ಪುಟ:ಕಥಾ ಸಂಗ್ರಹ - ಭಾಗ ೨.djvu/೨೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

256 ಕಥಾಸಂಗ್ರಹ-೫ ನೆಯ ಭಾಗ ಕೊಳ್ಳುವ ದುಷ್ಟ ಸೇವಕನಿಗೆ ಅವನ ಕೊಬ್ಬಡಗುವಂತೆ ಶಿಕ್ಷೆಮಾಡಿ ವಿಧೇಯತೆಯಿಂದ ನಡೆದು ತನಗೂ ತನ್ನ ಸ್ವಾಮಿಗೂ ಮೇಲನ್ನುಂಟು ಮಾಡಿಕೊಳ್ಳುವಂತೆ ಮಾಡಿಕೊಂಡು ತಿರಿಗಿ ತನ್ನಲ್ಲಿ ಸೇರಿಕೊಂಡರೆ ಪ್ರಭುತ್ವವು ಚೆನ್ನಾಗಿ ನಡೆದು ರಾಜಪ್ರಜಾಸುಖಸಮ್ಮತಿ ಗಳುಂಟಾಗುವುವು. ಹಾಗೆ ಮಾಡದೆ ಔದಾಸೀನ್ಯದಿಂದಿದ್ದರೆ ಆತನ ಪ್ರಭುತ್ವವೇ ಕ್ಷೀಣವಾಗಿ ಹೋಗುವುದು ಎಂದು ತನ್ನ ಮನಸ್ಸಿನಲ್ಲಿ ಆಲೋಚಿಸಿ ನಿಶ್ಚಯಿಸಿ ಆ ಸುದರ್ಶನವನ್ನು ಕುರಿತು- ಎಲೈ ಮಹಾಬಲಸಂಪನ್ನನಾದ ಚಕ್ರರಾಜನೇ, ನಾನು ಸಮಸ್ತ ದೈತ್ಯರನ್ನೂ ಸಂಹರಿಸುವುದು ನಿನ್ನ ಶಕ್ತಿಯಿಂದಲೋ ? ಅಥವಾ ನನ್ನ ಶಕ್ತಿ ಯಿಂದಲೋ ? ಎಂದು ನನ್ನ ಮನಸ್ಸಿನಲ್ಲಿ ಒಂದು ವಿಧವಾದ ಸಂಶಯವುಂಟಾಗಿದೆ. ಅದು ಕಾರಣ ಈ ವಿಷಯವನ್ನು ಪರೀಕ್ಷಿಸಿ ತಿಳಿದುಕೊಳ್ಳಬೇಕೆಂದು ನನಗೆ ಸಂಪೂರ್ಣ ಕುತೂಹಲವುಂಟು. ಆದುದರಿಂದ ನೀನು ನಿನ್ನ ಸಾವಿರ ಅರಗಳನ್ನೂ ಸಾವಿರ ತೋಳು ಗಳನ್ನಾಗಿ ಮಾಡಿಕೊಂಡು ಹೇಹಯ ದೇಶದ ಅರಸಾದ ಕೃತವೀರ್ಯನ ಪಟ್ಟದರಸಿಯ ಗರ್ಭದಲ್ಲಿ ಜನಿಸಿ ಲೋಕದಲ್ಲಿ ಮಹಾ ಪರಾಕ್ರಮಶಾಲಿಯಾಗಿ ಚಕ್ರವರ್ತಿಯೆನ್ನಿಸಿ ಕೊಂಡು ಮಹೋನ್ನತನಾಗಿ ಕ್ಷತ್ರಿಯ ಸಾರ್ವಭೌಮನೆನ್ನಿಸಿಕೊಂಡು ಸುಖದಿಂದಿರು. ಅನಂತರದಲ್ಲಿ ನಾನು ಎರಡು ತೋಳುಗಳಿಂದ ಒಬ್ಬ ಮುನಿಗೆ ಮಗನಾಗಿ ಹುಟ್ಟಿ ಯಾವುದೋ ಒಂದು ಕಾರಣದಿಂದ ನಿನ್ನೊಡನೆ ವಿರೋಧವನ್ನು ಬೆಳೆಸಿ ಯುದ್ದ ಕೈ ಬರುವೆನು, ಆ ಯುದ್ದ ರಂಗದಲ್ಲಿ ಹೆಣಗುವ ನಮ್ಮಿಬ್ಬರಲ್ಲಿ ಯಾರಿಗೆ ಜಯವುಂಟಾಗು ವುದೆ ಆತನೇ ಶಕ್ತನೆಂದು ತಿಳಿಯಬರುವುದು. ಆಗ ನನ್ನ ಮನಸ್ಸಿನ ಸಂಶಯವ ನಿವಾರಣೆಯಾಗಿ ಸಮಾಧಾನವುಂಟಾಗುವುದೆಂದು ಹೇಳಿದನು ಆ ಮಾತುಗಳನ್ನು ಕೇಳಿ ಚಕ್ರರಾಜನು ನನ್ನ ಯೋಚನೆಯಂತೆಯೇ ಈತನೂ ಹೇಳಿದನೆಂದು ಬಹಳವಾಗಿ ಸಂತೋಷಿಸಿ ಹೆಮ್ಮೆಯಿಂದ ಕೂಡಿ ವಿಷ್ಣುವಿನೊಡನೆ ಹಾಗೆಯೇ ಆಗಲೆಂದು ಹೇಳಿ ವೈಕುಂಠದಿಂದ ಹೊರಟು ಮಾಹಿಷ್ಮತೀನಗರದ ಅರಸ ನಾದ ಕೃತವೀರ್ಯನ ಧರ್ಮಪತ್ನಿ ಯ ಗರ್ಭವನ್ನು ಪ್ರವೇಶಿಸಿ ತರುವಾಯ ಸಾವಿರ ತೋಳುಗಳುಳ್ಳ ಮಗನಾಗಿ ಹುಟ್ಟಿ ಕಾರ್ತವೀರ್ಯಾರ್ಜುನನೆಂಬ ಪ್ರಖ್ಯಾತಿಯನ್ನು ಹೊಂದಿ ಸಕಲ ವಿದ್ಯಾಬುದ್ದಿ ಗಳನ್ನೂ ಕಲಿತು ಪ್ರಾಯದವನಾಗಿ ತಂದೆಯ ಅಪ್ಪಣೆ ಯನ್ನು ತೆಗೆದು ಕೊಂಡು ಹೊರಟು ಸಕಲದಿದ್ದೇಶಗಳನ್ನೂ ಇಂದ್ರಾದಿ ದಿಕ್ಷಾಲಕ ರನ್ನೂ ಯುದ್ದ ರಂಗದಲ್ಲಿ ಜಯಿಸಿ ಅವರೆಲ್ಲರಿಂದ ಕಪ್ಪಗಳನ್ನು ತೆಗೆದು ಕೊಂಡು ನಿರ್ವೈ ರಿಯಾಗಿ ತಿರಿಗಿ ತನ್ನ ಪಟ್ಟಣಕ್ಕೆ ಬಂದು ತಂದೆಗೆ ನಮಸ್ಕರಿಸಿ ತಾನು ಹೋದಂದಿನಿಂದ ನಡೆದ ಸಕಲ ವೃತ್ತಾಂತವನ್ನೂ ಆತನಿಗೆ ತಿಳಿಸಲು ; ಆಗ ಆತನು ಮಹಾಸಂತೋಷ ದಿಂದ ಕೂಡಿದವನಾಗಿ ಕಾರ್ತವೀರ್ಯಾರ್ಜುನನನ್ನು ತೆಗೆದು ಆಲಿಂಗಿಸಿಕೊಂಡು ಆನಂದ ಪಟ್ಟನು. ಅನಂತರದಲ್ಲಿ ಕೃತವೀರ್ಯನು ತನ್ನ ಮಗನಿಗೆ ಹೇಹಯರಾಜ್ಯಾಭಿಷೇಕ ವನ್ನು ಮಾಡಿ ತಾನು ತನ್ನ ಧರ್ಮಪತ್ನಿಯೊಡನೆ ಕೂಡಿ ಪುಣ್ಯಾರಣ್ಯವನ್ನು ಕುರಿತು ತಪಸ್ಸಿಗೆ ಹೊರಟು ಹೋದನು, ಆ ಮೇಲೆ ಕಾರ್ತವೀರ್ಯಾರ್ಜುನನು ಕೃತಯುಗಕ್ಕೆ ಚಕ್ರವರ್ತಿಯೆನ್ನಿಸಿಕೊಂಡು ಜಗದೇಕವೀರನಾದ ರಾವಣಾಸುರನನ್ನು ಜಯಿಸಿ ಲೋಕೈಕ ವಿಖ್ಯಾತನಾಗಿದ್ದನು.