ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಾಡಿದ್ದುಣೋ ಮಹಾರಾಯ. ೩೩ ರಮಣರಾಯನಿಗೆ ಇದ್ದಷ್ಟು ಪ್ರಜ್ಞೆಯ ಜಾಣತನವೂ ಬರವ ಣಿಗೆಯಲ್ಲಿ ಇರಲಿಲ್ಲವಾದ್ದರಿಂದ, ಮೇಲಿನ ಲೈರ್ಸೆನನ್ನು ಒಕ್ಕ ಣಿಸುವುದರಲ್ಲಿ ಮುನಷಿಗಳು ಗುಮಾಸ್ತರು ಇವರ ಕೈವಾಡವೇ ಮುಖ್ಯವಾಗಿತ್ತು. ಇದಕ್ಕಾಗಿ ಪರಿವಾರದವರು ತಮ್ಮ ಕೃತ ಜ್ಞತೆಯನ್ನು ಕರಗಿಸಿ ಅದನ್ನು ಚಿನ್ನವಾಗಿ ಮಾಡಿ, ಕೂತರೆ ನಿಂತರೆ ಪಂಚಪ್ರಾಣವನ್ನೂ ಸೆಳೆಯುವುದರಲ್ಲಿ ಕೇವಲ ಪ್ರೌಢ ರಾಗಿದ್ದ ಮುನಷಿ ಮೊದಲಾದ ಎಲ್ಲಾ ಪರಿವಾರಗಳಿಗೂ ಅವ ರವರ ಯೋಗ್ಯತೆ ಏಾರಿ ಚಿನ್ನದ ಹಣಗಳನ್ನ ಬೆಳ್ಳಿ ಹಣ ಗಳನ್ನೂ ತೆತ್ತರು. ಉಪ್ಪಲಿಗರ ಕಡೆಯವರು ಬಳಸಂಚು ಇಟ್ಟು ಈ ಒಳಗಿನ ಗುಟ್ಟನ್ನೆಲ್ಲಾ ತಿಳಿದುಕೊಂಡರು. ತೊರೆಯರ ಮೆರವಣಿಗೆ ಹೊ ರಟರೆ ತಾವು ಮುಂಚಿತವಾಗಿ ಮಾಡಿಕೊಂಡಿರಬೇಕಾದ ಮುನ್ನೆ ದುಗಳು ಯಾವುದನ್ನೂ ಬಿಡದೆ+ಸಿದ್ಧ ಮಾಡಿಕೊಂಡರು. ರಾತ್ರೆ ಹೊತ್ತು ಒಂದು ಕಾಡಿನಲ್ಲಿ ಯಾರೂ ಅರಿಯದಹಾಗೆ ಗುಂಪು ಸೇರಿ ಮುಂದೆ ಮಾಡಬೇಕಾದ ಕೆಲಸಗಳನ್ನು ಗೊತ್ತುಮಾಡಿ ಕೊಂಡರು. ಪರಿವಾರದವರಾದರೋ, ಸುಬೇದಾರರ ಬಲದಿಂದ ತನ್ನ ಇಷ್ಯ ನೆರವೇರೀತೆಂದು ಬಹು ಸಂತೋಷವಾಗಿ ಮೆರವಣಿಗೆಗೆ ಬೇಕಾದ ಸಾಮಗ್ರಿಗಳನ್ನು ಸಜ್ಜು ಮಾಡಿಕೊಂಡರು. ಚಾಮರಾ ಜನಗರದಲ್ಲಿರುವ ಎಲ್ಲಾ ಗುಡಿಗಳಿಗೂ ಹೋಗಿ ಹಣ್ಣು ಕಾಯಿ ಗಳನ್ನು ಒಪ್ಪಿಸಿ, ಮುಖ್ಯವಾದ ರಾಜಬೀದಿಗಳಲ್ಲಿ ಮೆರವಣಿಗೆ ಮಾಡಿಕೊಂಡು, ರಾತ್ರಿ ೧೨ ಗಂಟೆಹೊತ್ತಿಗೆ ಮನೇಸೇರಿ,