ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

** ಮಾಡಿದ್ದುಣೋ ಮಹಾರಾಯ, ದೇವನಮೇಲೆ ಲೋಕದಲ್ಲಿ ಬಲತಾಯಿಗಳಿಗೆ ಇರತಕ್ಕ ಅನೂ ಯೆ ಏನೂ ಇರಲಿಲ್ಲ. ಈ ಹುಡುಗನು ಕೆಂಪಗೆ ಬಹಳ ಅಕ್ಷ ಣವಾಗಿದ್ದನು. ಅಂಗಾಂಗಗಳೆಲ್ಲಾ ಪ್ರಮಾಣಕ್ಕೆ ಸರಿಯಾಗಿ ವು, ಮುಖ ಸುಂದರವಾಗಿತ್ತು. ಜುಟ್ಟು ಉದ್ದವಾಗಿತ್ತು. ಯಾವಾಗಲೂ ದುವಾಗಿಯೇ ಕಾಣುತಿದ್ದನು. ಯಾರು ನೋಡಿದರೂ ಬಹಳ ಬುದ್ದಿಶಾಲಿ, ಒಳ್ಳೇ ಪುಣ್ಯವಂತನಾಗಿ ಬದುಕುವ ಅಕ್ಷಣವೆಲಾ ಇದೆ, ಎಂದು ಹೇಳುತಿದ್ದರು. ಎಂಧ ವರಿಗೂ ಇನ್ನೊಂದು ಸಾರಿ ಈ ಮಗುವನ್ನು ತಿರುಗಿನೋ ಡೋಣವೆನ್ನುವಹಾಗೆ ಮುಖದಲ್ಲಿ ಹೆಚ್ಚಾದ ತೇಜಸ್ಸು ಇತ್ತು. ಗುಣವೂ ರೂಪಿಗೆ ತಕ್ಕ ಹಾಗೆಯೇ ಇತ್ತು. ದೊಡ್ಡವರು ಹೇಳಿ ದಹಾಗೆ ಕೇಳುವುದು, ಎಷ್ಟು ತಿಂಡೀಕೊಟ್ಟರೆ ಅತ್ಮರಲ್ಲಿಯೇ ತೃಪ್ತಿ, ಹೋರಾಟವಿಲ್ಲ, ಮಕ್ಕಳ ಚೇಷ್ಮೆಯನ್ನು ಮಾಡುವುದು, ಬೇಡವೆಂದರೆ ಬಿಡುವುದು, ಇವುಗಳೆಲ್ಲಾ ಬಾಲ್ಯದಲ್ಲಿಯೇ ಈ ಮಹಾದೇವನ ಗುಣಗಳಾಗಿದ್ದವು. ಈ ಹುಡುಗನಲ್ಲಿ ನಿಮ್ಮ ಮ್ಮ ನಿಗೆ ಬಹಳ ವಿಶ್ವಾಸವಿತ್ತು. ಅವನನ್ನು ಎತ್ತುವುದು, ಆಡಿಸು ವುದು, ಬೇಕಾದ ತಿಂಡಿ ಕೊಡುವುದು, ಯಾವಾಗಲೂ ಆದರಿಸುವುದು, ಇದೆಲ್ಲಾ ತಿನ್ನು ವು ತಾನು ದಿನಚರಿಯ ಲ್ಲಿಯೂ ಮಾಡಬೇಕಾದ ಕೆಲಸವೆಂದು ಆಚರಿಸುತಿದ್ದಳು. ಅವನು ಯಾವ ಕಾರಣದಿಂದಲಾದರೂ ಅತ್ತರೆ, ಇವನಿಗೆ ಸಮಾ ಧಾನಮಾಡುವವರೆಗೂ ಇವಳ ಮನಸ್ಸು ಬಹಳವಾಗಿ ಕಳವಳ ಗೊಳ್ಳುತಾ ಇತ್ತು. ಹುಡುಗರು ಹುಡುಗರನ್ನು ಕಂಡರೆ ಸಹ ಜವಾಗಿ ಇರಿಸಿಕೊಂಡಿರುವ ಅನುರಾಗವೆನ್ನುವುದಕ್ಕೂ, ಅಕ್ಷಣ