ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೭ ಮಾಡಿದ್ದುಣೋ ಮಹಾರಾಯ. ಮುಡಪು, ಕಾಣಿಕೆದುಡ್ಡು, ಗೋಲಕದ ಪುಡಿಕಾಸು ಇವುಗ ಆಲ್ಯಾ ಹೆಚ್ಚಾಗಿ ವರಮಾನವಾಗಿ ಬರುತಿತ್ತು. ಅಷ್ಟು ಹೊ ತಿಗೆ ಮೊದಲಿದ್ದ ಹಳೇಪೂಜಾರಿ ಸತ್ತು ಹೋದನು. ಅವನ ವಂಶದ ಹೆಸರನ್ನು ಹೇಳುವುದಕ್ಕೆ ಯಾರೂ ಇರಲಿಲ್ಲ. ಆಗ ಸಮಾಸದ ಊರಿನಲ್ಲಿ ಸೇರಿಕೊಂಡು ಊರೂರು ಅಲೆಯು ತಾ ಹಗಲಿನ ಹಿಟ್ಟಿಗೂ ರಾತ್ರೆ ಅಂಬಲಿಗೂ ಸಹ ಗತಿಯಿ ಲ್ಲದೆ ಇದ ಸಿದ ನೆಂಬ ಕೊರಮನು ಸತ್ತು ಹೋದ ಪೂಜಾರಿಗೆ ತಾನು ಸಮಾನ ದಾಯಾದಿ ಎಂತ, ತಾನು ಸಂಜವಾಡಿ ಗ್ರಾಮದೇವತೆಯ ಪೂಜೆಯನ್ನು ಮಾಡುತ್ತೇನೆಂತಲೂ, ಗ್ರಾಮ ಸ್ವರೆಲ್ಲರಲ್ಲಿಯೂ ಹೇಳಿಕೊಂಡು, ಆ ಊರಿಗೆ ಬಂದು ಸೇರಿದನು. ಅದುವರೆಗೆ ಆ ದೇವರಿಗೆ ಪೂಜೆಮಾಡತಕ್ಕವರು ಯಾರೂ ಸಿಕ್ಕಿ ಯ ಇರಲಿಲ್ಲ. ತಾತಾಕ್ಕೆ ಸಿದ ನೇ ಪೂತೀಮಾಡುತಾ ಇರಲಿ, ಇಂಥಾ ಕೆಟ್ಟ ಕಾಲದಲ್ಲಿ ಅಮ್ಮ ನವರ ಪೂಜೆಯನ್ನು ನಿಲ್ಲಿಸಿಬಿಟ್ಟರೆ ಯಾವ ವಿಪತ್ತು ಸಂಭವಿಸಿತೋ ಎಂದು ಗ್ರಾ ಮದ ಮಹಾಜನಂಗಳೆಲ್ಲ ಒಪ್ಪಿದರು. ಅದರಂತೆ ಈ ಸಿದ ನು ಹಳೇ ಪೂಜಾರಿಯ ಮನೆಯಲ್ಲಿಯೇ ವಾಸವಾಗಿರುತಾ ಆ ದೇವದಾಯದ ಮಾನ್ಯದ ಭೂಮಿಯನ್ನು ಅನುಭವಿಸುತಾ ದೇವರ ಪೂಜೆಗೆ ಆರಂಭಿಸಿದನು. ಕುಚೇಷ್ಟೆಯಿಲ್ಲದೆ ಪ್ರತಿಷ್ಟೆ ಬಾರದು. ಆದ್ದರಿಂದ ಸಿದನು ದಿನೇದಿನೇ ದೇವರಪೂಜೆ ಯಲ್ಲಿ ಹೊಸ ಏರ್ವಾಡುಗಳನ್ನು ಮಾಡುತ್ತಾ ಬಂದನು. ಶುಕ್ರವಾರ ಮಂಗಳವಾರದ ಪೂ: ಇದ ರು ನಿತ್ಯಗಟ್ಟಲೆ ಪೂಜೆಗೆ ಆರಂಭವಾಯಿತು, ಹಗಲು ಒಂದೇ ಹೊತ್ತು ನರ