ಪುಟ:ಪ್ರಬಂಧಮಂಜರಿ.djvu/೧೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪದ್ಧತಿ, ೧೬೫ 59, ಪದ್ಧತಿ. ಯಾವುದಾದರೂ ಒಂದು ಕೆಲಸವನ್ನು ಬಾರಿಬಾರಿಗೆ ಬಹಳ ಕಾಲದ ವರೆಗೂ ಮಾಡಿದರೆ, ಪ್ರಯತ್ನಿ ಸದೆಯೇ ಆ ಕೆಲಸವನ್ನು ಮಾಡುವ ಸ್ವಭಾವವು ಉಂಟಾಗುವುದು. ಇದಕ್ಕೆ ಪದ್ಧತಿ ಅಥವಾ ವಾಡಿಕೆಯೆನ್ನುವರು. ಮನುಷ್ಯನಿಗೆ ಹುಟ್ಟಿನಿಂದ ಬಂದ ಗುಣಗಳು ಪದ್ಧತಿಯಿಂದ ಮಾರ್ಪಟ್ಟು ಅವನ ಸ್ವಭಾವವೇ ಬೇರೆಯಾಗಿ ಅವನು ಹೊಸಬನಾಗುವನು, ಯಾವುದಾದರೂ ಪದ್ಧತಿ ಬಿದ್ದರೆ ಅದನ್ನು ಬಿಡಲಾಗುವುದಿಲ್ಲ. ಅನೇಕ ರಿಗೆ ಬೆಳಗ್ಗೆ ಕಾಫಿ ಕುಡಿವುದು ಪದ್ಧತಿಯಾಗಿದೆ. ಅಂಥವರಿಗೆ ಒಂದು ದಿನ ಕಾಫಿ ನಿಂತರೂ ಯಾವ ಕೆಲಸವನ್ನು ಮಾಡುವುದಕ್ಕೂ ಮನಸ್ಕೊಡದೆ, ಮಂಕುಮುಚ್ಚಿಕೊಂಡು ತಲೆನೋವು ಬರುವುದು, ಕೆಲವರಿಗೆ ಊಟವಾದ ಮೇಲೆ ಏನಾದರೂ ಸ್ವಲ್ಪ ತಿಂಡಿಯನ್ನು ತಿನ್ನು ವ ವಾಡಿಕೆಯಿರುವುದುಂಟು. ಅವರಿಗೆ ಆಗ ತಿಂಡಿಯನ್ನು ತಪ್ಪಿಸಿದರೆ ಊಟಮಾಡಿದಂತೆಯೇ ಇರುವುದಿಲ್ಲ. ಹೀಗೆಯೇ ಅಡಕೆಲೆಹಾಕಿಕೊಳ್ಳುವ ಪದ್ದತಿಯಿರುವವರಿಗೂ ಅದನ್ನು ಊಟ. ವಾದೊಡನೆ ಕೊಡದಿದ್ದರೆ, ತೊಂದರೆಯಾಗುವುದು, ಮಧ್ಯಾಹ್ನ ಮಲಗಿಕೊಳ್ಳುವ ಪದ್ದತಿಯಿರುವವರಿಗೆ ಆ ಸಮಯಕ್ಕೆ ಸರಿಯಾಗಿ ನಿದ್ದೆ ತಾನಾಗಿಯೇ ಬರುವದು :ಅದನ್ನು ತಪ್ಪಿಸಲಾಗುವುದಿಲ್ಲ. ಹಾಗೆ ಬಲಾತಾ ರದಿಂದ ಒಂದೆರಡು ದಿನ ಮಾಡುತ್ತ ಬಂದರೆ ದೇಹಕ್ಕಾಲಸ್ಯವಾಗುವುದು. ಬೆಳಗ್ಗೆ ಏಳು ಗಂಟೆಯಾದಮೇಲೆ ಹಾಸಿಗೆಯಿಂದೇಳುವ ಅಭ್ಯಾಸವಿರುವವರನ್ನು ಮುಂಜಾನೆ ಏಳುವಂತೈಮೂಡುವುದು ದುಸ್ತರ. ನಸ್ಯವನ್ನು ಹಾಕಿಕೊಳ್ಳುವ ದುರಭ್ಯಾಸವಿರುವವರಿಗೆ ಅದನ್ನು ಬಿಡಿಸುವುದಕ್ಕಾಗಿ ನಸ್ಯವನ್ನು ಕೊಡದೆಹೋದರೆ ಹುಚ್ಚು ಹಿಡಿದಂತಾಗುವುದು ಎಲ್ಲರಿಗೂ ತಿಳಿದೇ ಇದೆ. ಹೀಗೆ ಎಷೋ ದೃಷ್ಟಾಂತಗಳನ್ನು ಕೊಡಬಹುದು. ಇವುಗಳಲ್ಲಿ ಯಾವದೊಂದೂ ಹುಟ್ಟಿದಮೊದಲು ಯಾರಿಗೂ ಇರುವುದಿಲ್ಲ; ಆಮೇಲೆ ಬಹಳ ದಿನಗಳ ವರೆಗೆ ತಪ್ಪದೆ ಅಭ್ಯಾಸಮೂಡಿದುದರಿಂದ ಉಂಟಾಯಿತು. ಒಳ್ಳೆಯದಾಗಲಿ ಕೆಟ್ಟುದಾಗಲಿ ಪದ್ದತಿ ಬಿದ್ದ ಮೇಲೆ ಅದನ್ನು ಬಿಡುವುದು ಕಷ್ಟ. ಕೆಲವು ಕಾರ್ಯಗಳು ನಮಗೆ ಮೊದಲು ಒಗ್ಗದೆ ಅವಕ್ಕೆ ನಾವು ಮನ ಸ್ಪನ್ನು ಕೊಡದೆಯೇ ಇರಬಹುದು, ಕೊನೆಗೆ ಅಭ್ಯಾಸದಿಂದ ಅವೇ ನಮಗೆ ಬಲು ಇಂಪಾಗುವುವು. ಆ ಕೃತ್ಯಗಳಲ್ಲಿ ಮೊದಲು ತೋರುತ್ತಿದ್ದ ಕೊರತೆ