ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

su೮ ಶ್ರೀಮದ್ರಾಮಾಯಣವು [ಸರ್ಗ, ೯. ನನ್ನು ಹದಿನಾಲ್ಕುವರ್ಷಗಳವರೆಗೆ ಕಾಡಿಗೆ ಕಳುಹಿಸಬೇಕೆಂದೂ ನಿನ್ನ ಗಂಡ ನನ್ನು ಕೇಳು! ರಾಮನನ್ನು ದೇಶಭ್ರಷ್ಯನನ್ನಾಗಿ ಮಾಡಿಬಿಟ್ಟರೆ, ಅಮ್ಮ ರೊಳಗಾಗಿ ಪ್ರಜೆಗಳಿಗೆ ನಿನ್ನ ಮಗನಾದ ಭರತನಮೇಲೆ ಸಂಪೂರ್ಣವಾದ ಅನುರಾಗವು ಬೇರೂರುವುದು. ಅಮೇಲೆ ರಾಮನು ಹಿಂತಿರುಗಿ ಬಂದು ರಾಜ್ಯ ಕಾಗಿ ಎಷ್ಟು ಪಾಡುಪಟ್ಟರೂ, ಪ್ರಜೆಗಳಿಗೆ ಆತನಲ್ಲಿ ಅನುರಾಗವು ಹುಟ್ಟದು. ಅವನ ಪ್ರಯತ್ನ ವೆಲ್ಲವೂ ವಿಫಲವಾಗಿ,ಭರತನಿಗೇ ರಾಜ್ಯವು ಸ್ಥಿರಪಡುವುದು. ನೀನು ಕೇಳಬೇಕಾದ ವರಗಳೇನೆಂಬುದನ್ನು ಮಾತ್ರ ಈಗ ತಿಳಿಸಿದೆನು ಈ ಯತ್ನವನ್ನು ಕೈಗೂಡಿಸಿಕೊಳ್ಳುವುದಕ್ಕೆ ಬೇರೊಂದುದಾರಿಯನ್ನು ಸೂಚಿಸು ವೆನು ಕೇಳು!ನೀನು ಈಗಲೇ ಬಹುಕೋಪಗೊಂಡವಳಂತೆ ನಟಿಸುತ್ತ, *ಕೋ ಪಗೃಹಕ್ಕೆ ಹೋಗಿ,ಕೊಳೆಬಟ್ಟೆಯನ್ನುಟ್ಟು, ಬರೀ ನೆಲದಮೇಲೆ ಮಲಗಿಬಿಡು! ದಶರಥನು ನಿನ್ನ ಬಳಿಗೆ ಬಂದಾಗ, ಮಿತಿಮೀರಿದ ದುಃಖವನ್ನು ತೋರಿಸುತ್ತಿರು! ಆತನನ್ನು ಕಣ್ಣೆತ್ತಿಯೂ ನೋಡಬೇಡ. ಆತನಿಗೆ ಮುಖಕೊಟ್ಟು ಮಾತ್ರ ನಾಡಬೇಡ. ಸ್ವಾಭಾವಿಕವಾಗಿ ನಿನ್ನ ಗಂಡನಿಗೆ ಇತರಪತ್ನಿ ಯರಲ್ಲಿರುವುದ ಕ್ಕಿಂತಲೂ ನಿನ್ನಲ್ಲಿ ಹೆಚ್ಚು ಪ್ರೀತಿಯಿರುವುದೇನೋ ನಿಜವು. ಆದುದರಿಂದ ನೀನೇನುಮಾಡಿದರೂ ನಿನ್ನಲ್ಲಿ ಅವನಿಗೆ ಕೋಪವುಂಟಾಗದು. ಆತನು ನಿನ್ನ ಸಮೀಪಕ್ಕೆ ಬಂದೊಡನೆಯೇ ಗಟ್ಟಿಯಾಗಿ ಅಳುವುದಕ್ಕಾರಂಭಿಸು! ನಿನ್ನಲ್ಲಿ ಆತನಿಗಿರುವ ಪ್ರೀತಿಯನ್ನು ನೋಡಿದರೆ,ನಿನಗಾಗಿ ಅವನು ಅಗ್ನಿ ಪ್ರವೇ ಶವನ್ನು ಮಾಡುವುದಕ್ಕೂ ಹಿಂಜರಿಯುವವನಲ್ಲ. ನಿನ್ನಲ್ಲಿ ಆತನಿಗೆ ಕೋಪವೆಂ ಬುದು ಎಂದಿಗೂ ಹುಟ್ಟದು. ನಿನ್ನ ಮಾತನ್ನು ಸ್ವಲ್ಪವೂ ಮಿರತಕ್ಕವನಲ್ಲ. ಆತನು ನಿನ್ನ ಕೋಪವನ್ನು ನೋಡಿ ಸ್ವಲ್ಪವೂ ಸಹಿಸಲಾರನು. ನಿನ್ನನ್ನು ಸಂತೋಷಪಡಿಸುವುದಕ್ಕಾಗಿ ತನ್ನ ಪ್ರಾಣವನ್ನಾದರೂ ಬಿಟ್ಟು ಬಿಡು ವನು. ಎಲೆ ಮಂದಬುದ್ಧಿಯುಳ್ಳವಳೆ ! ನಿನ್ನ ಶಕ್ತಿಯನ್ನೇ ನೀನರಿಯೆ ! ರಾಜನು ನಿನ್ನನ್ನು ಸಮಾಧಾನಪಡಿಸುವುದಕ್ಕಾಗಿ, ಬೇಕಾದಷ್ಟುರತ್ನಾಭರಣ ಗಳನ್ನೂ, ಸುವರ್ಣಗಳನ್ನೂ,ಇನ್ನೂ ನಾನಾವಿಧಗಳಾದ ಉತ್ತಮಪದಾರ್ಥ

  • ಕೋಶಗೃಹವೆಂದರೆ, ಪ್ರನಯಕಲಹಾದಿಗಳಿಂದ ಕೋಪಗೊಂಡವರು ಹೋಗಿ ವಿವಿಕ್ತವಾಗಿ ಮಲಗುವ ಪ್ರತ್ಯೇಕವಾದ ಮನೆ.