ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೧೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೬ ಮಾಡಿದ್ದು ಣೋ ಮಹಾರಾಯ, ಸಾಂಗವಾಗಿ ಬೆಳೆದವು. ಮದುವೆಯಲ್ಲಿ ಯಾಗಲಿ, ಬಾಗಿನ ದಲಾದ್ದು ಕೊಡಿಸುವುದರಲ್ಲಿ ಯಾಗಲಿ, ಮುಯಿಗೆ ಮುಯಿ ಮಾಡುವುದರಲ್ಲಿಯಾಗಲಿ ಬೀಗ ಬೀಗರಿಗೆ ಯಾವ ಗಲಗೂ ಇಲ್ಲದೆ ಯಾರಿಗೂ ಮನಸ್ಸು ಕಾಗದಿಹಾಗೆ ಎಲ್ಲಾ ನಡವ ಲಿಕೆಗಳೂ ಜರಗಿದವು. ಕೆಲವು ದಿವಸಗಳ ಮೇಲೆ ಒತನ್ನು ನನ್ನು ಅತ್ತೆ ಮನೆಗೆ ಕರೆದುತಂದು ಕೆಲವು ದಿವಸ ಇರಿಸಿಕೊಂಡಿದ್ದ ರು. ಅಳಿಯನನ್ನು ಅತ್ತೆಮನೆಗೆ ಯುಗಾದಿ ದೀವಳಿಗೆ ಮೊದಲಾದ ಹಬ್ಬಕ್ಕೆ ಕರೆದು ವಿಭವವಾಗಿ ಆರತಿ ಅಕ್ಷತೆ ಮೊದಲಾದ್ದನ್ನು ಮಾಡಿದರು. ಕೆಲವು ದಿವಸದಲ್ಲಿ ಈ ಹುಡುಗಿ ಮೈನೆರೆದಳು. ಋತುಶಾಂತಿಪ್ರಸ್ವವೂ ಜರಗಿತು. ಹುಡುಗಿಯನ್ನು ಅತ್ತೆಮ ನೆಗೆ ಕರೆದುತಂದು ಬಿಟ್ಟು ಅಳಿಯನಿಗೂ ಮಗಳಿಗೂ ಚಿನ್ನ ಬೆಳ್ಳಿ ಸಾಮಾನುಗಳೇ ಮೊದಲಾಗಿ ಅನೇಕ ಪದಾಥ್ಯಗಳನ್ನೂ ವಸ್ತ್ರ ಗಳನ್ನೂ ಬಳುವಳಿಯಾಗಿ ಕೊಟ್ಟರು. ಸೀತಮ್ಮ ನು ಅತ್ತೇನು ನೆಗೆ ಬಂದು ಬಾಳಿಕೊಂಡಿರಲು ಆರಂಭವಾಯಿತು. ೭ನೇ ಅಧ್ಯಾಯ. ತಿನ್ನು ಮೈ ನ ಹೊಟ್ಟೆಯಲ್ಲಿ ಒಂದು ಹೆಂಣುಮಗು ವಾಯಿತು. ಆ ಹುಡುಗಿಗೆ ಸಾವಿತ್ರಿ ಎಂದು ಹೆಸರಿಟ್ಟಿದ್ದರು. ಮುದ್ದಿಗೆ ಸಾತಿ ಎಂದು ಕರೆಯುತಿದ್ದರು. ಸೀತಮ್ಮ ನೆರೆದು ಗಂಡನ ಮನೆಗೆ ಬಂದಾಗ ಸಾತಿಗೆ ಒಂಭತ್ತು ವರುಷತುಂಬಿ ತು, ಈ ಹೆಂಣು ರೂಪಿನಲ್ಲಿಯೂ ಗುಣದಲ್ಲಿಯೂ ತಾಯಿ