ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೧೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೦ ಮಾಡಿದ್ದು ಣೋ ಮಹಾರಾಯ ಸಾಕಿಗೆ ಮಾತ್ರ ಸ್ವಲ್ಪ ಎಚ್ಚರವಾಗಿತ್ತು. ಸೀತಮ್ಮ ಹೇಳು ತಾ ಇದ್ದದನ್ನೆಲ್ಲಾ ಕೇಳಿ ಸಾಕಿಯು ಆಗ ಸುಮ್ಮನಾಗಿ ನಿದ್ರೆ ಮಾಡುತಾ ಮಲಗಿಕೊಂಡಳು. ಮಲಗಿಕೊಳ್ಳುವಾಗ ಭಗವಂತನ ನಾಮೋಚ್ಛಾರಣೆಯನ್ನು ಮಾಡಿ ಮಲಗುವುದು ಪೂರಾಚಾರವಾಗಿದೆ, ಈ ಅಭ್ಯಾಸ ಸೀತಮ್ಮ ನಿಗೆ ಬಾಲ್ಯದಿಂದ ಊ ಉಂಟು. ಬೆಳಗ್ಗೆ ಉಷಃಕಾಲಕ್ಕೆ ಸೀತೆಯು ಎದ್ದು ಮನೆಕೆಲಸವ ನೈಲಾ ಮುಗಿಸಿಕೊಂಡು ಜಾಗ್ರತೆಯಾಗಿ ಸ್ನಾನಕ್ಕೆ ನೀರನ್ನು ಕಾಸಿದಳು. ಕೂಡಲೆ ಮಡಿಯನ್ನುಟ್ಟು ನದಿಗೆ ಸೀಸೀರ ತರಲು ಹೋಗಿ ಕಂಕುಳಲ್ಲಿ ಒಂದು ಕೊಡ ತಲೆಯಮೇಲೆ ಒಂದುಕೊಡ ತಲೆಯಮೇಲಿನ ಕೊಡದಮೇಲೆ ದೇವರ ಅಗೋದಕದ ಒಂದು ತಾಮ್ರದ ತಂಬಿಗೆ, ಇದರಲೈಲಾ ನೀರನ್ನು ತುಂಬ ಹೊತ್ತು ಕೊಂಡು ಮನೆಗೆ ಬರುತಾ ಇರುವಾಗ, ಸೀತಮ್ಮ ನು ಉದಯ ರಾಗವನ್ನು ಗಟ್ಟಿಯಾಗಿ ಹೇಳದೆ ಮೆಲ್ಲಗೆ ಪಿರ್ಕಿಸಿದನೆ ಹೇಳುತಾ ಮನೆಯ ನಡುವೆಗೆ ಬಂದು ಒಳ ಬಾಗಿಲ ದ್ವಾರಬಂಧನಕ್ಕೆ ತಲೇ ಮೇಲಿನ ಬಿಂದಿಗೇ ಮೇಲಿರುವ ತಂಬಿಗೆ ತಗಲೀತೆಂದು ಬಗ್ಗಿ ಹೊಸಲನ್ನು ದಾಟಿ ಒಳಕ್ಕೆ ಬರುವ ಸಮಯದಲ್ಲಿ ಸಾಕಿಯುಅಮ್ಮ, ಅತ್ತಿಗೆ ಅದೇನೋ ಮಂತ್ರ ಹೇಳುತ್ತಲೇ ಬರುತಾಳೆ, ರಾತ್ರೆಯೂ ಹೀಗೆಯೇ ಮಲಗಿಕೊಳ್ಳುವಾಗ ಹಾವಿಗೆ ಆಣೆ ಚೇಳಿಗೆ ಆಣೆ ಅಮ್ಮ ನ ವಾದದಾಣೆ ಎಂದು ನನ್ನ ಹಾಸಿಗೆ ಬಳಿಯಲ್ಲಿ ಕೂತು ಹೇಳಿದಳು ; ನನಗೆ ಎನೋ ಮಂತ್ರ ಹಾ ಕಿಬಿಟ್ಟಳು ; ತಲೆ ನೋಯುತ್ತೆ, ಕಂಣು ಉರಿಯುತ್ತೆ, ಎಂದ