ಪುಟ:ಕಥಾಸಂಗ್ರಹ ಸಂಪುಟ ೨.djvu/೨೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

260 ಕಥಾಸಂಗ್ರಹ-೫ ನೆಯ ಭಾಗ ಸವನ್ನೂ ತೆಗೆದು ಕೊಂಡು ಆಶ್ರಮಕ್ಕೆ ಬಂದು ದರ್ಭೆ ಸಮಿತ್ತು ಇವುಗಳನ್ನು ಯಾಗ ಶಾಲೆಯಲ್ಲಿಟ್ಟು ಗೋಗ್ರಾಸವನ್ನು ತೆಗೆದುಕೊಂಡು ಎಂದಿನಂತೆ ಗೋಪು ಇರುವ ಸ್ಥಳಕ್ಕೆ ಹೋಗಿ ನೋಡಲು ಅಲ್ಲಿ ಗೋವು ಇಲ್ಲದಿದ್ದುದರಿಂದ ಆಶ್ಚರ್ಯಾ ವಿಷ್ಟನಾಗಿ ಶೀಘ್ರದಿಂದ ತಂದೆಯಾದ ಜಮದಗ್ನಿ ಯ ಬಳಿಗೆ ಬಂದು ಎಲೆ ತಂದೆಯೇ ?* ಈಗ ನಾನು ಧೇನುವಿಗೊಸ್ಕರ ಎಳೆ ಹುಲ್ಲನ್ನು ಬಹಳವಾಗಿ' ತಂದಿದ್ದೇನೆ. ಗೋವು ಎಲ್ಲಿರು ವುದು ? ಕಾಣುವುದಿಲ್ಲವಲ್ಲಾ ಎಂದು ಕೇಳಲು ಆಗ ಜಮದಗ್ನಿ ಯುಗೋವಿನ ವಿಷಯದಲ್ಲಿ ಕಾರ್ತವೀರ್ಯಾರ್ಜುನನು ಮಾಡಿದ ಬಲಾತ್ಕಾರದ ಸಂಗತಿಯನ್ನು ಯಥಾವತ್ತಾಗಿ ತಿಳಿಸಿದನು. ಅದನ್ನು ಕೇಳಿ ಪರಶುರಾಮನು ಮಹಾಕೊಪಸಂತಾ ಪಾವಿಷ್ಟನಾಗಿ-ಅಕಟಕಟಾ ! ನೀಚರಾದ ಅರಸುಗಳಿಗೆ ಮುನಿಜನಗಳ ವಸ್ತುವನ್ನು ಬಲಾತ್ಕಾರದಿಂದ ಅಪಹರಿಸಿಕೊಂಡು ಹೋಗುವ ಶಕ್ತಿಯು೦ಟಾಯಿತೇ ? ಕಂದಮ ಲಾದ್ಯಾಹಾರಗಳನ್ನು ಮಾಡಿಕೊಂಡು ಕೃಶಾಂಗಿಗಳಾಗಿ ಅರಣ್ಯವಾಸಿಗಳಾಗಿರುವವರು ಏನು ಮಾಡಬಲ್ಲರೆಂದು ಯೋಚಿಸಿದನೇ ? ಮಢನಾದ ಅವನು ತನ್ನ ಚಕ್ರವರ್ತಿದ ಹೆಮ್ಮೆಯನ್ನು ನಮ್ಮಲ್ಲಿ ತೋರಿಸಿದನೇ ? ಯಾವ ಪ್ರಾಣಿಗಾದರೂ ಉಪದ್ರವವನ್ನು ೦ ಟುಮಾಡದೆ ಕಾಡಿನಲ್ಲಿ ಎಲೆಮನೆಯೊಳಗೆ ವಾಸಮಾಡಿಕೊಂಡಿರುವ ಮಹಾತ್ಮರಾದ ತಪಸ್ತಿಗಳನ್ನು ಸಾಧಾರಣರೆಂದು ಬಗೆದನೇ ? ಒಳ್ಳೆಯದು ! ಆಗಲಿ ! ಅವನ ಪರಾಕ್ರ ಮವನ್ನು ನೋಡುವೆನೆಂದು ಹೇಳಿ ಅಮೋಘವಾದ ಕವಚವನ್ನು ತೊಟ್ಟುಕೊಂಡು ಬಿಲ್ಲು ಬತ್ತಳಿಕೆ ಕೊಡಲಿಗಳನ್ನು ತೆಗೆದು ಕೊಂಡು ಮಹಾ ಕೋಪದಿಂದ ಪರವಶನಾಗಿ ಆ ಕ್ಷಣದಲ್ಲಿಯೇ ಆಶ್ರಮದಿಂದ ಹೊರಟು ಮಾಹಿಷ್ಕ ತೀನಗರದ ಬಳಿಗೆ ಬಂದು ಊರು ಬಾಗಿಲನ್ನು ಅತಿಕ್ರಮಿಸಿ ಗೋಪುರದ್ವಾರವನ್ನು ದಾಟಿ ಬಂದು ರಾಜದ್ವಾರದ ಬಳಿ ಯನ್ನು ಸೇರಿ ಅಲ್ಲಿ ನಿಂತು ಬಾಗಿಲು ಕಾಯುವವರನ್ನು ಕರೆದು-ಎಲೈ ದ್ವಾರಪಾಲ ಕರೇ! ನೀವು ನಿಮ್ಮ ಅರಸನ ಬಳಿಗೆ ಹೋಗಿ ನಾವು ಹೇಳಿದುದಾಗಿ ಹೇಳತಕ್ಕುದೇನೆಂದರೆ, ಲೋಕದಲ್ಲಿ ಜನರಿಗೆ ವಿನಾಶಕಾಲದಲ್ಲಿ ವಿಪರೀತ ಬುದ್ದಿಗಳು ಹುಟ್ಟುವುವೆಂದು ದೊಡ್ಡ ವರು ಹೇಳುವ ಮಾತು ಈಗ ನಿನ್ನಲ್ಲಿ ಯಥಾರ್ಥವಾಯಿತು. ನಮ್ಮ ತಂದೆಯು ಪ್ರೀತಿ ಯಿಂದ ಕರೆದು ನಿನಗೆ ಸತ್ಕಾರಮಾಡಿದುದು ಪಥ್ಯವನ್ನಿಕ್ಕಿ ಉಣ್ಣಿಸಿದವನ ಬೆರಳನ್ನು ಕಚ್ಚಿದನೆಂಬ ಗಾದೆಗೆ ಸರಿಯಾಗಿ ನಮ್ಮ ಹೋಮಧೇನುವನ್ನು ಬಲಾತ್ಕಾರದಿಂದ ಅಪ ಹರಿಸಿಕೊಂಡು ಬಂದೆಯಲ್ಲಾ! ಇದು ನಿನಗೆ ನ್ಯಾಯವೇ ? ಸತ್ತ ದನದ ಚರ್ಮದಲ್ಲಿ ಮಾಡಿದ ತಿದಿಯ ದೆಸೆಯಿಂದ ಹೊರಡುವ ಉಸಿರುಗಳು ಕಠಿಣತರವಾದ ಪಂಚಲೋ ಹಗಳನ್ನೂ ಸುಟ್ಟು ಬೂದಿಮಾಡುವುವು. ಹೀಗಿರುವಲ್ಲಿ ತಪಸ್ವಿಗಳಾಗಿಯೂ ತೇಜಸ್ವಿ ಗಳಾಗಿಯೂ ಇರುವ ಬ್ರಹ್ಮಜ್ಞಾನಿಗಳ ಸಂತಾಪದ ನಿಟ್ಟುಸಿರುಗಳು ಅಪರಾಧಿಯ ಕುಲಕೋಟಿಗಳನ್ನು ನಿಮೇಷಮಾತ್ರದಲ್ಲಿ ಸುಟ್ಟು ಭಸ್ಮಿಭೂತಮಾಡದೆ ಇರುವುವೇ ? ಇದೋ, ನೀನು ನಮ್ಮ ತಂದೆಯಾದ ಜಮದಗ್ನಿಗೆ ದ್ರೋಹವನ್ನು ಮಾಡಿ ವ್ಯಸನದಿಂದ ಆತನಿಗೆ ನಿಟ್ಟುಸಿರುಗಳು ಹೊರಡುವ ಹಾಗೆ ಮಾಡಿದ ಪ್ರಾಣಗಳನ್ನು ನಿನ್ನ ಮಗಿನ ಮೂಲಕ ಹೊರಡಿಸುವುದಕ್ಕೆ ಆ ಮಹಾತ್ಮನಾದ ಜಮದಗ್ನಿ ಯ ಹೊಟ್ಟೆ ಯಲ್ಲಿ