ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಮಯದ [ಸಳ, ೪ ಯನ್ನು ಕೇಳಿ ಮೊದಲೇ ಅಲ್ಲಿಗೆ ಬಂದಿದ್ದಳು. ಆಗ ಲಕ್ಷಣನೂ ಬಂ ಚು ಸಂಹನು, ಸೀತೆಯೂಕೂಡ ದಾಸೀಜನರಿಂದ ಆಗಲೇ ಅಲ್ಲಿಗೆ ಕರೆತಂಸ ಇಟ್ಟಳು. ನಾಳೆ ಪ್ರಷ್ಯನಕ್ಷತ್ರದಲ್ಲಿ, ನನ್ನ ಪ್ರಿಯಪುತ್ರನಾದ ರಾಮನಿಗೆ ಯುವರಾಜಪಟ್ಟವು ಕಟ್ಟಲ್ಪಡುವುದನ್ನು ಕೇಳಿ ಕೌಸಲ್ಯಯು, ಸುಮಿ ಲಕ್ಷಣರೊಡನೆಯೂ, ಸೀತೆಯೊಡನೆಯೂ ಪರಿವೃತಳಾಗಿ, ತನ್ನ ಮಗ ನ ಶ್ರೇಯೋಭಿವೃದ್ಧಿಗಾಗಿ ಕಣ್ಮುಚ್ಚಿ ಕೊಂಡು ಪ್ರಾಣಾಯಾಮಪೂರಕ ವಾಗಿ ಶ್ರೀಮನ್ನಾರಾಯಣನನ್ನು ಧ್ಯಾನಿಸುತ್ತಿದ್ದಳು. ಹೀಗೆ ನಿಯಮನಿಷ್ಠ ಳಾದ ತಾಯಿಯನ್ನು ನೋಡಿ, ರಾಮನು, ಆಕೆಗೆ ಸಾಷ್ಟಾಂಗಪ್ರಣಾಮವ ನ್ನು ಮಾಡಿ (ಅಮ್ಮಾ! ತಂದೆಯು ನನ್ನನ್ನು ಪ್ರಜಾಪರಿಪಾಲನಕಾರಕ್ಕಾಗಿ ನಿಯಮಿಸಿರುವನು. ಆತನ ಆಜ್ಞೆಯಿಂದ ನಾಳೆಯೆ ನನಗೆ ಯ್ವರಾಜ್ಯಾ ಭಿಷೇಕವು ನಡೆಯುವಂತಿದೆ! ಈ ದಿವಸದ ರಾತ್ರಿಯೆಲ್ಲವೂ ಸೀತೆಯೊಡನೆ ನಾನು ಉಪವಾಸವಿರಬೇಕೆಂದು ತಂದೆಯ ಆಜ್ಞೆಯಾಗಿರುವುದು ಮತ್ತಿ ಕುಗಳೂ, ಉಪಾಧ್ಯಾಯರೂ, ಹಾಗೆಯೇ ನಿಯಮಿಸಿರುವರು. ನಾಳೆ ಅಭಿ ಷೇಕವು ನಡೆಯುವಾಗ ಮಾಡಬೇಕಾದ ಮಂಗಳಕಾರಗಳೆಲ್ಲವನ್ನೂ ನೀನು ನನಗೂ, ಸೀತೆಗೂ ಈಗಲೇ ಮಾಡಿಸು” ಎಂದನು. ಇದನ್ನು ಕೇಳಿ ಕೌಸ ಲೈಯು, ಬಹುಕಾಲದಿಂದ ತಾನು ಅಪೇಕ್ಷಿಸುತ್ತಿದ್ದ ಕೋರಿಕೆಯು ಈಗ ನೆರವೇರಿತೆಂಬ ಮಿತಿಮೀರಿದ ಸಂತೋಷದಿಂದ ಉಬ್ಬಿ, ಆ ಆನಂದದಿಂದ ಕುಗ್ಗಿದ ಧ್ವನಿಯುಳ್ಳವಳಾಗಿ, ರಾಮನನ್ನು ಕುರಿತು, 14 ವತ್ಸ ರಾಮಾ ! ಚಿ ರಂಜೀವಿಯಾಗಿರು! ನಿನ್ನ ಶತ್ರುಗಳೆಲ್ಲರೂ ನಾಶಹೊಂದಲಿ! ನೀನು ರಾಜ್ಯಲ ಕೈಯೊಡಗೂಡಿ,ನನ್ನ ಮತ್ತು ಈಸುಮಿತ್ರೆಯ ಬಂಧುಗಳೆಲ್ಲರನ್ನೂ ಆನಂದ ಪಡಿಸು!ಎಲೆವನೆ ! ನನ್ನ ಸಂತೋಷವನ್ನು ಏನೆಂದುಹೇಳಲಿ! ಶುಭನಕ್ಷತ್ರದ ಕ್ಲಿ ನೀನು ನನ್ನ ಗರದಿಂದ ಉದಿಸಿರುವೆ. ನಿನ್ನ ಕಲ್ಯಾಣಗುಣಗಳಿಂದ ತಂದೆಯ ನ್ನು ಅನೇಕ ವಿಧದಲ್ಲಿ ಸಂತೋಷಪಡಿಸಿರುವೆ.ಎಲೆಕುಮಾರನೆ! ಇಕ್ಷಾಕುವಂ ಶದ ರಾಜ್ಯಲಕ್ಷ್ಮಿಯು ಈಗ ನಿನ್ನನ್ನು ಬಂದು ಸೇರುವಳು. ನಾನು ಇದುವರೆ ಚ ಪಂಡರೀಕಾಕ್ಷನಾದ ಶ್ರೀಮನ್ನಾರಾಯಣನನ್ನು ಕುರಿತು ವ್ರತೋಪವಾ ಸಾದಿನಿಯಮಗಳಿಂದ ನಡೆಸಿದ ಶ್ರಮವೆಲ್ಲವೂ ಈಗ ಸಫಲವಾಯಿತು! ಆಹಾ! ಇನ್ನು ನನ್ನ ಭಾಗ್ಯಕ್ಕೆ ಎಣೆಯೇನು?” ಎಂದಳು. ಆಮೇಲೆ ರಾಮನು