ಪುಟ:ಕಥಾ ಸಂಗ್ರಹ - ಭಾಗ ೨.djvu/೧೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕುಂಭಕರ್ಣಸಂಹಾರ 123 ರಾಕ್ಷಸ ಕುಲರಕ್ಷಕನೇ, ನಮ್ಮಲ್ಲಿರುವ ಈ ಸೀತೆಯ ಗಂಡನಾದ ರಾಮನು ನಳನೆಂಬ ಕಪಿವೀರನಿಂದ ಉತ್ತರಸಮುದ್ರದಲ್ಲಿ ದಶಯೋಜನಗಳ ಅಗಲವೂ ಶತಯೋಜನಗಳ ಉದ್ದವೂ ಉಳ್ಳ ಸೇತುವನ್ನು ಕಟ್ಟಿಸಿ ಅಸಂಖ್ಯಾ ತಕ ಸಿಬಲಸಮೇತನಾಗಿ ಸಮುದ್ರ ವನ್ನು ದಾಟಿಬಂದು ಈ ನಮ್ಮ ಲಂಕಾದುರ್ಗದ ಒತ್ತಿನಲ್ಲಿರುವ ಸುವೇಲಾಚಲದಲ್ಲಿ ಪಾಳಯವನ್ನು ಬಿಡಿಸಿಕೊಂಡಿಳಿದಿದ್ದಾನೆ. ಆ ಕಪಿಬಲವನ್ನು ವರ್ಣಿಸಿ ಹೇಳುವುದಕ್ಕೆ ಎರಡು ಸಾವಿರ ನಾಲಿಗೆಗಳುಳ್ಳ ಆದಿಶೇಷನಂಥವರು ಎಷ್ಟು ಜನರಾದರೂ ಸಾಲದು. ಕಪಿಗಳ ಶರೀರಗಳೋ, ಮಹಾ ಪರ್ವತಗಳೊ ಎಂದು ಥಟ್ಟನೆ ವಿವರಿಸಿಹೇಳುವುದು ಅಸಾಧ್ಯವು, ಉಳಿದ ಸಂಗತಿಗಳನ್ನೆಲ್ಲಾ ಸೀನೇ ಪ್ರತ್ಯಕ್ಷವಾಗಿ ನೋಡಿ ತಿಳಿಯಬಹು ದೆಂದು ಹೇಳಿದರು, ಆಗ ರಾವಣನು ಮನಸ್ಸಿನಲ್ಲಿ ಬಹಳವಾಗಿ ಆತಂಕಪಟ್ಟು ಕೂಡಲೆ ತನ್ನ ಸರ್ವಸೇನಾನಾಯಕನಾದ ಪ್ರಹಸ್ತನನ್ನು ಅನೇಕ ಚತುರಂಗಬಲದೊಡನೆ ಅ೦ಕಾ ನಗರದ ಪೂರ್ವ ದಿಗ್ವಾರದಲ್ಲಿಯ ದೇವಾಂತಕ ನರಾಂತಕ ತ್ರಿಶಿರ ಅತಿಕಾಯ ಕುಂಭ ನಿಕುಂಭ ಮಕರಾಕ್ಷರೇ ಮೊದಲಾದ ತನ್ನ ಮಕ್ಕಳನ್ನು ಅಪರಿಮಿತಶೂರಸೇನೆ ಯೊಡನೆ ದಕ್ಷಿಣದಿಕ್ಕಿನ ಹೆಬ್ಬಾಗಿಲಲ್ಲಿಯ ಶೂರಾಗ್ರೇಸರನಾದ ಇಂದ್ರಜಿತ್ತನ್ನು ಗಣನಾತೀತವಾದ ಮಹಾಬಲದೊಡನೆ ಲಂಕಾಪುರಿಯ ಪಡುವಣದೆಸೆಯ ಬಾಗಿಲಿ ನಲ್ಲಿಯ ಎಚ ರಿಕೆಯಿಂದಿರುವಂತೆ ಕಾವಲಿರಿಸಿ ತಾನು ಬಹುಜನ ಕಾಕ ಸವೀರರೊಡನೆ ಕೂಡಿ ಹೊರಟುಬಂದು ಉತ್ತರದಿಗಾರಪ್ರದೇಶದಲ್ಲಿ ಸನ್ನದ್ಧನಾಗಿ ನಿಂತು ದೂತರನ್ನು ಕರೆದುಬಿಟ್ಟಿ ಹೆಂಡತಿಯನ್ನು ಆಳುವುದಕ್ಕಾಗಿ ಕಪಿಬಲದೊಡನೆ ಬಂದಿರುವ ರಾಮ ನನ್ನು ತಡಮಾಡದೆ ಯುದ್ಧಕ್ಕೆ ಕರೆದು ತರಬೇಕೆಂದು ನೇಮಿಸಿ, ಕಳುಹಿಸಲು ; ಅವರು ಶೀಘ್ರವಾಗಿ ರಾಮನ ಬಳಿಗೆ ಬಂದು ರಾವಣನು ಹೇಳಿದ ಸಂಗತಿಯನ್ನು ಯಥಾ ವತ್ತಾಗಿ ಹೇಳಲು ; ಆಗ ರಾಮನು ಒಳ್ಳೆಯದು, ಈಗಲೇ ಹೊರಟು ಬರುತ್ತಿ ದೇವೆ. ನೀವು ಹೋಗಿ ಈ ಸಂಗತಿಯನ್ನು ನಿಮ್ಮೊಡೆಯನಿಗೆ ತಿಳಿಸಿರೆಂದು ಹೇಳಿ ಕಳುಹಿಸಿ, ಆ ರಾವಣನು ಲಂಕಾದುರ್ಗದ ಚತುದ್ರ್ರಾರಗಳಲ್ಲೂ ರಕ್ಷಣಾರ್ಥವಾಗಿ ಪ್ರಹಸ್ತಾದಿ ಗಳನ್ನು ನೇಮಿಸಿರುವ ವೃತ್ತಾಂತವನ್ನು ಶ್ರೀರಾಮನು ಕೇಳಿ ಅದಕ್ಕೆ ಪ್ರತಿಯಾಗಿ ಪ್ರಹಸ್ತನನ್ನು ಪ್ರತಿಭಟಿಸುವುದಕ್ಕೆ ತನ್ನ ಸರ್ವಸೇನಾಪತಿಯಾದ ನೀಲನನ್ನೂ ದೇವಾಂತ ಕಾದಿನಿಶಾಚರರನ್ನು ತಡೆಯುವುದಕ್ಕೆ ಯುವರಾಜನಾದ ಅಂಗದನನ್ನೂ ಇಂದ್ರ ಜಿನ್ನು ಎದುರಿಸುವುದಕ್ಕಾಗಿ ಪರಾಕ್ರಮಶಾಲಿಯಾದ ಲಕ್ಷ್ಮಣನನ್ನೂ ನೇಮಿಸಿ ರಾವಣನಿಗೆ ಪ್ರತಿಯಾಗಿ ತಾನೇ ನಿಂತು ಲಂಕಾದುರ್ಗವನ್ನು ಅಗ್ಗೆ ಹತ್ತುವ ಹಾಗೆ ಸುಗ್ರೀವನಿಗೆ ಅಪ್ಪಣೆಕೊಡಲು ; ಸುಗ್ರೀವನು ಶೀಘ್ರವಾಗಿ ಸಕಲಸೇನೆಯೊಡನೆ ಕೂಡಿ ಹೊರಟು ಬಂದು ಲಂಕಾದುರ್ಗಕ್ಕೆ ಮುತ್ತಿಗೆಯನ್ನು ಹಾಕಿದನು. ಆಗ ರಾವಣನ ಅಪ್ಪಣೆಯಿ೦ದ ರಾಕ್ಷ ಸಬಲವು ಹೊರಟು ಬಂದು ಕಪಿಬಲದ ಮೇಲೆ ಬೀಳಲು ; ಕೂಡಲೆ ಕಪಿರಾಕ್ಷಸವೀರರಿಗೆ ಬಹಳ ಯುದ್ದ ಗಳಾಗಿ ರಾಕ್ಷಸನ ತಾಕಿನಿಯಲ್ಲೂ ಕಪಿಬಲದಲ್ಲೂ ಅನೇಕ ಕಪಿರಾಕ್ಷಸವೀರರು ಮಡಿದರು, ಮತ್ತು ರಾಕ್ಷಸಾನೀಕಿನಿಯಲ್ಲಿ ಬಹುಗಜಸಮುದಾಯವೂ ಅಶ್ವನಿಕರವೂ ರಥಸಂದೋಹವೂ