ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೨೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

M ೨೬೩ ಮಾಡಿದ್ದುಣ್ಣೆ ಮಹಾರಾಯ, ಗುತಾ ಇರುವಾಗ ಆ ಹೆಂಗಸು ನನ್ನನ್ನು ದುರುಗುಟ್ಟಿಕೊಂ ಡು ನೋಡುತಾ ನಿಂತುಕೊಂಡಳು. ಹೊಸಮುಖವೆಂದು ಗು ರುತು ನೋಡಿಕೊಳ್ಳು ತಾಳೆ ಎಂಬದಾಗಿ ನಾನು ಒಳಗೆ ಭ ಯಪಟ್ಟುಕೊಂಡು ಕಾಲನ್ನು ಜಾಗ್ರತೆ ಮಾಡಿದೆ. ಎಲಸ ನೀನು ಯಾವವೂರೋ ? ಎಂದಳು. ನಾನು ಮಾತನಾಡದೆ ಸುಮ್ಮನೇ ಹೋಗುತಿದ್ದೆ. ಆಕೆ ಪುನಹ ಎಲ ನೀನು ಜಯಸ್ಸನಲ್ಲವೇನೋ ಎಂದಳು. ಈ ಹೆಸರು ನನಗೆ ನಮ್ಮ ತಂದೆ ಇಟ್ಟಿದ್ದು, ಈ ಹೆಸರನ್ನು ಹಿಡಿದು ಕೂಗುವ ಈ ಹೆಂಗಸು ಯಾರೋ ನೋಡಲೇಬೇಕು, ಆದ್ರೆ ಲಕ್ಷ್ಮಿ ಆಗಲಿ ಎಂದು ನಾನು ಹಿಂತಿರುಗಿ ನೋಡಿ ನಿಂತುಕೊಂಡೆ. ಆಕೆ ನನ್ನ ಸಮಾಜದಲ್ಲಿ ಒಂದು ನಿಂತು ನನ್ನನ್ನು ಚೆನ್ನಾಗಿ ಬ್ರಷಿಸಿನೋಡಿ, ಜಿಯ ಎಲ್ಲಿಂದ ಬಂದೆ ಕಂದ ಎಂದು ಕೇಳಿ ದಳು. ಅವಳ ಕಂಣಿನಲ್ಲಿ ಪಳ ಪಳನೆ ನೀರು ಸುರಿಯುವುದ ಕೈ ಮೊದಲಾಯಿತು. ಆಗ ಅವಳು ನನ್ನ ಅಕ್ಕನೆಂದು ತಿಳಿದುಕೊಂಡೆ. ನನಗೂ ತುಂಬಾ ದುಃಖಬಂತು. ನಾವಿ ಬೃರೂ ಅವು ತಮ್ಮ ಮನೆಗೆ ಕರೆದುಕೊಂಡುಹೋದಳು. ನಾವು ಬಾಲ್ಯದಲ್ಲಿ ಪಟ್ಟ ಕಷ್ಟವೆಲ್ಲಾ ಜ್ಞಾಪಕಕ್ಕೆ ಬಂತು. ಪುನಃ ಅತ್ತೆವು. ಅವಳನ್ನು ಅವಳ ಗಂಡ ಕರೆದುಕೊಂಡು ಹೋದಾಗಿನಿಂದ ಅದುವರೆಗೆ ನಡೆದ ಸಮಾಚಾರವನ್ನೆಲ್ಲಾ ಹೇಳಿದೆ. ನನ್ನ ಚಿಕ್ಕಪ್ಪನೂ ಚಿಕ್ಕಮ್ಮ ನೂ ಮಾಡಿದ್ದ ನೆಲ್ಲಾ ತಿಳಿಸಿದೆ. ಆದರೆ ನಾನಿರುವ ವೂರನ್ನೂ ಆನು ಸರಿಸಿರುವ ವೃತ್ತಿಯನ್ನೂ ನಾನು ಹೇಳಲಿಲ್ಲ. ನಾನು ವ್ಯಾ