ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೧೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೨ ಮಾಡಿದ್ದುಣ್ಣೂ ಮಹಾರಾಯ, ಮೃ ನೆ ಎದ್ದು ಒಳಕ್ಕೆ ಹೊರಟುಹೋದಳು. ಉಷಃಕಾಲಕ್ಕೆ ಎಂದಿನಂತೆ ಎದ್ದು ಹೊರಕ್ಕೆ ಹೋಗಿದ್ದ ಸದಾಶಿವ ದೀಕ್ಷಿ ತನು ಒಗೆದ ಪಂಚೆಯ ಹಿಂಡಿಕೆಗಳನ್ನೂ ಹೂ ತುಳಸಿಯ ಬುಟ್ಟಿಯನ್ನೂ ಕೈಯಲ್ಲಿ ಹಿಡಿದುಕೊಂಡು ಹೊರಗಿನಿಂದ ಮನೆ ಯ ಬಾಗಿಲಿಗೆ ಬಂದುನೋಡಿ- ಇಂದು ಶುಕ್ರವಾರ, ಬಾಗಿಲಿಗೆ ಇಟ್ಟ ರಂಗವಲ್ಲಿಯನ್ನು ಯಾಕೆ ಅಣಿಸಿದೆ ? ಅಲ್ಲಿ ರಂಗವಲ್ಲಿಯ ನ್ನು ಯಾಕೆ ಚೆಲ್ಲಿಯಾಡಿದೆ ? ಎಂದು ಕೇಳಿದನು. ಕೆಲವು ಕಡೆ ನಾಚೋಕಾಗಿ ರಂಗವಲ್ಲಿ ಎಳೆಯನ್ನು ಹಾಕಿದ್ದದ್ದು ಇನ್ನೂ ಹಾ ಗೆಯೇ ಇತ್ತು ಇದನ್ನು ತನ್ನ ಸೊಸೆ ಇಟ್ಟಿರಬೇಕು, ಹಾಗಿ ದೊರೆ ಇಟ್ಟ ಎಳೆಗಳನ್ನು ಅಳಿಸಿ ಚೆಲ್ಲಿಯಾಡಿರಲು ಕಾರಣವಿಲ್ಲ, ಎಂದು ಯೋಚಿಸುತಾ ಇರುವಲ್ಲಿ, ತಿಮ್ಮನ್ನ ನು- ಇದೆಲ್ಲಾ ನಿಮ್ಮ ಸೊಸೆ ಮಾಡಿದ ನಾಲೋಕಿನ ಕೆಲಸ ; ಆಡಿದರೆ ನಾನೇ ಕೆಟ್ಟವಳಾಗುತ್ತೇನೆ. ಜಾಗ್ರತೆಯಾಗಿ ರಂಗವಲ್ಲಿ ಹಾಕಿ ಏಳು, ಎರೆದುಕೊಳ್ಳುವಂತೆ ಎಂದು ನಾನು ಹೇಳಿದ ಕೈ ಇಟ್ಟರಂ ಗಲ್ಲಿಯನ್ನು ಅಳಿಸಿ ಸಟ್ಟ ' ಶುಕ್ರವಾರದ ದಿವಸ, ಅಲೈಲಾ ಅದನ್ನು ಚೆಲ್ಯಾಡಿ ಮರಗಿಯನ್ನು ಅಲ್ಲಿ ಕುಕ್ಕಿ ಹೊರಟು ಹೋದಳಲ್ಲ ? ಅಬ್ಬಬ್ಬ ಅವಳೇನು ಸಾಮಾನ್ಯಳು ಎಂದು ತಿಳಿ ದಿದೀರೋ ಕಾಣೆ, ಅದೆಲ್ಲಾ ಹೇಳುವುದಕ್ಕೆ ಹೋದರೆ ಶಾನೆ ಶಾನೆ ಇದೆ ಎಂದಳು. ಆ ಸಮಯದಲ್ಲಿ ಸಾತಿಯು ಅತ್ತಿಗೆಯ ನ್ನು ಕುರಿತು- ಅತ್ತಿಗೆ, ಇಲ್ಲಿ ಯಾಕೆ ನಿಂತುಕೊಂಡೆಯೇ ? ಉಪ್ಪಿಟ್ಟು ತಿನ್ನೋಣಬಾರೆ, ಅಮ್ಮ ನ ರಗಳೆ ಕಂಡೇ ಇದೆ, ಎಂ ದಳು. ಸೀತಮ್ಮ ನು- ಸಾತಿ ಮುಖ ತೊಳೆದುಕೊಂಡು ಬಾ,