ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩a ಸರ್ಗ , ೪.] ಅಯೋಧ್ಯಾಕಾಂಡವು, ಹೀಗೆ ದಶರಥನು, ತನ್ನ ಪ್ರಿಯಪುತ್ರನಾದ ರಾಮನಿಗೆ ಪಟ್ಟಾಭಿಷೇಕವನ್ನು ನಡೆಸಬೇಕೆಂದು ಸಿದ್ಧನಾಗಿರುವುದನ್ನು ನೋಡಿ, ಆ ರಾಮನ ಮಿತ್ರರೆಲ್ಲ ರೂ ಮಿತಿಮೀರಿದ ಸಂತೋಷದಿಂದ ಉಬ್ಬಿದವರಾಗಿ, ಅತ್ಯುತ್ಸಾಹದಿಂದ ಓಡಿಬಂದು, ಈ ಪ್ರಿಯವೃತ್ತಾಂತವನ್ನು ಕೌಸಲ್ಯಗೆ ತಿಳಿಸಿದರು. ಇದನ್ನು ಕೇಳಿ ಕೌಸಲ್ಯಯು, ಆ ಪ್ರಿಯವಾಕ್ಯವನ್ನು ನುಡಿದವರೆಲ್ಲರಿಗೂ ಬೇಕಾದಷ್ಟು ಸುವರಗಳನ್ನೂ, ಗೋವುಗಳನ್ನೂ, ನಾನಾವಿಧಗಳಾದ ರತ್ನಗಳನ್ನೂ ಕೊಟ್ಟಳು. ಇತಲಾಗಿ ರಾಮನು ದಶರಥನಿಗೆ ನಮಸ್ಕರಿಸಿ, ಹಿಂತಿರುಗಿ ರಥ ವನ್ನೇರಿ, ಅಲ್ಲಿ ನೆರೆದಿದ್ದ ಜನಗಳಿಂದ ವಿಶೇಷವಾಗಿ ಸತ್ಕರಿಸಲ್ಪಟ್ಟು, ತನ್ನ ಅರಮನೆಗೆ ಬಂದು ಸೇರಿದನು. ಆ ಸಭೆಯಲ್ಲಿ ನೆರೆದಿದ್ದ ಪುರಜನರೆಲ್ಲರೂ ದಶರಥನ ವಾಕ್ಯವನ್ನು ಕೇಳಿ, ತಾವು ಬಹುಕಾಲದಿಂದ ಬಯಸುತ್ತಿದ್ದ ರಾ ಮಾಭಿಷೇಕವು ಕೈಗೂಡುವಸಮಯವು ಬಂದೊದಗಿದುದಕ್ಕಾಗಿ ಬಹಳ ಸಂ ತೋಷಭರಿತರಾಗಿ, ಆ ದಶರಥನ ಅನುಮತಿಯನ್ನು ಪಡೆದು ಹಿಂತಿರುಗಿ ತಮ್ಮ ತಮ್ಮ ಮನೆಗಳನ್ನು ಸೇರಿದರು. ಆ ರಾಮಾಭಿಷೇಕಕಾರವು ನಿರಿಷ್ಟು ವಾಗಿ ನೆರೆವೇರಬೇಕೆಂಬ ಉದ್ದೇಶದಿಂದ ಒಬ್ಬೊಬ್ಬರೂ ತಮ್ಮ ತಮ್ಮ ಇಷ್ಟ ದೇವತೆಗಳನ್ನು ಭಕ್ತಿಯಿಂದ ಪೂಜಿಸುತಿದ್ದರು. ಇಲ್ಲಿಗೆ ಮೂರನೆಯ ಸರ್ಗವು ದಶರಥನು ಅಭಿಷೇಕಾರವಾಗಿ ರಾಮನನ್ನು ರೆಪಡಿಸಿದುದು.++ ಆತ್ತಲಾಗಿ ಪುರಜನರೆಲ್ಲರೂ ಹೊರಟುಹೋದಮೇಲೆ, ಕಾರಾಕಾರ ವಿವೇಚನೆಯಲ್ಲಿ ಚತುರನಾದ ದಶರಥನು, ಪುನಃ ಮಂತ್ರಿಗಳೊಡನೆ ಆಲೋಚಿಸಿ, ಕೊನೆಗೆ ಮನಸ್ಸಿನಲ್ಲಿ ದೃಢವಾದ ನಿಶ್ಚಯವನ್ನು ಮಾಡಿಕೊಂ ಡನು. ನಾಳೆಯೇಪುಷ್ಯ ನಕ್ಷತ್ರವಾಗಿರುವುದರಿಂದ ಕೆಂದಾವರೆಯಂತೆ ಕಣ್ಣುಗ ಛುಳ್ಳ ತನ್ನ ಮುದ್ದು ಮಗನಾದ ರಾಮನಿಗೆ ಯ್ವರಾಜ್ಯಪಟ್ಟವನ್ನು ಕಟ್ಟಿ ಬಿಡಬೇಕೆಂದು ಸಂಕಲ್ಪಿಸಿಕೊಂಡನು. ಆಮೇಲೆ ಆಂತಃಪುರಕ್ಕೆ ಹೋಗಿ ಸುಮಂತ್ರನನ್ನು ನೋಡಿ 'ಎಲೈ ಮಂತ್ರಿಯೆ ! ಪುನಃ ರಾಮನನ್ನು ಇಲ್ಲಿಗೆ ಕರೆದುಕೊಂಡುಬಾ”ಎಂದನು,ಅದರಂತೆಯೇ ಸುಮಂತ್ರನು ಬಹುವೇಗದಿಂದ ರಾಮನನ್ನು ಕರೆತರುವುದಕ್ಕಾಗಿ ಆತನ ಅರಮನೆಯ ಬಾಗಿಲಿಗೆ ಬಂದನು.