ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮ ಶ್ರೀಮದ್ರಾಮಾಯದವು. [ಸರ್ಗ. ೩. ಥಗಳಲ್ಲಿಯೂ, ರಾಜಬೀದಿಗಳಲ್ಲಿಯೂ, ಬೌದ್ಧ ದೇವಾಲಯಗಳಲ್ಲಿಯೂ, ಆ “ಲೆಗಳಲ್ಲಿಯೂ, ಪದಾಧ್ಯಸಮೃದ್ಧಿಯಿಂದ ಶೋಭಿಸುತ್ತಿರುವ ಅಂಗಡಿಗಳ ಕ್ಲಿಯೂ, ಭಾಗ್ಯಶಾಲಿಗಳಾದ ಗೃಹಸ್ಥರ ಮನೆಗಳಲ್ಲಿಯೂ, ಪಟ್ಟಣದೊ ಭಗಿನ ದೊಡ್ಡ ದೊಡ್ಡ ಸಭಾಮಂಟಪಗಳಲ್ಲಿಯೂ, ಅಲ್ಲಲ್ಲಿ ಕಾಣುವ ಗಿಡಗಳ ಮೇಲೆಯೂ ವಿಚಿತ್ರಗಳಾದ ಮಂಗಳಧ್ವಜಗಳು ಎತ್ತಿ ಕಟ್ಟಲ್ಪಟ್ಟುವು. ವಿಚಿತ್ರವರ್ಣಗಳುಳ್ಳ ಪತಾಕೆಗಳು ನಡಲ್ಪಟ್ಟುವು. ಅಲ್ಲಲ್ಲಿ ನಟವಿಟಗಾಯ ಕಾದಿಗಳೆಲ್ಲರೂ ಸೇರಿ ನರನಗಳನ್ನೂ, ಗಾನಗಳನ್ನೂ ನಡೆಸುತ್ತಿರಲು, ಮನ ಸ್ಸಿಗೂ ಕಿವಿಗಳಿಗೂ ಆನಂದಕರವಾಗಿರುವ ಅವರ ಧ್ವನಿಯು ಪಟ್ಟಣಪ್ರದೇ ಶವನ್ನೆಲ್ಲಾ ವ್ಯಾಪಿಸಿತು, ಈ ರಾಮಾಭಿಷೇಕೋತ್ಸವವು ಸಮೀಪಿಸಲು, ಅಲ್ಲಲ್ಲಿ ಜನರು ಅಂಗಳಗಳಲ್ಲಿಯೂ, ಮನೆಮನೆಗಳಲ್ಲಿಯೂ ಆ ಉತ್ಸವಸಂಭ ಮವನ್ನು ಕುರಿತೇ ಪರಸ್ಪರಸಲ್ಲಾಪಗಳನ್ನು ಮಾಡುತ್ತಿದ್ದರು. ಬೀದಿಗಳ ಕ್ಲಿ ಆಡುತ್ತಿದ್ದ ಎಳಮಕ್ಕಳಕೂಡ, ಅಲ್ಲಲ್ಲಿ ಗುಂಪುಗೂಡಿ ಒಬ್ಬರಿಗೊಬ್ಬರು ಈ ಪ್ರಸ್ತಾವವನ್ನೇ ಹೇಳಿ ಕೊಂಡಾಡುತ್ತಿದ್ದರು. ಪಟ್ಟಣವಾಸಿಗಳು ಬೀ ದಿಗಳೆಲ್ಲವನ್ನೂ ಪಪ್ಪೋಪಹಾರಗಳಿಂದಲೂ, ಧೂಪದೀಪಗಳಿಂದಲೂ ಅಲಂಕರಿಸಿಟ್ಟರು, ರಾಮನು ಪಟ್ಟಾಭಿಷಿಕ್ತನಾಗಿ ಆನೆಯಮೇಲೇರಿ ಮೆರೆ ವಣಿಗೆಬರುವ ಸಮಯಕ್ಕೆ, ಹೊತ್ತುಮೀರಿ ರಾತ್ರಿಯಾಗಬಹುದೆಂಬ ಶಂಕೆ ಯಿಂದ, ಬೀದಿಬೀದಿಗಳಲ್ಲಿ ದೊಡ್ಡದೊಡ್ಡ ವೃಕ್ಷಾಕಾರವಾದ ದೀಪಸ್ತಂ ಭಗಳನ್ನು ಬೆಳಗಿಸಿಟ್ಟರು. ಹೀಗೆ ಪುರಜನರೆಲ್ಲರೂ ಪಟ್ಟಣವನ್ನಲಂಕರಿಸಿ ಅಭಿ ಷೇಕಸಮಯವನ್ನೇ ನಿರೀಕ್ಷಿಸುತ್ತ, ಅಲ್ಲಲ್ಲಿ ಗುಂಪುಗೂಡಿ, ಒಬ್ಬರಿಗೊಬ್ಬರು ಈ ವಿಷಯವನ್ನೇ ಕುರಿತು ಮಾತನಾಡುತಿದ್ದರು. ದಶರಥನಿಗೆ ಈಸದುದ್ದೇಶ ವುಂಟಾದುದಕ್ಕಾಗಿ ಆತನನ್ನು ಕೊಂಡಾಡುತ್ತ, 'ಭಲೆ! ಲೋಕದಲ್ಲಿ ನಮ್ಮ ದಶರಥರಾಜನಂತೆ ಧರರು ಬೇರೆ ಯಾರುಂಟು? ತನಗೆ ವಾರ್ಧಕದತೆ ಯುಂಟಾದುದನ್ನು ತಾನೇ ತಿಳಿದುಕೊಂಡು, ರಾಮನಿಗೆ ಪಟ್ಟವನ್ನು ಕಟ್ಟುವು ದಾಗಿ ಉದ್ದೇಶಿದನಲ್ಲವೆ? ಲೋಕದಲ್ಲಿರುವ ವಸ್ತುಗಳ ತಾರತಮ್ಯವನ್ನು ಆಚೆ ನ್ಯಾಗಿಬಲ್ಲ ಶ್ರೀರಾಮನು ನಮಗೆ ರಾಜನಾಗಿರಬೇಕೆಂದು ನಾವು ಬಹುಕಾಲ ದಿಂದ ಹಾರೈಸುತ್ತಿದ್ದೆವು. ದೈವಾನುಗ್ರಹದಿಂದ ಈಗ ನಮಗೆ ಆಕೋರಿಕೆಯು ಕೈಗೂಡಿತು ರಾಮನ ಕಲ್ಯಾಣಗುಣಗಳನ್ನು ಹೇಳತಕ್ಕುದೇನು!ರಾಜಕುಮಾರ