ಪುಟ:ಪ್ರಬಂಧಮಂಜರಿ.djvu/೧೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹವಾದಿಂದ ಮನುಷ್ಯರಿಗಾಗುವ ಬದಲಾವಣೆ, ೧೪೫ ರುವುವು;ಎತ್ತರವಾದ ಪರ್ವತವಜಗಳೂ ದೊಡ್ಡ ದೊಡ್ಡ ನದಿಗಳೂ ಎಲ್ಲೆಲ್ಲಿ ಯೂ ವಿಶೇಷವಾಗಿ ಕಾಣುವುವು. ಇವುಗಳ ದರ್ಶನದಿಂದಜನರಲ್ಲಿ, ಸ್ವಭಾ ವವನ್ನು ಮಾರಿದ ಅತಿಶಯೋಕ್ತಿ ಉತ್ಪಕ್ಷೆ ಮೊದಲಾದವರ್ಣನೆಗೆಬೇಕಾದ ಊಹನಾಶಕ್ತಿಯುಂಟಾಗುವುದು, ಸಮಶೀತೋಷ್ಣ ದೇಶಗಳಲ್ಲಿಯಾದರೂ ಪ್ರಪಂಚದ ವಸ್ತುಗಳು ಶಾಂತಸ್ವಭಾವವುಳ್ಳವುಗಳಾಗಿರುವಂತೆಕಾಣುತ್ತವೆ, ಜನರ ಊಹನಾಶಕ್ತಿಗೆ ಅಷ್ಟು ಅವಕಾಶವಿಲ್ಲ. ಆದುದರಿಂದ ಅವರಿಗೆ ಸ್ವಭಾ ವವರ್ಣ ನೆಯ ಕಾವ್ಯಗಳನ್ನು ಬರೆಯಲುಮನಸ್ಸು ಓಡುವುದು, ಯುಕ್ರಾಯು ಕವಿಚಾರಪರತೆ, ನೀತಿಯೊಡಗೂಡಿದ ಆಶಯಗಳುಇವರಲ್ಲಿ ತುಂಬಿವೆ.ಅತಿ ಶೀತದೇಶದಲ್ಲಿ ಎಲ್ಲಿ ನೋಡಿದರೂ ಕತ್ತಲೆ ಕವಿದುಕೊಂಡಂತಿರುವುದು. ಇದ ರಿಂದ ಜನರು ಮಂಕು ಮುಚ್ಚಿಕೊಂಡು ಮೂಢರಾಗಿರುವರು. ಉಷ್ಣ ದೇಶದ ಅದ್ಭುತವಾದ ಸಾಕೃತಿಕ ವಸ್ತುಗಳು ಆಸ್ತಿಕತೆಯನ್ನುಂಟುಮಾಡಿ ಜನರಿಗೆ ದೇವರಲ್ಲಿ ಭಕ್ತಿಯನ್ನು ಹೆಚ್ಚಿಸುತ್ತವೆ. ಸಮಶೀತೋಷ್ಣ ವಲಯದಲ್ಲಿ ಜನರಿಗೆ ತಮ್ಮಲ್ಲಿ ತಮಗೆ ನಂಬಿಕೆ ಹೆಚ್ಚು; ಅವರು ಸಾಮಾನ್ಯವಾಗಿ ನಾಸ್ತಿಕರು, ಉಷ್ಣ ದೇಶದಲ್ಲಿ ರಸಭರಿತ ಕಾವ್ಯಕ್ಕೂ, ಸಂಗೀತ ಚಿತ್ರ ಮೊದಲಾದ ಕುಶಲ ವಿದ್ಯೆಗಳಿಗೂ, ಸಮಶೀತೋಷ್ಣ ದೇಶದಲ್ಲಿ ಶಾಸ್ತ್ರಗಳಿಗೂ ಪ್ರಾಬ”ವ್ರ. ಶೀತದೇಶದಲ್ಲಿ ಯಾವ ವಿಧವಾದ ವಿದ್ಯೆಯೂ ಇಲ್ಲದೆ ಜನರು ಬುದ್ದಿಯಲ್ಲಿ ಚತುಷ್ಟಾದಗಳಿಗೆ ಸಮಾನರಾಗಿರುವರು. ಉಷ್ಣ ದೇಶಗಳಲ್ಲಿ ಪ್ರಕೃತಿಸಿದ್ಧವಾದ ಆನುಕೂಲ್ಯಗಳಿಂದ ನಾಗರಿಕತೆ, ಮೊದಲೇ ಉಂಟಾಗುವುದು;ಆದರೆಒಂದೆಲ್ಲೆ ಯವರೆಗೂ ಹೋಗಿ ಮುಂದಕ್ಕೆ ಸುಳಿಯದೆಅಲ್ಲಿಯೇ ನಿಂತು ಬಿಡುತ್ತದೆ. ಇಂಥ ದೇಶಗಳು ಸಾಮಾನ್ಯವಾಗಿ ನಿರಂಕುಶ ಪ್ರಭುಗಳ ಕೈಕೆಳಗಿದ್ದು ,ಅವರು ಮಾಡಿದಏರ್ಪಾಡುಗಳನ್ನು ಜನರು ಉಸಿರೆತ್ತದೆ ಅನುಸರಿಸುವರು, ಸಮಶೀತೋಷ್ಣ ದೇಶದಲ್ಲಿ ನಾಗರಿಕತೆ ಈಚೆಗೆ ಹುಟ್ಟಿದರೂ, ಯಾವಾಗಲೂ ಹೆಚ್ಚು ತ್ರ, ಸಾಹಿತ್ಯ, ತತ್ವ ವಿಚಾರ, ಶಾಸ್ತ್ರ ಮೊದಲಾದ ಎಲ್ಲಾ ಭಾಗಗಳಲ್ಲಿಯೂ ಏಳಿಗೆಗೆ ಬರುತ್ತದೆ. ಇಲ್ಲಿಯ ಜನರಿಗೆಯಾವವಿಧವಾದತೊಂದರೆಯನ್ನೂ ಸಹಿಸದೆಸ್ವತಂತ್ರವಾಗಿಜೀವಿಸ... ಬೇಕೆಂಬ ಬುದ್ದಿಯುಂಟಾಗುವುದು. ಆದುದರಿಂದ ಇಲ್ಲಿ ಪ್ರಜಾ ಪ್ರಭುತ್ವವೇ ಹೆಚ್ಚು. ಶೀತವಲಯದಲ್ಲಿ ನಾಗರಿಕತೆಯ ಸೆಲೆಯೇ ಇರುವುದಿಲ್ಲ; ಯಾವ ವಿಧವಾದ ರಾಜ್ಯಭಾರವೂ ಇಲ್ಲ. ಪ್ರತಿಯೊಬ್ಬನೂ ತನಗೆ ತಾನೇ ದೊರೆ. 10