ಪುಟ:ಕಥಾ ಸಂಗ್ರಹ - ಭಾಗ ೨.djvu/೨೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

252 ಕಥಾಸಂಗ್ರಹ-೫ ನೆಯ ಭಾಗ ನೀನು ಅದಿತಿಯ ಗರ್ಭಸಂಭೂತನಾಗಿ ಇಂದ್ರನೊಡನೆ ಸಹೋದರತ್ವವನ್ನು ಹೊಂದಿ. ಉಪೇಂದ್ರನೆನ್ನಿ ಸಿಕೊಂಡು ಪ್ರಸಿದ್ಧನಾಗಿರುವಿ. ಹೀಗಿರುವಲ್ಲಿ ಬಲಿಚಕ್ರವರ್ತಿಯು ಕಿತ್ತು ಕೊಂಡಿರುವ ಇಂದ್ರಪದವಿಯನ್ನು ತಿರಿಗಿ ಆತನಿಂದ ತೆಗೆದು ನಿನ್ನ ಪ್ರಿಯಸಹೋ' ದರನಾದ ಇಂದ್ರನಿಗೆ ಕೊಟ್ಟು ನಿನ್ನ ಅಪ್ಪಣೆಯು ನೆಲೆಯಾಗಿ ನಿಲ್ಲುವ ಹಾಗೆ ಮಾಡಿ ಕೊಳ್ಳುವವನಾಗು ಎಂದು ನಾನು ವಿಶೇಷವಾಗಿ ಹೇಳಿಕೊಳ್ಳಬೇಕೇ ? ಈ ಕಾರ್ಯವು ನಿನ್ನದಲ್ಲವೇ ? ಎಂದು ಬಹುತರವಾಗಿ ಬೇಡಿಕೊಂಡನು. ಆಗ ಮಹಾವಿಷ್ಣು ವು ಆತನಿಗೆ ಒಳ್ಳೆಯದೆಂದು ಅಭಯವನ್ನು ಕೊಟ್ಟು ಅಂತರ್ಧಾನನಾಗಿ ಕೂಡಲೆ ಅದಿ ತಿದೇವಿಯ ಗರ್ಭವನ್ನು ಹೊಕ್ಕನು, ಅನಂತರದಲ್ಲಿ ಅವನು ವಾಮನನಾಗಿ ಹುಟ್ಟಲು; ಕಶ್ಯಪನು ಮಹಾಸಂತೋಷದಿಂದ ಕೂಡಿದವನಾಗಿ ಅವನಿಗೆ ಶಾಸ್ಕೋಕವಿಧ್ಯನುಸಾ ರವಾಗಿ ಕ್ರಮದಿಂದ ಜಾತಕರ್ಮ ನಾಮಕರಣ ಉಪನಯನಾದಿಗಳನ್ನು ಮಾಡಿ ಆ ಮೇಲೆ ಅವನನ್ನು ಕುರಿತು ಎಲ್ಲೆ ಪುತ್ರನೇ, ನೀನು ಇನ್ನು ಮೇಲೆ ಮಾಡಬೇಕಾದ ಕಾರ್ಯವನ್ನು ನೆರವೇರಿಸು ಎಂದು ಹೇಳಲು; ಆಗ ವಾಮನನು ಮೌಂಜೆಯ ಉಡಿದಾ ರವನ್ನೂ ದಂಡಕೃಷ್ಣಾಜಿನಗಳನ್ನೂ ಧರಿಸಿ ಶ್ವೇತವಸ್ತ್ರದ್ವಯವನ್ನು ತೆಗೆದುಕೊಂಡು ಒಂದ ನ್ನು ಟ್ಟು ಇನ್ನೊಂದನ್ನು ಹೊಡೆದುಕೊಂಡು ಒಂದು ಚಿಕ್ಕ ಗಿಂಡಿಯನ್ನು ಕೈಯಲ್ಲಿ ಹಿಡಿ ದುಕೊಂಡು ಒಂದು ಗಜದ ಪ್ರಮಾಣವಾದ ಎತ್ತರವುಳ್ಳ ದೇಹವುಳ್ಳವನಾಗಿ ತಂದೆ ತಾಯಿಗಳಿಗೆ ನಮಸ್ಕರಿಸಿ ಅಲ್ಲಿಂದ ಬಲೀಂದ್ರನ ಬಳಿಗೆ ಹೋಗುವುದಕ್ಕೆ ಹೊರಟನು. ಅಷ್ಟರಲ್ಲಿ ಬಲಿಚಕ್ರವರ್ತಿಯು ತನ್ನ ಗುರುಗಳಾದ ಶುಕ್ರಾಚಾರ್ಯರನ್ನು ವರಿಸಿ ವೈಷ ವಯಾಗವನ್ನು ಮಾಡುತ್ತ ಹೋಮಾದಿನಿತ್ಯ ಕರ್ಮಗಳನ್ನು ನೆರವೇರಿಸಿ ಯಜ್ಞಶಾಲೆಯಲ್ಲಿ ಮಹಾಮುನಿಗಳೊಡನೆ ಕುಳಿತು ಎಷ್ಟು ಚರಿತ್ರೆಗಳನ್ನು ಕೇಳುತ್ತ ಭಯಭಕ್ತಿಯಿಂದ ಕೂಡಿದ ಹೃದಯ ದಲ್ಲಿ ವಿಷ್ಣುವನ್ನು ಪರಿಭಾವಿಸುತ್ತ ಸಾಲಕ್ಷೇ ಪವನ್ನು ಮಾಡುತ್ತಿದ್ದನು ಆ ಸಮಯದಲ್ಲಿ ಈ ವಾಮನನು ಅಲ್ಲಿಗೆ ಹೋಗಲು; ಬಲೀಂದ್ರನು ಆತನ ಅಮಾನುಷ ತೇಜಸ್ಸನ್ನು ನೋಡಿ ಭಯದಿಂದ ಝಗ್ಗನೆದ್ದು ಬಂದು ಸಾಷ್ಟಾ೦ಗನಮಸ್ಕಾರವನ್ನು ಮಾಡಿ ಕರೆದು ಕೊಂಡು ಬಂದು ಒಂದು ಮಣೆಯ ಮೇಲೆ ಕುಳ್ಳಿರಿಸಿ ವಿಧಿವತ್ತಾಗಿ ಸತಾರವನ್ನು ಮಾಡಿ ಕೈಮುಗಿದು ನಿಂತು ಕೊಂಡು ಎಲೈ ಮಹಾತ್ಮನೇ, ನಿನ್ನ ಬರುವಿಕೆಯು ಅಪೂರ್ವವು, ಮಹನೀಯನಾದ ನಿನ್ನ ಸಂದ ರ್ಶನದಿಂದ ನನ್ನ ಜನ್ಮವು ಸಾರ್ಥಕವಾಯಿತು. ಈ ನನ್ನ ಯಾಗವು ನಿರ್ವಿಘ್ನತೆಯಿಂದ ಸಂಪೂರ್ಣವಾಗಿ ಮುಗಿಯಿತು, ನಾನು ಕೃತಕೃತ್ಯನಾದೆನು ಎಂದು ಅನೇಕ ವಿಧ ವಾಗಿ ಸ್ತುತಿಸುತ್ತಿರಲು; ಆಗ ಶುಕ್ರಾಚಾರ್ಯನು ಬಂದು ಬಲೀಂದ್ರನ ಕಿವಿಯಲ್ಲಿ ಈತನು ಮಹಾಮಾಯಿಯಾದ ವಿಷ್ಣುವು ಈ ವಾಮನರೂಪವನ್ನು ಧರಿಸಿ ಕಾರ್ಯಾ೦ತರಾಪೇಕ್ಷೆಯಿಂದ ನಿನ್ನ ಬಳಿಗೆ ಬಂದಿದ್ದಾನೆ. ಅಂದರೆ, ಈತನು ನಿನ್ನಿಂದ ಈ ತ್ರಿಲೋಕಾಧಿಪತ್ಯವನ್ನು ತೆಗೆದು ತಿರಿಗಿ ಅದನ್ನು ಇಂದ್ರನಿಗೆ ಕೊಡಬೇಕೆಂಬ ಉದ್ದೇಶದಿಂದ ಬಂದಿದ್ದಾನೆ. ಅದು ಕಾರಣ ಇವನೇನನ್ನಾದರೂ ಕೇಳಿದರೆ ಕೊಡು ತೇನೆಂದು ಹೇಳಬೇಡ ಎಂದು ಹೇಳಲು; ಆಗ ಬಲೀಂದ್ರನು ಆತನನ್ನು ಕುರಿತು