ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೨೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೫೬ ಮಾಡಿದ್ದುಣೋ ಮಹಾರಾಯ, ಮಾದ-ನೀನು ಹೆದರದೆ, ಧೈಯ್ಯದಿಂದ ಕೆಲಸ ಮಾಡಿದರೆ ಸಾಕು, ನಾವೆಲ್ಲರೂ ಒಂದಾಗಿ ಕೆಲಸಮಾಡುತ್ತೇವೆ. ನಾಳೆ ಎಲ್ಲರೂ ಹೊರಡುತ್ತಾರೆ. ಅನರಸಂಗಡ ನೀನೂ ಹೊರಡಬೇಕು. ಆದರಿಂದಲೇ ಈ ದಿವಸ ಶಾಸ್ತಮಾ ಡಿ ಗುಡಿಗೆ ಕರೆದುಕೊಂಡು ಹೋಗಿದ್ದೆವು. ನೀನು ಮಾಡಬೇಕಾದ ಕೆಲಸಗಳನ್ನು ಹೇಳುತ್ತೇನೆ ಕೇಳು. ನೀನು ಕನ್ನದೊಳಗೆ ನುಗ್ಗಬೇಕಾದ ದಿವಸಕ್ಕೆ ಹಿಂದಿ ನರಾತ್ರೆ ಚೆನ್ನಾಗಿ ನಿದ್ರೆಮಾಡಿ ಬೆಳಗ್ಗೆ ಎದ್ದು ನಿನ್ನ ತಲೆಯನ್ನು ನುಣ್ಣಗೆ ಬೋಳಿಸಿಕೊಳ್ಳಬೇಕು. ಇನ್ನು ಇರಕೂಡದು, ಅದು ಇದ್ದರೆ ಯಾರಾದರೂ ಹಿಡಿ ದುಕೊಳ್ಳಬಹುದು. ಆದಿನ ಹಗಲು ಅರೆಹೊಟ್ಟಿ ಊಟಮಾಡಬೇಕು. ರಾತ್ರೆ ಹಾಲನ್ನು ಕುಡಿಯಬೇ ಕು, ಅನ್ನ ತಿನ್ನಬಾರದು. ಹಾಗೆ ತಿಂದರೆ ತಪ್ಪಿ ಸಿಕೊಂಡು ಓಡಲು ದೇಹ ಸವಾರವಾಗಿರುವುದಿಲ್ಲ, ಮೈಗೆಲ್ಲಾ ಎಂಣೆತೊಡದು ಕೊಳ್ಳಬೇಕು. ಹಿಡಿದು ಕೊಂಡರೆ ಚಾರಿಹೋಗುತ್ತೆ. ಉಡಿದಾರವೂ ಕೌಪೀನ ವೂ ಬಾಳೆಪಟ್ಟಿ ನಾರಿನದಾಗಬೇಕು. ಹಿಡಿದುಕೊಂಡರೆ ಕಿತ್ತು ಹೋಗುತ್ತೆ. ಮುಖಕ್ಕೆ ಲ್ಯಾ ಮಸೀಬಳಿದುಕೊ “ಬೇಕು. ಕಂಡರೆ ಗುರುತುಸಿಕ್ಕುವುದಿಲ್ಲ. ಯಾರಾ ದರೂ ಹಿಡಿದುಕೊಂಡರೆ ಅನಾಯಸ್ಕಳಕ್ಕೆ ತೆಗೆದು ಓಡಿಹೋಗಬೇಕು. ನಾರಿನ ಉಡಿದಾರಕ್ಕೆ ಸಂಣ ಬಾಕನ್ನು ಸಿಕ್ಕಿಸಿಕೊಂಡಿರಬೇಕು. ಯಾರಾದರೂ 33