ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಾಡಿದ್ದುಣೋ ಮಹಾರಾಯ, ೫೩ ಎಂದು ಕೂಗಿ ಸಿಕ್ಕಿದ ಒಬ್ಬೊಬ್ಬರಿಗೆ ಎರಡೇಟಿ ಕೊಟ್ಟು ತಾನು ಎಂದೂ ಕೂತುಕೊಳ್ಳತಕ್ಕ ಜಗಲೀಬಳಿಗೆ ಹೋಗಿ ಅದನ್ನು ಹತ್ತಿದನು. ಸುತ್ತಲೂ ಗೋಡೆಗೆ ಸುಣ್ಣವನ್ನು ತೊಡೆದು ಜಗಲಿಯಮೇಲೆ ಹೊರಚಾವೆಯನ್ನು ಹಾಸಿದರು. ಇದನ್ನು ನೋಡಿ ಸಂತೋಷಪಟ್ಟು ದಿನವಹಿ ಹೀಗೆ ಚೊ ಕಟವಾಗಿ ಮಾಡುವುದಕ್ಕೆ ನಿಮಗೇನು ಕೇಡುಬಂದಿದೆ ? ಎಂದು ಕೊಳ್ಳುತಾ ಎಂದೂ ತಾನು ಕೂತುಕೊಳದ ಸ್ಥಳದಲ್ಲಿ ಕೂ ತುಕೊಂಡನು. ಅಯ್ಯೋ ! ಆಗ ಆ ವ್ಯಾಣಿಗೆ ಸಂಭವಿಸಿದ ವಿಪತ್ತನ್ನು ಏನೆಂದು ವರ್ಣಿಸಲಿ ? ಉವಾಧ್ಯಾಯನು ಕೂತು ಕೊಂಡಕೂಡಲೆ ಮೇಲೆ ಹಾಸಿದ್ದ ಹೊಸಚಾ ದೊಸಕೊಂ ಡಿತು. ನಾರಪಯ್ಯನು ಕಿಚ್ಚನೆ ಕಿರಚಿಕೊಂಡನು. ದೂರದೂ ರವಾಗಿ ನಿಂತಿದ್ದ ದೊಡ್ಡಹುಡುಗರೆಲ್ಲಾ ಕೂಗದೆ ದುಡುದುಡ ನೆ ಓಡಿಹೋದರು. ಉವಾಧ್ಯಾಯನಿಗೆ ಹೆದರಿಕೊಂಡು ತನ್ನ ಮಟ್ಟಿಗೆ ತಾವು ಮಠಕ್ಕೆ ಬಂದಾಗಿನಿಂದ ಓದಿಕೊಳ್ಳುತಾ ಕೂ ತಿದ್ದ ಮಹಾದೇವನೇ ಮೊದಲಾದ ೩-೪ ಜನ ಸಣ್ಣ ಹುಡುಗರು ಈ ಕಿರಚಲನ್ನು ಕೇಳಿ ಗಾಬರಿಯಾಗಿ ಉವಾಧ್ಯಾಯನ -ಜಗಲೀ ಕಡೆ ನೋಡಿದರು. ಕಣ್ಣಗುಡ್ಡೆ ಮೇಲಕ್ಕೆ ಸಿಕ್ಕಿಕೊಂಡು ಬಾಯಿ ಯನ್ನು ತೆರೆದುಕೊಂಡು ಹಳ್ಳಕ್ಕೆ ಬಿದ್ದಿದ್ದ ಅವನನ್ನು ನೋಡಿ ಹೆದರಿಕೆಯಿಂದ ತಂತಮ್ಮ ಮನೆಗೆ ಓಡಿಹೋದರು. ಮಠದಲ್ಲಿ ಯಾರೂ ಇಲ್ಲವಾಯಿತು. ಆಗ ಕೂಡಲೆ ಮಹಾದೇವನು ತ ಮೃ ಮನೆಗೆ ಓಡಿಹೋಗಿ ವ್ಯಾತರಾಹಿಕವನ್ನು ಮುಗಿಸಿಕೊಂಡು ದೇವತಾರ್ಚನೆಯನ್ನು ಮಾಡಲು ಗಂಧವನ್ನು ತೆಯುತಾ ದೇ ವಿ ವಿ