ಪುಟ:ಪ್ರಬಂಧಮಂಜರಿ.djvu/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

9o ಪ್ರಬಂಧಮಂಜರಿ-ಮೊದಲನೆಯ ಭಾಗ M - 3, ಕಾಲ, ಪಕ್ಷಾಂತರ, ಕಾರಣ ಮೊದಲಾದುವನ್ನು ಸೂಚಿಸುವ ವಾಕ್ಯಭಾಗಗಳ ಮೇಲೆ. ಇದಕ್ಕೆ ಉದಾಹರಣೆಗಳನ್ನು ಶಬ್ದ ಕ್ರಮ'ದ ಪ್ರಕರಣದಲ್ಲಿ ನೋಡಬಹುದು. 4. ಸಂಬೋಧನ ಪದದ ಮೇಲೆ, ಉದಾ. ಬಾಲಕರೆ, ಈ ಪುಸ್ತಕದಲ್ಲಿ ಹೇಳಿರುವ ವಿಧಿಗಳನ್ನೆಲ್ಲಾ ಚೆನ್ನಾಗಿ ನೆನಪಿಡಿ. (4) : ವಿವರಣ ಚಿಹ್ನೆ (The Colon). ಒಂದು ವಾಕ್ಯದ ಅರ್ಥವನ್ನು ವಿವರಿಸುವುದಕ್ಕೆ ಮುಂಚೆ ಇದನ್ನು ಬರೆವರು. ಉದಾ ಶ್ರೀರಾಮನಕೀರ್ತಿ ಪ್ರಪಂಚದಲ್ಲೆಲ್ಲಾ ಹರಡಿಕೊಂಡಿದೆ: ಆತನು ಅಷ್ಟು ಸುಗುಣಿಯಾಗಿದ್ದನು. (5) - ಗೀಟು (The Dash). ಇದು ಹಠಾತ್ತಾಗಿ ನಿಲ್ಲಿಸುವುದನ್ನೂ , ಅನ್ವಯದ ಬದಲಾವಣೆಯನ್ನೂ ತೋರಿಸುವುದು. ಉದಾ ನಾನಿಲ್ಲಿಗೆ ಬಂದುದು ಒಳ್ಳೆಯದು, ನಾನು ಈಗ ಅದನ್ನು ಹೇಳುವುದಕ್ಕಿಲ್ಲ. 4 ಸಲೀಮನು ಹೆಂಡತಿಯ ಹೆಸರನ್ನು ವ್ಯತ್ಯಾಸಪಡಿಸಿ ನೂರ್‌ಜಹಾನ್-ಎಂದರೆ ಜಗತ್ತಿನ ಬೆಳಕು-ಎಂದು ಹೆಸರಿಟ್ಟನು.” (6) :- ವಿವರಣ ಚಿಹ್ನೆ ಮತ್ತು ಗೀಟು, ಇದು ಎಣಿಕೆವಿವರಣ, ಉದಾಹರಣ ಇವುಗಳಲ್ಲಿ ಬರುವುದು, ಉದಾಜಯಕ್ಕೆ ಆವಶ್ಯಕವಾದುವು ಮರು:-ಸಿರಪ್ರಯತ್ನ, ಚಾತುರ್ಯ, ತಾಳ್ಮೆ, ನಾನು ಶ್ರೇಷ್ಠರೆಂದು ಭಾವಿಸುವ ಕವಿಗಳು ಯಾರೆಂದರೆ:-ವಾಲ್ಮೀಕಿ, ಕಾಳಿದಾಸ, ಭವಭೂತಿ, (7) ? ಪ್ರಶ್ನೆ ಚಿಹ್ನೆ (The Point of Interrogation). ಇದನ್ನು ಪ್ರಶ್ನವ ಕ್ಯದ ಕೊನೆಯಲ್ಲಿ ಹಾಕುವರು. ಉದಾಆ ಗದ್ದುಗೆಯೇರಿದ ಮಾತ್ರಕ್ಕೆ ಬುದ್ಧಿವಂತನಾದಾನೆ ?” (8) • • • • ಅನುಕರಣ ಚಿಹ್ನೆ (The Quotation Marks). ಬೇರೊಂದು ಕಡೆಯಿಂದ ಎತ್ತಿ ಬವಾಗಲೂ, ಒಬ್ಬರು ಹೇಳಿದ ಮಾತನ್ನು ಹೇಳಿದ ಹಾಗೆಯೇ ಬರೆವಾಗಲೂ ಇದನ್ನು ಪ್ರಯೋಗಿಸುವರು. ಉದಾ