ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೧೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

උජීවූ ಮಾಡಿದ್ದು ಣೋ ಮಹಾರಾಯ, ಕೈಸಾಲೆಯಲ್ಲಿ ಕೂತು ಬಾಜು ಮುಂತಾದ್ದನ್ನು ಆಡುತಾ ಇ ದ್ದದೂ ಅಲ್ಲದೆ ಪುಂಡುಪದಗಳನ್ನು ಕೆಲವರು ಹೇಳುತಿದ್ದರು. ಲಾವಣಿಗಳನ್ನು ಕೆಲವರು ಹೇಳುತಿದ್ದರು. ಜಾವಡಿಗಳನ್ನು ಕೆಲವರು ಹಾಡುತಿದ್ದರು. ಪೂವಯಸ್ಸಿನ ಹೆಂಗಸರನ್ನು ಕಂಡಾಗ ಈ ವಿಧವಾದ ರಸಿಕತೆ ಈ ಗುಂಪಿನವರಲ್ಲಿ ಹೆಚ್ಚಾಗು ತಾಇತ್ತು. ಇದರ ಜೊತೆಗೆ ಲಿಯ ಕ್ಯಾಕೆ ಗೊತ್ತಿಲ್ಲದ ಹಾಗೆ ಆಗುತಿದ್ದವು. ಈ ಹಾವಳಿಯಲ್ಲಿ ಹೆಂಗಸರು ಆ ದಾರಿ ಯಲ್ಲಿ ತಿರುಗಾಡಲು ಹೆದರಿಕೊಳ್ಳುವಹಾಗೆ ಆಯಿತು. ಊರಿನ ಜನರು ಅನೇಕರು ಆ ದಾರಿಯಲ್ಲಿಯೇ ನೀರತರಲು ಹೊಳೆಗೆ ಹೋಗಿ ಬರಬೇಕಾಗಿತ್ತು. ಹೀಗೆ ಕಬ್ಬಹರಿದ ಪಂಜಾಗಿ ನಡೆ ಯುತಾ ಇದ್ದ ಜನರ ಹಾವಳಿಯಲ್ಲಿ ಯಾವ ಕೆಟ್ಟತನ ನಡೆಯ ಬಹುದು ಯಾವುದು ನಡೆಯುವುದಿಲ್ಲ ಎಂದು ಹೇಳಬಹುದು ? ಅತ್ಯ ಜೋಯಿಸರ ಮನೆಯಿಂದ ಸೀತಮ್ಮ ನು ಪ್ರತಿನಿತ್ಯವೂ ಬೃಂದಾವನದ ಪೂಜೆಗೆ ಹೋಗಿಬರುತಾ ಇದ್ದ ಸಂಗತಿ ಗೊತ್ತಾ ಗಿಯೇ ಇದೆ. ಆ ಬೃಂದಾವನವು ಹೊಳೆಗೆ ಸ್ವಲ್ಪ ಸಮಾಸ ವಾಗಿತ್ತು. ಆದರೆ ಅಲ್ಲಿಂದಾ ಹೊಳೆಗೆ ಹೋಗಲು ಪೂರದಲ್ಲಿ ಅಡ್ಮಿ ಏನೂ ಇರಲಿಲ್ಲ. ಈಚೆಗೆ ಹೊಳೇ ತಡಿಯಲ್ಲಿದ್ದ ಹೊಲವ ನ್ನು ಯಾರೋ ಮಾಡಿಕೊಂಡು ಬೇಲಿ ಹಾಕಿಕೊಂಡಿದ್ದರು, ಈ ಬೃಂದಾವನವು ಆ ಹೊಲದ ಮಧ್ಯಭಾಗಕ್ಕೆ ಸೇರಿತ್ತು. ಆದರೆ ಅದರ ಪೂಜೆಗೆ ಬರಲು ಯಾರಿಗೂ ಅಡ್ಡಿ ಇರಲಿಲ್ಲ. ಈ ಬೃಂದಾವನವು ಅಮ್ಮು ನಗುಡಿಯ ಕೈಸಾಲೆಗೆ ಎದುರಾಗಿತ್ತು. ಅಲ್ಲಿಗೂ ಅಲ್ಲಿಗೂ ಸುಮಾರು ೧೦೦-೧೫೦