ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೧೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨೬ ಮಾಡಿದ್ದು ಸ್ಪೂ ಮಹಾರಾಯ. ಹೆಚ್ಚಾಗಿ ಯಾತನೆಯಾಯಿತು. ವಾಸಿಯಾಗುವುದಕ್ಕೆ ಎಂದು ಹತ್ತು ದಿವಸ ಬೇಕಾಯಿತು. ಈ ಹಗರಣವೆಲ್ಲಾ ಆದಮೇಲೆ ಒಂದು ದಿವಸ ಸೀತಮ್ಮ ನು ರಾತ್ರೆ ಅತ್ತೆ ಮಲಗಿಕೊಂಡಮೇಲೆ ತಟ್ಟೆಯಲ್ಲಿ ಎಲೆ ಅಡಿಕೆಯನ್ನು ಹಿಡಿದು ಮುಚ್ಚಿ ಕೊಂಡು ಗಂಡನ ಚಿಕ್ಕ ಮನೆಗೆ ಹೋದಳು. ಅಲ್ಲಿ ಹೆಂಡತಿಯು ಗಂಡನಿಗೆ ಎಲೆ ಅಡಿಕೆಯ ನ್ನು ಮಡಿಸಿಕೊಡುತಿರುವಾಗ ಗಂಡನ ಕೈ ಸೀತಮ್ಮನ ಬರೇ ಗಾಯಕ್ಕೆ ತಗಲಿತು. ಅಗ ಸೀತಮ್ಮ ನು - ಹಾ ?” ಎಂದಳು, ಮಹಾ-ಯಾಕೆ (ಹಾ ಎನ್ನುತೀಯ ? ಕೈ ಏನಾಗಿದೆ ? ಸೀತ - ಗಾಯವಾಗಿ ಊದಿಕೊಂಡಿದೆ. ಮಹಾ-ಎಲ್ಲಿ ಗಾಯವಾಯಿತು ? ಇಷ್ಟು ದೊಡ್ಡ ಗಾಯ ವಾಗುವಹಾಗೆ ಎಲ್ಲಿಯಾದರೂ ತಗಲಿತೆ? ಕಾರಣವೇನು? ಸೀತ - ವಾಸಿಯಾಗುತಾ ಇದೆ. ಮಹಾ-ಇಂಥಾ ಗಾಯಕ್ಕೆ ಕಾರಣವೇನು ? ಸೀತ -ಏನೋ ತಗಲಿತು. ಮಹಾ-ಏನು ತಗಲಿತು ? ಸೀತ -ಕೊಳ್ಳಿ ತಗಲಿತು. ಮಹಾ-ಕೊಳ್ಳಿ ತಗಲಿಸಿಕೊಂಡು ಇಷ್ಟುಗಾಯವನ್ನು ಮಾಡಿ ಕೊಳ್ಳಬಹುದೆ ? ಪುಣ್ಯವಂತರ ಮನೆಯಲ್ಲಿ ಸುಖ ವಾಗಿ ಬೆಳೆದವಳು. ಇಲ್ಲಿ ಕೆಲಸಕ್ಕೆ ಹೊರಟರೆ ಕೈ ಮೈ ಸುಟ್ಟು ಕೊಳ್ಳುವುದೇ ಅದುವರೆಗೂ ಸುಮ್ಮನಿದ್ದ ಸೀತಮ್ಮನಿಗೆ ಸ್ವಲ್ಪ ನಾ WN N