ಪುಟ:ಪ್ರಬಂಧಮಂಜರಿ.djvu/೧೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದಾನ. 76 ಕುವುದರಿಂದೇನು ಫಲ? ಹಲ್ಲುಹಿಡಿದು ನೋಡುವವನಿಗೆ ಎಮ್ಮೆ ಯನ್ನು ಧರ್ಮಾರ್ಥವಾಗಿ ಕೊಡಬಹುದೆ ? ಧನಿಕಂಗೆ ಮಾಳ್ವದಾನು | ವನನಿಧಿಯೊಳ್ಳರೆವ ಮಳೆಗೆ ತೊಣೆಯೆನಲಕ್ಕುಂ | ಪರದುಃಖವನ್ನು ಹೋಗಲಾಡಿಸುವುದೇ ದಾನಮಾಡುವುದರ ಉದ್ದೇಶವು; ಆದರೆ ಪಾತ್ರವಿವೇಚನೆಯಿಲ್ಲದೆ ಮಾಡಿದ ದಾನವುಯಾಚನಾವೃತ್ತಿಯನ್ನು ಪ್ರೋತ್ಸಾಹಿಸಿ ಲೋಕಕ್ಕೆ ಕೇಡುಮಾಡುತ್ತದೆ. ನಮ್ಮ ದೇಶದಲ್ಲಿ ದಾತೃಗಳೆನಿಸಿಕೊಂಡಿರುವ ಅನೇಕರು ದಾನಮಾಡುವುದು ತಮ್ಮ ಧರ್ಮವೆಂದರಿತು. ಪಾತ್ರಾಪಾತ್ರವಿವೇಚನೆಯಿಲ್ಲದೆ ತಮ್ಮಲ್ಲಿಗೆ ಬಂದ ಪ್ರತಿಯೊಬ್ಬ ಯಾಚಕನಿಗೂ ಸಹಾಯಮಾಡುತ್ತ ಬರುವರು. ಈ ರೀತಿ ಮಾಡದೆ ಪಾತಾಪಾತ್ರ ವಿವೇಚನೆಮಾಡುವ ಪಕ್ಷದಲ್ಲಿ, ಶಕ್ತರಾಗಿದ್ದರೂ ಸೋಮಾರಿತನದಿಂದ ಅಹನ್ಯಹನಿ ಕಾಲಕ್ಷೇಪಮಾಡುತ್ತ ಕಷ್ಟ ಪಡುತ್ತಿರುವ ಅನೇಕ ಯಾಚಕರು ನೀಚವಾದ ಯಾಚನಾವೃತ್ತಿಯನ್ನು ಬಿಟ್ಟು ದೇಶದಲ್ಲಿ ಉಪಯುಕ್ತರಾದ ಬನರಾಗಬಹುದು. ಈಗ ಹಿಂದೂಗಳಲ್ಲ ಬಲುಮಂದಿ ಯಾಚಕರಾಗಿರುವುದಕ್ಕೆ ತುಂಬಾ ಸಂತೋಷಿಸುವರು; ಇವರಲ್ಲಿ ಕೆಲವರು, ಬಡಕೆಲಸಗಾರನು ಕಷ್ಟ ಪಟ್ಟು, ಎದೆಯೊಡೆದುಕೊಂಡು, ದುಡಿದುಪಡೆವ ಕೂಲಿಹಣಕ್ಕಿಂತಲೂ ಹೆಚ್ಚಾಗಿ ಯಾಚನೆಯಿಂದಲೇ ಸಂಪಾದಿಸುವರು. ಹೀಗಾದುದರಿಂದಲೇ ಹಿಂದೂದೇಶದ ದೊಡ್ಡ ಪಟ್ಟಣಗಳಲ್ಲಿ ಲೆಕ್ಕವಿಲ್ಲದಷ್ಟು ಯಾಚಕರು ಬೀದಿ ಬೀದಿಯಲ್ಲಿಯೂ ಅಲೆಯುತ್ತಿರುವುದು ಆಶ್ಚರ್ಯವಲ್ಲ. ಹಣಗಾರನಿಗೆ ತನ್ನ ಹಣವನ್ನು ದಾನಮಾಡಬೇಕೆಂಬ ಕೋರಿಕೆಯಿದ್ದರೆ ದಾನಾರ್ಹರಾದ ದರಿದ್ರರಿಗೆ ಕೊಡಬೇಕು. ಅಂಗಹೀನರಾಗಿದ್ದು, ದುಡಿದು ಜೀವಿಸಲಾರದ ಬಡವರೂ ವಿದ್ಯಾರ್ಥಿಗಳೂ ದಾನಕ್ಕೆ ಪಾತ್ರರು. ಇಂಥವರನ್ನು ತಾನೇ ಹುಡುಕಿನೋಡಿ ದಾನಮಾಡಬೇಕು. ಇದಕ್ಕೆ ಕಾಲವಿಲ್ಲದಿದ್ದರೆ, ದಾನಪಾತ್ರರನ್ನು ಆರಿಸಲೇ ರ್ಪಟ್ಟಿರುವ ಸಭೆಯ ಮೂಲಕವಾದರೂ ಸತ್ತಾತ್ರಕ್ಕೆ ದಾನಮಾಡಲು ಯತ್ನಿ ಸುವುದು, ಆದರೆ ದಾನಮಾಡುವುದಕ್ಕೆ ಮೊದಲು ತನ್ನ ಮಕ್ಕಳುಮರಿಯನ್ನು ನೋಡಿಕೊಳ್ಳಬೇಕು ಹೊರಗಿನವರಿಗೆ