ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೩೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೯೦ ಮಾಡಿದ್ದು ಣೋ ಮಹಾರಾಯ. ಭಟಜಿ-ಹಣದಲ್ಲಿ ಸಲ್ಲಿಯದು ? ಕೂಗು ಆ ಶರೀರದಿಂದ ಹೊರಡುತ್ತೆ. ಗಿರಿ- ಹೆಣ ಹತ್ತಿ ಉರಿಯುತಾ ಇದೆ. ಅದು ಅರಿಚುತ್ತೆ ಎಂದರೆ ನಂಬುವ ಮಾತಲ್ಲ. ಭರಣಿ-ಖಂಡಿತವಾಗಿ ನಾನು ಪರೀಕ್ಷಿಸಿ ತೋರಿಸುತ್ತೇನೆ. ನೀ ನು ಧೈರ್ಯವಾಗಿ ನೋಡುತ್ತಾ ಒಂದು ಕಡೆ ಕೂತು ಕೊಳ್ಳುತೀಯ ? ಈ ಪ್ರಾಣಿಗೆ ಯಾರೋ ನೀಚ ಬ ಲವಾಗಿ ಕೈ ಕೊಟ್ಟದಾನೆ. ಒಳ್ಳೇದು ಇರಲಿ. ನೀನು ಮಾತ್ರ ಹೆದರಬೇಡ. ಗಿರಿ- ಹಾಗೇ ಆಗಲಿ. ಹೀಗೆ ಮಾತನಾಡುತಾ ಇಬ್ಬರೂ ಆ ಊರಿಗೆ ಸ್ವಲ್ಪ ದೂರವಾಗಿ ನಿಂತುಕೊಂಡರು. ಭರಣಿಯು ತನ್ನ ಮಡಿ ಚೀಠದ ಗಂಟನ್ನು ಗಿರಿಯಂಣನ ವಶಕ್ಕೆ ಕೊಟ್ಟು ಅವನನ್ನು ಒಂದು ಸ್ಥಳದಲ್ಲಿ ಕೂರಿಸಿ ತಾನು ಮುಡಿಪಂಚೆಯನ್ನು ಬ್ಯು ನದಿಯಲ್ಲಿ ಸ್ನಾನಮಾಡಿ ಹಣೆಗೆ ವಿಭೂತಿಯನ್ನೂ ಮಡಿ ಚೀಲದಲ್ಲಿದ್ದ ಕುಂಕುಮವನ್ನೂ ಇಟ್ಟುಕೊಂಡು, ಗಮ್ಮ ಯಾಗಿ ಕೂಗಿ ಏನೋ ಮಂತ್ರವನ್ನು ಹೇಳುತ್ತಾ ನಿಂತು ಕೊಂಡಿದ್ದ ತರುವಾಯ ಕೂತುಕೊಂಡು ಬೆಂಕಿಯ ಕಡೆಗೆ ತಿರು ಗಿದನು; ಮತ್ತು ಎರಡು ಕೊನೆಗೂ ಬೆಳ್ಳಿಕಟ್ಟಿ ಹಾಕಿದ್ದ ಒಳುದ ಕರೀ ಬೆತ್ಯವನ್ನು ತೆಗೆದುಕೊಂಡು ನೀರು ಸೋ ರುತಿದ್ದ ತನ್ನ ಜುಟ್ಟಿನಿಂದ ನೆಲದಮೇಲೆ ಬಡಿಯುತಾ ಪುನಃ ಬೆತ್ತದಿಂದ ನೆಲವನ್ನು ಬಡಿಯುತಾ, ಅನೇಕ ದೇವರುಗಳ