನಗೆ ರಾಜ್ಯಾಭಿಷೇಕವನ್ನು ಮಾಡಿದುದನ್ನು ಕೇಳಿದುದಲ್ಲದೆ ಈಗ ನಿನ್ನನ್ನು ಕಣ್ಣಾರ ಕಂಡುದರಿಂದಲೂ ತನ್ನಣ್ಣನನ್ನು ಕೊಂದು ತನಗೆ ಅ೦ಕಾರಾಜ್ಯಾಭಿಷೇಕವನ್ನು ನಾನು ಮಾಡುವೆನೆಂಬ ಮನೋನಿಶ್ಚಯವುಳ್ಳವನಾಗಿ ನಮ್ಮನ್ನು ಮರೆಹೊಗುವುದಕ್ಕೆ ಬಂದಿದ್ದಾನೆ. ಇದರಲ್ಲಿ ಲೇಶಮಾತ್ರವೂ ಸಂದೇಹವಿಲ್ಲವೆಂದು ಹೇಳಲು ; ಆಗ ವಿನೀ