ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೧೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

* ಮಾಡಿದ್ದುಣೋ ಮಹಾರಾಯ, ರ್ವಾದವನ್ನು ಮಾಡಿ ಫಲವುಂ ತ್ರಾಕ್ಷತೆಯನ್ನು ಒಪ್ಪಿಸಿದರು. ಉಳಿದವರೆಲ್ಲಾ ನಮಸ್ಕಾರಮಾಡಿದರು. ಒಂದು ಪಕ್ಕದಲ್ಲಿ ಮದನಕ್ಕಳು ಹಸೆಯಮೇಲೆ ಕೂತುಕೊಂಡಿದ್ದರು. ಮೇಳಕ ಚಿತ್ತು, ಹೆಂಗಸರು ಹಾಡನ್ನು ಹೇಳುತಿದ್ದರು. ಆ ದಿವಸಕ್ಕೆ ಆ ಸಮಯಕ್ಕೆ ತಕ್ಕ ಹಾಗೆ ಸದಾಶಿವದೀಕ್ಷಿತನು ಮರುನುಡಿ ಯುಳ್ಳ ಒಂದು ಕೀರ್ತನೆಯನ್ನು ಹೊಸದಾಗಿ ಮಾಡಿದ್ದನು. ಬಹಳ ಚತುರನಾದ ಒಬ್ಬ ಸಂಗೀತಗಾರನು ಅದನ್ನು ಹಾಡುತಿದನು. ಮದುವೇ ಮನೆಯ ಗದ್ದಲದ ವಿಭವ ಹೀಗೆಲ್ಲಾ ಇರುವಾಗ, ! ಯಾ ಇಲಾಹ ಇಲ್ಲಿಲಾ, ಹನ್ನದ ರಸವಿಲ್ಲ ! ಅಲ್ಲಾ ಹೊಅಕಬರ್ 2' ಎಂದು ಸಭೆಯ ಮಧ್ಯೆ ಗಟ್ಟಿಯಾದ ಕೂಗು ಕೇಳಿತು. ಅದರಲ್ಲಿಯೂ ಈ ಸದ್ದು ವೈದಿಕ ಮಂಡಲಿಯಿಂದಬಂತು. (ಳ ಮೇಳಗಳೆಲ್ಲಾ ನಿಂತು ಹೋದಮ, ಎಲ್ಲರಿಗೂ ಗಾಬರಿಯಾಯಿತು. ಎಲ್ಲಿಂದ ಈ ಕೂಗು ಬಂತೋ ಗೊತ್ತಾಗಲಿಲ್ಲ. ಸವಾರಿಯ ಸಂಗಡ ಬಂದಿದ್ದ ಚೋಪದಾರರನ್ನು ಕರೆದು ಕೇಳುವಲ್ಲಿ ಅವರು ಹಾಗೆ ಕೂಗಲಿಲ್ಲವೆಂದು ತಿಳಿಯಿತು. ಕೊನೆಗೆ ಉದಾಸೀನ ಭಾವದಿಂದ ಬಿಟ್ಟು ಸಭೆಯು ತಂತಮ್ಮ ಮುಂದಿನ ಕೆಲಸ ವನ್ನು ನಡೆಸಲು ಆರಂಭವಾಯಿತು. ಆಗ ಬಿಳೀ ಸೀರೆಯನ್ನುಟ್ಟು ತಲೆಯಮೇಲೆ ಸೆರಗನ್ನು ಹೊದ್ದು ಹೆಂಗಸರ ಗುಂಪಿನೊಳಗಿನಿಂದ ಸರನೆ ಒಬ್ಬನು ತೈದೆಯು ಬಂದು ಸಸೇಮೇಲೆ ಕೂತಿದ್ದ ಮದನಕ್ಕಳ ಮುಂದೆ ಆರತಿಮಾಡಿ ಇರಿಸಿದ್ದ ತಟ್ಟೆಯನ್ನು ಹಿಡಿದು