ಪುಟ:ಪ್ರಬಂಧಮಂಜರಿ.djvu/೧೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೮ ಪ್ರಬಂಧಮಂಜರಿ---ಎರಡನೆಯ ಭಾಗ (9) ನಮ್ಮ ಪೂರ್ವಿಕರ ಅತ್ಯದ್ಭುತವಾದ ಶಿಲ್ಪ ಕೌಶಲ್ಯವನ್ನು ಪುರಾತನ ದೇವಾಲಯಗಳಲ್ಲಿ ನೋಡಬಹುದು, ತಂಜಾವೂರು, ಬೇಲೂರು ದೇವಾಲಯಗಳು, (3) ಪೂಜಾಕ್ರಮ, (4) ಹಿಂದೂದೇವಾಲಯದಲ್ಲಿ ನಡೆವ ದಾನಧರ್ಮಗಳು, (6) ದೇವಾಲಯದಲ್ಲಿ ನಡೆವ ಮಹೋತ್ಸವಕಾಲಗಳಲ್ಲಿ ಜನಸಂಘ, ಹಿಂದೂಗಳ ದೈವಭಕ್ತಿ, 12. ಹಿಂದೂಜನರ ಉಡುಪು. (3) ಉತ್ತಮ, ಮಧ್ಯಮ, ಅಧಮ ಜಾತಿಯವರ ಉಡುಪುಗಳ ವರ್ಣನೆ, ಬಡವರಿಗೂ ಹಣಗಾರರಿಗೂ ಉಡುಪಿನಲ್ಲಿ ಭೇದ. (2) ಹೆಂಗಸರ ಉಡುಪು, (3) ಹುದ್ದೆದಾರರ ಉಡುಪು. ಇದು ಇಂಗ್ಲಿಷ್ ಉಡುಪಿನ ಮಾದರಿಗೆ ಇಳಿಯುತ್ತಿರುವುದು, (4) ಇಂಗ್ಲಿಷ್ ಉಡುಪಿಗೂ ನಮ್ಮ ಉಡುಪಿಗೂ ತಾರತಮ್ಯ, ನಮ್ಮದೇ ನೋಟಕ್ಕೆ ಚಂದ, ಅನುಕೂಲ, ಸುಲಭ ಹಾಕಿಕೊಳ್ಳಲು ಕಾಲಹರಣವಾಗುವುದಿಲ್ಲ, ನಮ್ಮ ದೇಶದ ಹವಾಕ್ಕೆ ಸರಿಯಾಗಿದೆ. 13, ಹಿಂದೂ ಜನರಲ್ಲಿ ಉತ್ತರಕ್ರಿಯೆ, (1) ಮರಣಕ್ಕೆ ಮೊದಲು ಮಾಡಲ್ಪಡುವ ಕರ್ಮ. (2) ಶವವನ್ನು ಸ್ಮಶಾನಕ್ಕೆ ಸಾಗಿಸುವ ಕ್ರಮ. ಬೇರೆ ಬೇರೆ ಜಾತಿಯವರಲ್ಲಿ, (3) ದಹನಕ್ಕೆ ಪೂರ್ವಭಾವಿಯಾದ ಕ್ರಿಯೆಗಳು, ದಹನ. (4) ಬ್ರಾಹ್ಮಣರು ಮಾಡುವ ಹನ್ನೆರಡು ದಿನಗಳ ಕರ್ಮ. ಇದರಿಂದ ಕರ್ತೃವಿಗೆ ಆಗುವ ಕಷ್ಟ. (5) ಸೂತಕ, ಸಮಾಪ್ತಿ. 14, ಹಿಂದೂ ಸಂಸಾರ, (3) ಹಿಂದೂಸಂಸಾರ ಕ್ರಮ, ಎಲ್ಲರೂ ಒಟ್ಟಿಗೆ ವಾಸಮಾಡುವುದು, ಪರಸ್ಪರ ಮಮತ ಹೆಚ್ಚು. ಈ ವಿಷಯದಲ್ಲಿ ಇದಕ್ಕೂ ಪಾಶ್ಚಿಮಾತ್ಯ ಸಂಸಾರಕ್ಕೂ ಇರುವ ಭೇದ, (೨) ಹಿಂದೂಗಳಲ್ಲಿ ಬಾಲ್ಯ ವಿವಾಹ ನಡೆವುದರಿಂದ ಗಂಡ ಹೆಂಡರಿಗೆ ಪ್ರೀತಿಯಿರುವುದು ಅಪೂರ್ವವೆಂಬ ಆಕ್ಷೇಪಣೆಗೆ ಸಮಾಧಾನ (3) ಹಿಂದೂಪತ್ನಿಯ ಗುಣ. ಆಕೆಯು ಬೆಳಗಿನಿಂದ ಸಂಜೆಯ ವರೆಗೂ ಮನೆಯಲ್ಲಿ ದುಡಿವುದು, ಪತಿಯಲ್ಲಿ ಪ್ರೀತಿ, ದೇವರಲ್ಲಿ ಭಕ್ತಿ, ಮತಾಚಾರದಲ್ಲಿ ಆಸಕ್ತಿ (4) ಈಗಿನ ಕಾಲದ ವಿದ್ಯಾಭ್ಯಾಸದಿಂದ ಹಿಂದೂ ಸಂಸಾರಕ್ಕೆ ಆಗಿರುವ ಕಡಕು, ಸರಿ, ಯಾದ ಹಿಂದೂ ಸಂಸಾರದಲ್ಲಿರುವ ಸುಖ ಎಲ್ಲಿಯೂ ಇಲ್ಲ,