ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೨ ಮಾಡಿದ್ದು ಣೋ ಮಹಾರಾಯ, ಮಗೀಗೆ ನಾನು ಎಲ್ಲಾ ಹೇಳಿಕೊಟ್ಟು ಕಲಿಸಿಬಿಡುತ್ತೇನೆ. ಹೀಗೆಂ ದು ಮನಸ್ಸಿ ಹರಟೆಹೊಡೆದನು. ಆಗ ಸದಾಶಿವದೀಕ್ಷಿತನು ಇ ವನನ್ನು ಸಮಾಧಾನವಾಡಿ ಸಂತನಲ್ಲಿ ಹುಡುಗನಿಗೆ ಗೌರವ ತಪ್ಪದಹಾಗೂ ಹುಡುಗನಿಗೆ ಆಪ್ಯಾಯನವಾಗಿರುವ ಹಾಗೂ ಯಾವ ರೀತಿಯಲ್ಲಿ ಮಾತನಾಡಬೇಕೋ ಹಾಗೆ ಮಾತನಾಡಿದನು. ಅನಧೋನ ಕಳೆಯಿತು. ಬಿದಿಗೆ ದಿವಸ ಬೆಳಿಗ್ಗೆ ಮಹಾ ದೇವನಿಗೆ ಮುಖವನ್ನು ತೊಳೆದು ತಿಂಡಿಯನ್ನು ಕೊಟ್ಟು ನೀ ನು ಮಠಕ್ಕೆ ನಡೆ, ನಾನೂ ನಿನ್ನ ಹಿಂದೆಯೇ ಬರುತ್ತೇನೆ, ಹೊಡೆಯಬೇಡಿ ಎಂದು ಸಂತರಿಗೆ ಹೇಳುತ್ತೇನೆ, ನಡೆ ಎಂದು ಅಂಗಿಯನ್ನು ತೊಡಿಸಿ ದಾರವನ್ನು ಕೈಗೆ ಕೊಟ್ಟು ಒಳ್ಳೇಮಾ ತನ್ನು ಹೇಳಿ ತಿರುಗಿ ಮಗನನ್ನು ದೀಕ್ಷಿತನು ಸುರಕ್ಕೆ ಕಳುಹಿ ಸಿದನು. ದಿನವಹಿ ಹೊತ್ತು ಮಾಡಿಕೊಂಡು ಬರುತ್ತಾ ಇದ್ದ ಹು ಡುಗರೆಲ್ಲಾ ಆದಿನ ಬೆಳಿಗ್ಗೆ ಮಹಾದೇವ ಹೋಗುವುದರೊಳ ಗಾಗಿ ಮಠಕ್ಕೆ ಬಂದಿದ್ದರು. ಇವನೂಹೋಗಿ ಅವರ ಸಂಗಡ ಸೇರಿದನು. ಇವನನ್ನು ನೋಡಿ ಹುಡುಗರು ಬಹಳವಾಗಿ ಉಪಚಾರದ ಮಾತುಗಳನ್ನಾಡಿ ಕನಿಕರವನ್ನು ತೋರಿಸಿದರು. ಯಾರೂ ಮಠದಲ್ಲಿ ಕೂತುಕೊಳ್ಳದೇ ಅಲ್ಲಲ್ಲಿ ನಿಂತಿದ್ದರು. ಬಸವನೇ ಮೊದಲಾದ ಹಿರೇಹುಡಗರು ಗುಸಗುಸನೆ ಮಾತನಾ ಡಿಕೊಳ್ಳುತ್ತಾ ಇದ್ದರು. ಆಗ ಸಂತರ ಸವಾರಿ ಬಂತು. ಆದಿನ ನಾರಪ್ಪಯ್ಯನು ಈ ದ್ದವಾದ ಹೊಸಬೆತ್ತವನ್ನು ಹಿಡಿದು ಅದನ್ನು ಅಲ್ಲಾಡಿಸುತಾ ಮ ಠಕ್ಕೆ ಬಂದು- ಯಾಕರೆಲಾ, ಓದದೇ ಸುಮ್ಮನೇ ನಿಂತಿದೀರಿ?