ಪುಟ:Abhaya.pdf/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಆ ಸ್ವರ ಯಾರದೋ ತುಂಗಮ್ಮನಿಗೆ ತಿಳಿಯಲ್ಲಿಲ. ಆದರೂ ಆಕೆ

ಧಿಗ್ಗನೆದ್ದಳು ಓದುತಿದ್ದ ಪುಟಸಂಖ್ಯೆಯನ್ನೊಮ್ಮೆ ನೋಡಿ ಪುಸ್ತಕ ಮುಚ್ಚಿಟ್ಟು ಬಾಗಿಲ ಬಳಿಗೆ ಬಂದಳು.

ಆಕೆ ಬರುತಿದ್ದಾಗಲೆ ಮೂರನೆಯ ಬಾರಿ ಟಕ್ ಟಕ್ ಬಾಗಿಲಸದ್ದಾ

ಯಿತು.ಆ ಅಸಹನೆ ತುಂಗಮ್ಮನಿಗೆ ಸೋಜಿಗವೆನಿಸದಿರಲಿಲ್ಲ.

....ತೆರೆದ ಬಾಗಿಲಿಗೇ ಆತುಕೊಂಡು ಆಕೆ ನಿಂತಳು....ಸೊಗಸಾದ

ಪೋಷಾಕು. ತೀಡಿ ತಿದ್ದಿದ ಕ್ರಾಪು ಇದ್ದ ಸೌಂದರ್ಯಕ್ಕೇ ಒಪ್ಪವಿಟ್ಟದ್ದ ಯೌವನ...

ಆತ--ನಾರಾಯಣ ಮೂರ್ತಿ--ಮುಗುಳುನಗುತಿದ್ದ.

ತುಂಗಮ್ಮನ ಮುಖ ಲಜ್ಜೆಯಿಂದ ಕೆಂವೇರಿತು. ಕಣ್ಣಿಗೆ ಕತ್ತಲು

ಕವಿದ ಹಾಗಾಯಿತು ಕ್ಷಣಕಾಲ. ಇದು ನೆನಸೆ ಕನಸೆ ಎಂಬ ಭ್ರಮೆಯೂ ಆಯಿತು.

ನಾರಾಯಣ ಮೂರ್ತಿ ತುಂಗನಮ್ಮನನ್ನೆ ಬೆರಗು ದೃಷ್ಟಿಯಿಂದ

ನೋಡುತಿದ್ದ.

ಒಳಕ್ಕೆ ಬನ್ನಿ-ಎನ್ನ ಬೇಕೆಂದು ತುಂಗಮ್ಮನಿಗೆ ತೋರಿತು ಆದರೆ

ಮಾತು ಹೊರಡಲಿಲ್ಲ.

ಬೆಳೆದು ನಿಂತಿದ್ದ ತುಂಗಮ್ಮ ಆತನ ಕಣ್ಣಿಗೆ

ಹಬ್ಬವಾಗಿರಬೇಕು.ತಲೆಯನ್ನೊಮ್ಮೆ ಮಾಟವಾಗಿ ಕೊಂಕಿಸಿ,ತುಟಯಲುಗಿಸಿ,ಕಣ್ಣು ಮಿಟುಕಿಸಿ ನಾರಾಯಣ ಮೂರ್ತಿ ಕೇಳಿದ:

"ಮನೇಲಿ ಯಾರೂ ಇಲ್ವೆ?"

"ಇಲ್ಲ"

--ಎಂದಳು ತುಂಗಮ್ಮ ತಟಕ್ಕನೆ.

"ಎಷ್ಟೊತ್ತಾಗುತ್ತೆ ಬರೋದು?"

"ಎಷ್ಟೊತ್ತಾಗುತ್ತೊ?"

"ಚೆನ್ನಾಗಿದೀರಾ?"

"ಹೂಂ...ಹೀಗಿದೀಏ..ಬನ್ನಿ...!"

ಆಕೆಯ ಮನಸ್ಸಿನ ಒಂದು ಭಾಗ ಕೇಳುತಿತ್ತು:ಅವಮಾನಿಸಿ ಬೈದು