ಪುಟ:ಕಥಾ ಸಂಗ್ರಹ - ಭಾಗ ೨.djvu/೧೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

126 ಕಥಾಸಂಗ್ರಹ-೪ ನೆಯ ಭಾಗ ಅಂಬುಗಳನ್ನು ಕತ್ತರಿಸಿ ಹೊರಟು ಅವನ ಸರ್ವಾಂಗಗಳಲ್ಲೂ ಹೊಕ್ಕು ರಕ್ತ ಪ್ರವಾಹ ವನ್ನು ಹರಿಸಿ ಅರಿವೀರನ ರಥಾಶ್ವಗಳಿಂದ ರಕ್ತವನ್ನು ಕಾರಿಸಿ ಸಕಲ ದಿಕ್ಕುಗಳಲ್ಲೂ ವ್ಯಾಪಿಸಿಕೊಂಡು ಅವನ ಛತ್ರಚಾಮರ ಸೀಗುರಿ ಪತಾಕೆ ಇವುಗಳನ್ನು ಕಡಿದು ಕೆಡಹಿದುವು. ಅದನ್ನು ನೋಡಿ ರಾವಣಿಯು ತಲೆಯನ್ನು ತೂಗಿ-ಅಮ್ಮಾ ! ಈ ಧನು ರ್ವಿದ್ಯಾ ಪ್ರೌಢಿಮೆಯು ಮರು ಕಣ್ಣುಗಳುಳ್ಳ ಪರಮೇಶ್ವರನಿಗೂ ಇಲ್ಲ, ಈತನು ಲೋಕದವರಂತೆ ಸಾಧಾರಣನಾದ ಮನು ಜನಲ್ಲ. ಮಹಾ ವಿಷ್ಣುವೇ ಶ್ರೀರಾಮನಾಗಿ ಹುಟ್ಟಿರುವನೆಂದು ಜನರು ಹೇಳುತ್ತಿರುವುದು ನಿಜವೇ ಸರಿ, ಹಾಗಲ್ಲ ದಿದ್ದರೆ ಲೋಕಾಶ್ ರ್ಯಕರವಾದ ಈ ಬಾಣಪ್ರಯೋಗ ಕೌಶಲ್ಯವು ಈತನಿಗೆತ್ತಣಿಂದ ಬರುತ್ತಿದ್ದಿತು ? ಎಂದು ಯೋಚಿಸುತ್ತ ತಾನು ಮೊದಲು ಶಿವನಿಂದ ಪಡೆದಿದ್ದ ಸರ್ಪಾಸ್ತ್ರವನ್ನು ಮೂಡಿ ಗೆಯಿಂದ ತೆಗೆದು ತಿರುವಿನಲ್ಲಿ ಹೂಡಿ ಆಕರ್ಣಾ೦ತವಾಗಿ ಸೇದಿ ರಾಮನ ಮೇಲ ರಾಮನ ಬಲದ ಮೇಲೂ ಪ್ರಯೋಗಿಸಲು ; ಕೂಡಲೆ ಎಂಟು ವಿಧವಾದ ಹಾವುಗಳ ತಂಡಗಳು ಕಪಿಬಲವನ್ನೂ ರಾಮಲಕ್ಷ್ಮಣರನ್ನೂ ಮುತ್ತಿಕೊಂಡು ವಿಷದಂತಗಳಿಂದ ಕಚಿ ಕವರಿ ಗರಳಹ್ವಾಲೆಗಳಿಂದ ಕಪಿಬಲಗಳನ್ನೆಲ್ಲಾ ಮರ್ಛಗೊಳಿಸಿ ರಾಮಲಕ್ಷ್ಯ ಣರನ್ನೂ ಕೂಡ ಮರ್ಧೆಹೊಂದಿಸಿದುವು. ಆ ಮೇಲೆ ಇಂದ್ರಜಿತ್ತು ಬಹು ಸಂತೋ ಷಭರಿತಮನಸ್ಕನಾಗಿ ಜಯಭೇರಿಯನ್ನು ಹೊಡಸಿಕೊಂಡು ಹಿಂದಿರುಗಿ ಲಂಕಾನಗರಕ್ಕೆ ಹೋಗಿ ತಂದೆಯಾದ ದಶಗಳನಿಗೆ ನಮಸ್ಕರಿಸಿ ತನ್ನ ವಿಜಯ ವಾರ್ತೆಯನ್ನು ಹೇಳಲು ; ರಾವಣನು ಸಂತೋಷವೆಂಬ ಸುಧಾಸಾಗರದಲ್ಲಿ ಮುಳುಗಿ ಇಂದ್ರಜಿತ್ತನ್ನು ತೆಗೆದು ಆಲಿಂಗಿಸಿಕೊಂಡು ಕುಲರತ್ನ ವೇ, ಮುತ್ತಿನ ಗಿಣಿಯೇ ಎಂದು ಹೊಗಳಿ ಮುತ್ತಿಟ್ಟನು. ಇತ್ತ ಕಪಿಬಲದ ಮಧ್ಯದಲ್ಲಿ ಸುಗ್ರೀವ ನೀಲ ನಳ ಜಾಂಬವದಾಂಜನೇಯಾದಿ ಗಳು ಮೂರ್ಛಿತರಾಗಿ ಬಿದ್ದಿರುವ ರಾಮಲಕ್ಷ್ಮಣರನ್ನು ನೋಡಿ ಮರುಗಿದವರಾಗಿ ಅಯ್ಯೋ! ಮಹಾನುಭಾವರೇ, ನಮ್ಮನ್ನು ನಂಬಿ ನಿಮಗೆ ಇಂಥಾ ದುಃಸ್ಥಿತಿಯು ಸಂಭ ವಿಸಿತೇ ? ಹಾ ! ಎಂದು ಹಂಬಲಿಸಿ ಕಣ್ಣೀರುಗಳನ್ನು ಸುರಿಸುತ್ತ ರಾಮಲಕ್ಷ್ಯ ಣರ ಸುತ್ತಲೂ ಕುಳಿತಿರಲು ; ಆಗ ಜಾಂಬವಂತನು ಸುಷೇಣನನ್ನು ನೋಡಿ-ಎಲೆ ಕಪೀಂದ್ರನೇ, ನಿನಗೆ ವೈದ್ಯಶಾಸ್ತ್ರದಲ್ಲಿ ವಿಶೇಷ ಪರಿಚಯವುಂಟಲ್ಲ ? ದೇವೇಂದ್ರನ ಮನೆಯ ವೈದ್ಯನಾದ ಧನ್ವಂತರಿಯು ನಿನಗೆ ತಂದೆಯಾಗಬೇಕಷ್ಟೆ, ಈ ರಾಮಲಕ್ಷ್ಯ ಣರನ್ನು ನೋಡು ಎನ್ನಲು ; ಸುಷೇಣನು ಬಂದು ರಾಮಲಕ್ಷ್ಮಣರನ್ನು ನೋಡಿ ಜಾಂಬವಂತನನ್ನು ಕುರಿತು-ಬಡಗಣ ದಿಕ್ಕಿನಲ್ಲಿರುವ ಮೇರುಪರ್ವತದ ಮಾರ್ಗದಲ್ಲಿ ಹರಿದಶ್ವವೆಂಬೊಂದು ಗಿರಿಯಿರುವುದು, ಅದರ ಶಿಖರದಲ್ಲಿ ನಾಲ್ಕು ವಿಧಗಳಾದ ಓಷ ಧಿಗಳಿರುವುವು, ಯಾರಾದರೂ ಬೇಗ ಹೋಗಿ ಅವುಗಳನ್ನು ಇಲ್ಲಿಗೆ ತೆಗೆದುಕೊಂಡು ಬಂದರೆ ನೀವೇ ನಿಶಾಚರರ ಪಡೆಯನ್ನು ತಿಂದು ತೇಗಿದವರು, ವಿರೋಧಿಯಾದ ರಾವ ಣನನ್ನು ಕೊಂದವರು, ಮತ್ತು ಶರಣಾಗತನಾದ ವಿಭೀಷಣನಿಗೆ ಲ೦ಕಾರಾಜ್ಯಾಭಿಷೇ ಕವನ್ನು ಮಾಡಿಸಿದವರು, ಇದರಲ್ಲಿ ಸಂಶಯವೇನೂ ಇಲ್ಲ ಎಂದು ಹೇಳಲು ;