ಪುಟ:Abhaya.pdf/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

"ಹೂಂ. ನಾನೇ ಹೋಗ್ಬರಿನಿ"

"ತುಂಗನ್ನ ಕರಕೊಂದು ಹೋಗ್ತೀಯಾ ಜತೇಲಿ?"

"ಹೂಂ. ಹೋಗ್ತೀನಿ."

ಜಲಜ ಎದ್ದಳು. ಜ್ವರದಿಂದ ಕ್ಷೀಣವಾಗಿದ್ದ ದೇಹ

ಗಾಳಿಯಲ್ಲಿ ತೂರಾಡಿತು.

ತನ್ನಸ್ಥಿತಿಗೆ ತಾನೇ ನಕ್ಕು ಆಕೆ, "ಬನ್ನಿ ತುಂಗಕ್ಕ," ಎಂದಳು.

ತುಂಗಮ್ಮ ಜಲಜಳೊಡನೆ ಕೊಠಡಿಯಿಂದ ಹೊರ ಹೋದ ಮೇಲೆ,

ಸರಸಮ್ಮ ಅಲಮೇಲು-ದಮಯಂತಿಯರಟತ್ತ ತಿರುಗಿದರು....

ಕೊಠಡಿಯ ಹೊರಗೆ ತುಂಗಮ್ಮ ದಿನದ ಬೆಳಕಿನಲ್ಲಿ ಅಭಯಧಾಮದ

ಕಟ್ಟಡವನ್ನು ಕಂಡಳು.ಚಚೌಕನಾದ ಆ ಕಟ್ಟಡದ ನಡುವೆ ಖಾಲಿಜಾಗದಲ್ಲಿ ಹೂಗಿಡಗಳು ಆಕಾಶ ನೋಡಿ ನಗುತ್ತಲಿದ್ದುವು ಆ ಹುಡುಗಿಯರೇ ನೀರೆರೆದು ಅಣಿಗೊಳಿಸಿದ್ದ ಪುಷ್ಪೂನ್ಯಾನಕ್ಕೆ, ತುಳಸೀಕಟ್ಟೆಯೊಂದು ಮೂಗುತಿಯಾಗಿತ್ತು. ಹೂಗಿಡಗಳ ಆ ಜಾಗದ ಸುತ್ತಲೂ ಜಗಲಿ. ಜಗಲಿಯ ಹಿಂದೆ ಎರಡು ಸಾಲುಗಳಲ್ಲಿ ಎದುರುಬದುರಾಗಿ ಕೊಠಡಿಗಳಿದ್ದುವು. ಒಂದು ಸಾಲಿನ ಮೂಲೆಯೇ ಅಡುಗೆಮನೆ ಇನ್ನೊಂದರ ಕೊನೆಯಲ್ಲಿ ಕಕ್ಕಸು ಬಚ್ಛಲುಮನೆ. ಮೂರನೆಯ ಪಾರ್ಶ್ವ ವಿಶಾಲವಾದ ಹಜಾರವಾಗಿತ್ತು.

ತುಂಗಮ್ಮನೊಡನೆ ಜಲಜ ಆ ಜಗಲಿಯುದ್ದಕ್ಕೂ ನಡೆದು ಹೋದಾಗ,

ಹುಡುಗಿಯರಿನ್ನೂ ಕಸಗುಡಿಸುವ ಕೊನೆಯ ಘಟ್ಟದಲ್ಲಿದ್ದರು. ಮಾತು, ಪುಟ್ಟ ಜಗಳ, ಗಲಭೆ, ನಗು..

ಅವರಲ್ಲಿ ಕೆಲವರು ನಾನಾ ರೀತಿಯಾಗಿ, 'ಜ್ವರ ನಿಂತಿತೇ ಜಲಜ?

ಎಂದು ಕೇಳಿದರು.

ಅವರೆಲ್ಲರೂ ತುಂಗಮ್ಮನನ್ನು ನೆಟ್ಟದೃಷ್ಟಿಯಿಂದ ನೋಡಿದರು.

ಸರಸ್ವತಿ, ಸಾವಿತ್ರಿ, ಲಲಿತ ಮ್ಮುಗುಳ್ನಕ್ಕರು ಕೂಡಾ. ಅವರ ಪಾಲಿಗೆ ತುಂಗಮ್ಮ ಆಗಲೆ ಪರಿಚಿತಳು. ಅಳುಕುತ್ತಲೆ ತುಂಗಮ್ಮ ಅವರನ್ನೆಲ್ಲ ನೋಡಿದಳು ಕೆಲವು ದೃಷ್ಟಗಳು ನಿರ್ವಿಕಾರವಾಗಿದ್ದುವು. ಕೆಲವದರಲ್ಲಿ ಕುತೂಹಲವಿತ್ತು ಆದರೂ ಹೆಚ್ಚಿದವರೆಲ್ಲ ಮೌನವಾಗಿ ತನಗೆ ಸ್ವಾಗತ ಬಯಸುತಿದ್ದುದನ್ನೆ ತುಂಗಮ್ಮ ಕಂಡಳು.