ಪುಟ:ಪ್ರಬಂಧಮಂಜರಿ.djvu/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪೀಠಳ. ದ್ವಿತೀಯ ಮುದ್ರಣದ ಪೀಠಿಕೆ, ದ್ವಿತೀಯ ಮುದ್ರಣದಲ್ಲಿ ಈ ಗ್ರಂಥವನ್ನು ಆಮೂಲಾಗ್ರವಾಗಿ ಶೋಧಿಸಿ, ವಾಕ್ಯ ರಚನೆಯ ವಿಧಿಗಳಿಗೆ ಮೊದಲು ಕೊಟ್ಟಿದ್ದ ಉದಾಹರಣೆಗಳಿಗೆ ಬದಲು ಹೊಸಗನ್ನಡದ ವಚನಗ್ರಂಥಗಳಿಂದ ಬೇರೆ ವಾಕ್ಯಗಳನ್ನು ಎತ್ತಿ ಬರೆದಿದ್ದೇನೆ. ಹೊಸದಾಗಿ ಇಪ್ಪತ್ತು ಪ್ರಬಂಧಗಳನ್ನು ಸೇರಿಸಿದ್ದೇನೆ. ಆದರೂ ಎಲ್ಲಾ ವಿದ್ಯಾರ್ಥಿಗಳಿಗೂ ಈ ಪುಸ್ತಕವು ಸುಲಭವಾಗಿರಲೆಂದು ಕ್ರಯವನ್ನು ಎಂಟಾನಗೆ ಇಳಿಸಿದೆ. ಮದ್ರಾಸು ಯೂನಿವರ್ಸಿಟಿಯ ಪರೀಕ್ಷೆಗಳಲ್ಲಿಯೂ ಇನ್ನು ಮೇಲೆ ಕನ್ನಡದಲ್ಲಿ ಪ್ರಬಂಧರಚನೆಯನ್ನು ಒಂದು ಮುಖ್ಯ ವಿಷಯವನ್ನಾಗಿ ಇಟ್ಟಿದ್ದಾರೆ. ಆದುದರಿಂದ ಮೈಸೂರು ದೇಶೀಯ ಪರೀಕ್ಷೆಗಳಿಗೆ ಓದುವವರಿಗೆ ಮಾತ್ರವಲ್ಲದೆ, ಮದ್ರಾಸು ಯನಿವರ್ಸಿಟಿಯ ಪರೀಕ್ಷೆಗಳಿಗೆ ಓದುವವರಿಗೂ ಈ ಗ್ರಂಥವು ಬಹಳ ಉಪಯುಕ್ತವಾಗಬಹುದೆಂದು ನಂಬಿದ್ದೇನೆ. ಬೆಂಗಳೂರು, ) ಮೇ, 1909, ಎಸ್, ಟ, ಠಾ. ತೃತೀಯ ಮುದ್ರಣದ ಪೀಠಿಕೆ. ತೃತೀಯಮುದ್ರಣದಲ್ಲಿ ಪ್ರಬಂಧಗಳಿಗೆ ತಕ್ಕ ಮೂವತ್ತು ಹೊಸ ವಿಷಯಗಳಿಗೆ ಸಾರಾಂಶಗಳ ಪಟ್ಟಿಗಳನ್ನು ಕೊಟ್ಟಿರುವುದಲ್ಲದೆ, ಕನ್ನಡದಲ್ಲಿ ಕ್ಷೇಮಸಮಾಚಾರದ ಕಾಗದಗಳನ್ನು ಬರೆಯುವ ಕ್ರಮವನ್ನು ಸಂಕ್ಷೇಪವಾಗಿ ಉದಾಹರಣೆಗಳೊಡನೆ ವಿವರಿಸಿದೆ, ಮೈಸೂರು ದೇಶದ ವಿದ್ಯಾಭ್ಯಾಸದ ಇಲಾಖೆಯ ಇನ್‌ಸ್ಪೆಕ್ಟರ್ ಜನರಲ್ ಸಾಹೇಬರವರು ಈ ಪುಸ್ತಕವನ್ನು ಸಂಸ್ಥಾನದ ಎಲ್ಲಾ ಕನ್ನಡ ಮತ್ತು ಎ ವಿ. ಸ್ಕೂಲುಗಳಲ್ಲಿ ಬಹುಮಾನವಾಗಿ ಕೊಡಬಹುದೆಂದು ಅಂಗೀಕರಿಸಿರುವುದಲ್ಲದೆ, ಎಲ್ಲಾ ಹೈ ಸ್ಕೂಲುಗಳಲ್ಲಿ ಯ ನಾ, ರ್ಮಲ್ ಸ್ಕೂಲುಗಳಲ್ಲಿಯೂ ಪ್ರಬಂಧರಚನೆಯ ವಿಷಯದಲ್ಲಿ ಉಪಯೋಗಿಸತಕ್ಕ ಪುಸ್ತಕ. ವನ್ನಾಗಿ ನಿಯಮಿಸಿರುತ್ತಾರೆ. ಈ ಪ್ರೋತ್ಸಾಹಕ್ಕಾಗಿ ನಾನು ಅವರಿಗೆ ಬಹಳ ಕೃತಜ್ಞನಾಗಿದ್ದೇನೆ. ಹಾಸನ, ಎಸ್, ಟ, ರಾ. ನವೆಂಬರ್, 1918,