ಪುಟ:ಸಮತಿ ಮದನಕುಮಾರರ ಚರಿತ್ರ.djvu/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸುಮತಿ ಮದನಕುಮಾರರ ಚರಿತ್ರ [ಅಧ್ಯಾಯ ಕೊಡೆಂದು ಅವರು ನನ್ನ ನ್ನು ಕೇಳಿಕೊಂಡರು. ಆಗ ನಾನು ಚಿಕ್ಕ ಕುಲ್ಲಾ ವಿ ಚಿಕ್ಕವನಿಗೂ ದೊಡ್ಡ ಕುಲ್ಲಾ ವಿ ದೊಡ್ಡ ವನಿಗೂ ಸಲ್ಲತಕ್ಕ ದ್ದೆಂದು ತೀರ್ಮಾನಮಾಡಿದೆ. ನಾನು ಹೀಗೆ ತೀರ್ಮಾನಮಾಡಿದ್ದ ಕ್ಕಾಗಿ ನಮ್ಮ ಉಪಾಧ್ಯಾಯರು ನನ್ನನ್ನು ಶಿಕ್ಷಿಸಿದರು. ನ ಹೀಗೆಂದು ಲೋಹಕನು ಹೇಳಲಾಗಿ, ದೊರೆಯು-ಶಿಕ್ಷಿಸುವು ದಕ್ಕೆ ಕಾರಣವೇನು ? ದೊಡ್ಡವನು ದೊಡ್ಡ ಕುಲ್ಲಾ ವಿಯನ್ನೂ ಚಿಕ್ಕ ವನು ಚಿಕ್ಕ ಕುಲ್ಲಾ ವಿಯನ್ನೂ ಹಾಕಿಕೊಳ್ಳುವುದು ನ್ಯಾಯವೇ, ಎಂದು ಹೇಳಿದನು. ಕೂಡಲೆ ಅರಸುಮಗನು-ಅಪ್ಪಾಜಿ, ಹವುದು ಹಾಗೆಯೇ ಸರಿ, ಆದರೆ ನಮ್ಮ ಉಪಾಧ್ಯಾ ಯರು ಹೇಳಿದ್ದು ಬೇರೆ, “ ಯಾವ ಕುಲ್ಲಾ ವಿ ಯಾರ ತಲೆಗೆ ಆಗುವುದು ಎಂಬುವುದನ್ನು ತೀರ್ಮಾನಿಸಿದ್ದು ನ್ಯಾಯ ತೀರಿಸಿದಹಾಗಾಗಲಿಲ್ಲ; ದೊಡ್ಡ ಹುಡುಗ ಚಿಕ್ಕ ಹುಡುಗನ ಕುಲ್ಲಾ ವಿಯನ್ನು ತೆಗೆದುಕೊಂಡದ್ದು ನ್ಯಾಯವೇ ಅನ್ಯಾಯವೆ ? ಎನ್ನು ವುದನ್ನು ವ್ಯವಸ್ಥೆ ಮಾಡತಕ್ಕದ್ದೇ ಅಲ್ಲಿ ಮುಖ್ಯವಾದ ಸಂಗತಿ. ಆದ್ದರಿಂದ ನೀನು ಮಾಡಿದ ತೀರ್ಮಾನ ನ್ಯಾಯವಾದ್ದಲ್ಲ.” ಹೀಗೆಂದು ಅವರು ನನಗೆ ಹೇಳಿ ಗದರಿಸಿದರು, ಎಂಬದಾಗಿ ಉತ್ತರ ಕೊಟ್ಟನು. - ಈ ಕಥೆಯು ಮುಗಿಯುವ ಸಮಯಕ್ಕೆ ಸರಿಯಾಗಿ, ಮೈ ಮೇಲೆ ಕಾಸಿನಗಲ ಬಟ್ಟೆಗೂ ಗತಿ ಇಲ್ಲದ ಒಬ್ಬ ಒಕ್ಕಲಿಗರ ಹುಡುಗನು ಒಂದು ಬಟ್ಟೆ ಗಂಟನ್ನು ಕಂಕುಳಲ್ಲಿ ಇರುಕಿಕೊಂಡು ಓಡಿಓಡಿ ಹತ್ತಿ ರಕ್ಕೆ ಬಂದನು. ಆ ಹುಡುಗನಿಗೆ ಮಂಡಿ ತರೆದುಹೋಗಿ ರಕ್ತ ಸುರಿಯು ತಿತ್ತು ; ಮೊಳಕೈ ಕೆತ್ತಿ ಹೋಗಿತ್ತು ; ಕಣ್ಣಿನಲ್ಲಿ ಬಂದ ನೀರನ್ನು ಒರ ಸಿದ ಕಲೆಯೂ ಇನ್ನೂ ಕಣ್ಣಿನಲ್ಲಿ ನೀರು ಬರುವ ಸಂದರ್ಭವೂ ಚೆನ್ನಾಗಿ ಕಾಣುತಿತ್ತು. ಆ ಹುಡುಗನು ಮದನನ ಮುಂದೆ ಬಂದು ನಿಂತು, ಅವನನ್ನು ನೋಡಿ- ಬುದ್ದಿ, ಈ ನಿಮ್ಮ ಬಟ್ಟೆಗಳನ್ನು ನೀವೇ ತೆಗೆದು ಕೊಳ್ಳಿ, ನಾನು ಒಲ್ಲೆ. ಈ ಮಾಳವಾದ ಬಟ್ಟೆ ನನ್ನ ಜೀವನಕ್ಕೆ ಹೊಣೇಬೇಡುವಹಾಗೆ ಮಾಡಿತು, ಎಂದನು. ಇದನ್ನು ಕಂಡು ಜೋಯಿಸನು, ಮದನ ಕೊಟ್ಟ ಉಪಹಾರ ದಿಂದ ಏನೋ ವಿಪರ್ಯಾಸ ನಡೆದಿರಬೇಕೆಂದು ತನ್ನ ಮನಸ್ಸಿನಲ್ಲಿ