ಪುಟ:ಕಥಾಸಂಗ್ರಹ ಸಂಪುಟ ೨.djvu/೧೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಂದ್ರಜಿತ್ಸಂಹಾರ 165 ಪ್ರಯೋಗಿಸಲು ಅದು ಮಹಾ ವೇಗದಿಂದ ಹೊರಟು ಎದುರಿಗೆ ಬರುತ್ತಿರುವ ಇಂದ್ರ ಜಿದ್ಯಾಣ ಪರಂಪರೆಯನ್ನು ಮೊದಲು ಕಡಿದು ಬೀಳಿಸಿ ಮುಂದೆ ಹೋಗಿ ಇಂದ್ರ ಜಿನ ಶಿರಸ್ಸನ್ನು ಕಡಿದು ಆಕಾಶಕ್ಕೆ ಹಾರಿಸಿತು. ಆಗ ಪಾಕಶಾಸನನು ತಾನೇ ಸುರದುಂದುಭಿಯನ್ನು ಯಥೇಚ್ಛವಾಗಿ ಬಾರಿಸಿದನು. ಅನಂತರದಲ್ಲಿ ಇಂದ್ರಜಿತ್ತಿನ ಶಿರಸ್ಸು ದಶಕಂಠನ ಭುಜಕೀರ್ತಿಯು ಭೂಮಿಗೆ ಬೀಳುವಂತೆ ಬಿದ್ದಿತು. ಇನ್ನೇನು ಹೇಳತಕ್ಕುದು ? ನಿಶಾಚರ ರಾಜಲಕ್ಷ್ಮಿಯು ಅಪುತ್ರವತಿಯಾದಳು. ರಾವಣನ ಧೈರ್ಯಲಕ್ಷ್ಮಿಯ ಕಣ್ಣುಗಳು ಹೋದವು. ನಕ್ತಂಚರ ಸಾರ್ವಭೌಮನ ವೀರಲಕ್ಷ್ಮಿಯ ತಲೆಯು ಬೋಳಿಸಲ್ಪಟ್ಟಿತು. ರಾಕ್ಷಸರ ಗರ್ವಾದಿಯು ಕುಸಿದು ಬಿದ್ದಿತು ದುರ್ವ್ಯ ತ್ರಿಯು ಮೂರ್ಛಹೋಯಿತು. ಸತ್ಕರ್ಮವು ಮೂರ್ಛ ತಿಳಿದೆದ್ದು ಕುಳಿತಿತು. ಧರ್ಮಾ ಭಿಮಾನ ದೇವತೆಯ ಹೃದಯದಲ್ಲಿ ವಿಕಾಸವುಂಟಾಯಿತು. ಪರಹಿಂಸೆಯ ತಲೆಯು ಕಳಚಿತು ರಾವಣನ ಸಿರಿಯು ಮಗಿಲ್ಲ ದಾನನವಾಯಿತು. ರಾವಣನ ವಾಮ ಭೂಭುಜಗಳು ಹಾರಿದವು. ನಿಶಾಚರ ಚಕ್ರವರ್ತಿಯ ಕೀರ್ತಿಕಾಂತೆಯ ಮು೦ದ ಲೆಯು ವಿರೋಧಿಗಳ ಕೈಗೆ ಸಿಕ್ಕಿತು. ಅಪಜಯವು ಲಂಕಾದುರ್ಗ ದ್ವಾರ ಪ್ರವೇಶ ಇನ್ನು ಮಾಡಿತು. ಹಾ, ಹಾ, ಅಯ್ಯೋ ! ಪರಭೀಕರವಾದ ಲಂಕಾ ರಾಜಧಾನಿಯೇ ! ನಿನ್ನ ಅಂತಸ್ವಾರವು ಬರಿದಾಯಿತೇ ಎಂದು ನಿಶಾಚರ ಬಲದಲ್ಲಿ ದುಃಖಧ್ವನಿಯ ಗದ್ದಲವೆದ್ದಿತು. ವಿಭೀಷಣನು ಶೀಘ್ರವಾಗಿ ಹೋಗಿ ಎರಡು ಕೈಗಳಿಂದಲೂ ಆ ತಲೆಯನ್ನೆತ್ತಿಕೊಂಡು ಅಪ್ಪಿ ಮುದ್ದಾಡಿ ದುಃಖಿಸುತ್ತ ಹಾ ! ಮಕ್ಕಳ ಮಾಣಿ ಕವೇ ! ಅಯ್ಯೋ ರಾಕ್ಷಸ ಕುಲಕ೦ದಾ ! ದಶಗಳನ ಕ೦ದಾ ! ಮಡಿದುಹೋ ದಿಯಾ ? ಪಾಪಿಯಾದ ನಿನ್ನ ತಂದೆಯ ಪಾಪಕೃತ್ಯವು ನಿನಗೆ ಈ ಸ್ಥಿತಿಯನ್ನು ಕೊಟ್ಟಿ ತಲ್ಲದೆ ಲೋಕತ್ರಯದಲ್ಲೂ ನಿನ್ನನ್ನು ಜಯಿಸುವ ವೀರರುಂಟೇ ? ಇಂಥ ಕುಲದೀಪ ಕನಾದ ಪುತ್ರನನ್ನು ಕಳೆದು ಕೊಂಡು ಬಾಳುವ ನಮ್ಮ ದುಸ್ಸಿತಿಗಿಂತಲೂ ಹೇಯವಾ ದುದು ಯಾವುದುಂಟು ? ಪುತ್ರ ಮಿತ್ರ ಭಾತೃವಧೆಗಳನ್ನು ಕಣ್ಣಾರ ಕಂಡೆನೇ ? ಹಾ, ಮಗನೇ ! ಹಗರಾಯ ಗಂಡನೇ ! ಅರಿಗಳ ಶಿರಸ್ಸುಗಳನ್ನು ತರಿದೊಟ್ಟು ವೆನೆಂದು ನನ್ನನ್ನು ಬೈಯ್ದಟ್ಟಿ ದಿಯಲ್ಲಾ ? ನೀನಾದರೂ ಬಾಳಿದಿಯಾ ? ಹಾ ! ರಾಕ್ಷಸರಾಜ್ಯಾರಿ ಬುಧಿ ಪೂರ್ಣ ಚಂದ್ರನೇ ! ಶೂರನಾದ ನೀನು ಬಾಲ್ಯದಲ್ಲೇ ಇಂದ್ರನನ್ನು ಜಯಿಸಿದೆ. ಯಮನನ್ನು ಬಡಿದಿ. ಮರುತ್ತು ರ್ಬೆರಾದ್ಯರನ್ನು ಹೊಡೆದು ಮರ್ಧೆಗೊಳಿಸಿದೆ. ಎಲೈ ನನ್ನ ಸಿಡರಿಯೇ ! » ನನ್ನ ಜಿಂಕೆಯ ಎಳೆಮರಿಯೇ ! ಎಲೈ ಮುಗುಳಗೆಯ ಮುದ್ದು ಮೊಗದ ರನ್ನ ದಬೊಂಬೆಯೇ ! ಅರಿಶರಕ್ಕೆ ಶಿರಸ್ಸನ್ನಿತ್ತು ಸತ್ತು ಎತ್ತ ಹೋದಿ ? ಎಲೈ ಪುತ್ರ ಚಿಂತಾರ ವೇ ! ಶ್ರೀರಾಮನನ್ನು ಹೊಗಳುತ್ತಿರುವ ನನ್ನನ್ನು ಬೈಯು ಹೊಡೆಯದೆ ಏಕೆ ಸುಮ್ಮನಿರುವಿ? ವೀರಾಗ್ರಗಣ್ಯನಾದ ನಿನಗಿದು ಭೂಷಣವೇ ? ಶಿವಶಿವಾ ! ಮಹಾದೇವಾ ! ಇಂಥ ಘೋರಕರ್ಮವನ್ನು ಕಂಡೆನೇ ಎಂದು ದುಃಖ ವೆಂಬ ಕಡಲಿನಲ್ಲಿ ಬಿದ್ದು ಕಡೆಗಾಣದೆ ತೇಲಿ ಮುಳುಗಿ ಮರ್ಧೆಹೋದನು. ಆಗ ಲಕ್ಷ್ಮಣ ಜಾಂಬವನ್ನೀಲಾಂಜನೇಯಾದಿಗಳು ಶೀಘ್ರವಾಗಿ ಅವನ ಸಮೀಪಕ್ಕೆ ಬಂದು