ಪುಟ:ಕಥಾ ಸಂಗ್ರಹ - ಭಾಗ ೨.djvu/೨೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

230 ಕಥಾಸಂಗ್ರಹ-೫ ನೆಯ ಭಾಗ ನನ್ನು ಅವಲೋಕಿಸುತ್ತ ಚಿತ್ತೈಕಾಗ್ರತೆಯಿಂದ ಕೂಡಿ ಸಂಪೂರ್ಣಭಕ್ತಿಯುಕ್ತ ನಾಗಿ ಬ್ರಹ್ಮ ದೇವನನ್ನು ಕುರಿತು ಅನೇಕ ಸಹಸ್ರ ಸಂವತ್ಸರಗಳ ವರೆಗೂ ತಪಸ್ಸನ್ನು ಮಾಡುತ್ತಿರಲು ; ಆಗ ಅವನ ಮೈ ಸುತ್ತಲೂ ಹುತ್ತ ಬಿದಿರು ಬೆತ್ಯಗಳು ಬೆಳೆದು ಮುಚ್ಚಿಕೊಂಡುವು. ಅವನ ಗಡ್ಡ ಮಾಸೆಗಳು ಆಲದ ಬೀಳಲುಗಳು ನೆಲಕ್ಕಿಳಿಯು ವಂತೆ ಭೂಮಿಗಿಳಿದು ಬೇರುಹರಿದುವು. ಕಾಲು ಕೈಗಳ ಉಗುರುಗಳು ಬಹಳ ದೀರ್ಘವಾಗಿ ಬೆಳೆದುವು, ಗೆದ್ದಲು ಹುಳುಗಳು ಅವನ ಶರೀರದ ಚರ್ಮ ಮಾಂಸಗ ಳನ್ನು ತಿಂದುವು. ಆ ಮಹೋಗ್ರತಪೋದ್ಯುಕ್ತನಾದ ದೈತ್ಯನ ಶರೀರವು ಕೇವಲ ಅಸ್ಥಿಮಯವಾಗಿದ್ದಿತು. - ಅನಂತರದಲ್ಲಿ ಆ ಹಿರಣ್ಯಕಶಿಪುವಿನ ಉಗ್ರ ತಪೋಗ್ನಿ ಜ್ವಾಲೆಯು ಭುಗಿಲೆಂದುಬ್ಬಿ ನೆತ್ತಿ ಯನ್ನು ಭೇದಿಸಿಕೊಂಡು ಲೋಕಗಳನ್ನು ವಿನಾಶಮಾಡುವುದೋ ಎಂಬಂತೆ ಹೊರ ಹೊರಟಿತು. ಆಗ ಸಕಲಲೋಕಗಳವರೂ ಮಹಾಭಯದಿಂದ ಕಂಗೆಟ್ಟು ಕಳವಳ ಗೊಂಡು ಸರೋಜಸಂಭವನ ಬಳಿಗೆ ಓಡಿಹೋಗಿ ಸಾಷ್ಟಾಂಗಪ್ರಣತರಾಗಿ ಎದ್ದು ಕೈಮುಗಿದು ನಿಂತು-ಸ್ವಾಮಿಾ, ದಯಾಕರನೇ, ಯಾವನೋ ಒಬ್ಬನ ತಗ್ನಿ ಜ್ಞಾ ಲೆಯು ಬೆನ್ನಟ್ಟಿ ಬಂದು ಲೋಕದ ಪ್ರಜೆಗಳನ್ನೆಲ್ಲಾ ಸುಟ್ಟು ಕೊಲ್ಲುತ್ತಿದೆ. ನಮಗೆ ದಗಿರುವ ಇಂಥ ವಿಪತ್ಕಾಲದಲ್ಲಿ ಮಹಾತ್ಮನೂ ದಯಾಸಮುದ್ರನೂ ಆದ ನೀನು ಶರ ಣಾಗತರಾದ ನಮ್ಮನ್ನು ಕೃಪೆಯಿಂದ ಕಾಪಾಡಬೇಕೆಂದು ಬಹು ದೈನ್ಯದಿಂದ ಬೇಡಿ ಕೊಂಡರು. ಆಗ ಸರೋಜಸಂಭವನು ತನ್ನ ಜ್ಞಾನದೃಷ್ಟಿ ಯಿಂದ ತಪಸ್ಸನ್ನು ಮಾಡು ವವನು ತನ್ನ ಮೊಮ್ಮಗನಾದ ಹಿರಣ್ಯಕಶಿಪುವೆಂದು ತಿಳಿದು ಆ ಜಗಜ್ಜನರನ್ನು ಕುರಿತು-ನೀವು ಭಯ ಪಡಬೇಡಿರಿ, ಆತನು ನನ್ನ ಮೊಮ್ಮಗನು, ನಾನು ಈ ಕೂಡಲೆ ಹೋಗಿ ಆತನ ಅಭೀಷ್ಟಾರ್ಥವನ್ನು ಕೊಟ್ಟು ಎಬ್ಬಿಸಿ ಕಳುಹಿಸುವೆನೆಂದು ಹೇಳಿ ಕಳು ಹಿಸಿ ತರುವಾಯ ತಾನು ತನ್ನ ವಾಹನವಾದ ಹಂಸೆಯನ್ನೇರಿಕೊಂಡು ಹಿರಣ್ಯಕಶಿಪುವು ತಪಸ್ಸು ಮಾಡುವ ಸ್ಥಳಕ್ಕೆ ಬಂದು ಅಸ್ಥಿ ಪಂಜರ ಮಾತ್ರವಾಗಿರುವ ಆತನನ್ನು ನೋಡಿ ಈ ರೀತಿಯಾಗಿ ಕಾಯ ಕ್ಷೇಶವನ್ನು ಸಹಿಸಿಕೊಂಡು ಉಗ್ರ ತಪಸ್ಸನ್ನು ಮಾಡಿದವರು ಈ ವರೆಗೂ ಯಾರೂ ಇಲ್ಲವೆಂದು ಮೆಚ್ಚಿ ತನ್ನ ಕೈಯಲ್ಲಿದ್ದ ಕಮಂಡಲದ ಮಂತ್ರೋ ದಕವನ್ನು ತೆಗೆದು ಅವನ ಮೇಲೆ ಚಿಮುಕಿಸಲು ; ಆಗಲಾ ಹಿರಣ್ಯಕಶಿಪುವು ತನ್ನ ಸುತ್ತಲೂ ಬೆಳೆದಿದ್ದ ಹುತ್ತ ಬಿದಿರ್ಬೆತ್ತಗಳನ್ನು ಒಡೆದು ಕೊಂಡು ಹೊರಗೆ ಹೊರಟು ಬಂದು ಸಮಿಾಪದಲ್ಲಿ ನಿಂತಿರುವ ಸರೋಜಸಂಭವನನ್ನು ನೋಡಿ ಬಹಳ ಸಂತೋಷ ಯುಕ್ತಮನಸ್ಕನಾಗಿ ಆತನ ಪಾದಗಳನ್ನು ಮುಟ್ಟಿ ನಮಸ್ಕರಿಸಿ ಹಾಗೆಯೇ ಭೂಮಿ ಯಲ್ಲಿ ಬಿದ್ದಿರಲು; ಆಗ ಸಂತುಷ್ಟನಾದ ವಾಣೀಮನೋವಲ್ಲಭನು-ಏಳು! ಕ೦ದನೇ, ಏಳು ! ಇನ್ನು ಮೇಲೆ ನಿನ್ನ ಉಗ್ರ ತಪಸ್ಸು ಸಾಕು ಏಳು ! ಬಹುಕಾಲದಿಂದ ಬಹಳಾ ಯಾಸಪಟ್ಟುದು ಸಾಲದೇ ? ನಿನ್ನ ಮನೋರಥವಾವುದು ? ಕೇಳು, ಈಗಲೇ ಅದನ್ನು ಕೊಡುವೆನು ಎನ್ನಲು; ಆಗ ಹಿರಣ್ಯಕಶಿಪುವು ಬೇಗನೆದ್ದು ಕೈಮುಗಿದು ನಿಂತುಕೊಂಡು -ಎಲೈ ಪಿತಾಮಹನೇ, ಸುರನರೋರಗಯಕ್ಷರಾಕ್ಷಸರಿಂದಲೂ ವಿವಿಧವಾದ ಮೃಗಗ