ಪುಟ:ಕಥಾಸಂಗ್ರಹ ಸಂಪುಟ ೨.djvu/೨೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬ ನಯ ಭಾಗ PROVERBS-ಗಾದೆಗಳು ಅಂಕೆಯಿಲ್ಲದ ಕಪಿ ೮೦ಕೆಸುಟಿತು. ಅಂಜಿದವನ ಮೇಲೆ ಕಪ್ಪೆ ಹಾಕಿದ ಹಾಗೆ. ಅಂತೂ ಇಂತೂ ಕು೦ತಿ ಮಕ್ಕಳಿಗೆ ರಾಜ್ಯ ವಿಲ್ಲ. ಅ೦ದಿಗೆ ಅದೇ ಸುಖ, ಇಂದಿಗೆ ಇದೇ ಸುಖ. ಅಂಬಲೀ ಕುಡಿಯುವವನಿಗೆ ಮೀಸೆ ತಿಕ್ಕುವವನೊಬ್ಬ, ಅಕ್ಕ ತಂಗಿಯರಾದಾಗ ಅಕ್ಕಸಾಲೆ ಬಿಡ. ಅಕ್ಕನ ಸೇವೆ ಭಾವನ ಕಠಾರಿ. ಅಕ್ಕರೆಯಿಂದ ಗಿಣೀ ಸಾಕಿ ಬೆಕ್ಕಿನ ಬಾಯಿಗೆ ಕೊಟ್ಟಾರೇ ? ಅಕ್ಕಸಾಲೆ ಕಿವಿಚುಚ್ಚಿದರೆ ನೋವಿಲ್ಲ. `ಅಕ್ಕಿ ಕೊಟ್ಟು ಅಕ್ಕನ ಮನೆಯೇ ? ಅಕ್ಕಿಯ ಜೋಕೆಯಾಗಿರಬೇಕು, ಅಕ್ಕನ ಮಕ್ಕಳೂ ಜೋಕೆಯಾಗಿರಬೇಕು. ಅಗಸರ ಕತ್ತೆ ಕೊಂಡು ಹೋಗಿ ದೊಂಬರರಿಗೆ ತ್ಯಾಗಹಾಕಿದ ಹಾಗೆ. ಅಜ್ಜಿ ಮನೆಗೆ ಅಜ್ಜ ಬಂದ ಹಾಗೆ, ಅಟ್ಟದಿಂದ ಬಿದ್ದವನನ್ನು ದಡಿಯಿಂದ ಚೆಚ್ಚಿದ ಹಾಗೆ. ಅಟ್ಟೆ ಪಾಯಸದಲ್ಲಿ ಕೆರಾ ಇಟ್ಟ ಹಾಗೆ, ಅಡವಿಗೆ ಹೋದರೂ ಚಿಗಟದ ಕಾಟ ತಪ್ಪದು. ಅಡಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು. ಅಡಿಕೆಯನ್ನು ಉಡಿಯಲ್ಲಿ ಹಾಕಬಹುದು, ಮರವಾದ ಮೇಲೆ ಕೂಡದು. ಅತಿ ಸ್ನೇಹ ಗತಿ ಕೆಡಿಸಿತು. ಅತ್ತೆಯೊಡೆದ ಪಾತ್ರೆಗೆ ಬೆಲೆಯಿಲ್ಲ, ಅದಕ್ಕದು ಉಳಿ ಕೊಡತಿಯ ನ್ಯಾಯ. ಅಪ್ಪ ನೆಟ್ಟ ಆಲದ ಮರವೆಂದು ನೇಣು ಹಾಕಿಕೊಳ್ಳಬಹುದೇ ? ಅಭ್ಯಾಸವಿಲ್ಲದ ಬ್ರಾಹ್ಮಣ ಹೋಮಾ ಮಾಡಿ, ಗಡ್ಡ ಮೀಸೆ ಸುಟ್ಟು ಕೊಂಡ. ಅರಸನ ಕುದುರೆ ಕಾಲು ತುಳಿದರೆ ಅವನಿಗೆ ಬಂದ ಭಾಗ್ಯವೇನು ? ಅರಸನ ಕುದುರೆ ಲಾಯದಲ್ಲಿಯೇ ಮುಪ್ಪಾಯಿತು. ಅಲ್ಪ ಕಾರ್ಯಕ್ಕೆ ಅರಮನೆಗೆ ಹೋಗಬಾರದು.