ಪುಟ:ಪ್ರಬಂಧಮಂಜರಿ.djvu/೧೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೦ ಪ್ರಬಂಧಮಂಜರಿ-ಎರಡನೆಯ ಭಾಗ ಸುಳ್ಳನ್ನು ಎಂದಿಗೂ ಆಡಬಾರದು. ದೇವರು ನಮಗೆ ನಾಲಿಗೆಯನ್ನು ಕೊಟ್ಟಿರುವುದು ದಿಟವನ್ನು ಆಡುವುದಕ್ಕೇ ಹೊರತು ಸುಳ್ಳಾಡುವುದಕ್ಕಲ್ಲ. ಆದುದರಿಂದ ಸುಳ್ಳಾಡುವುದು ದೊಡ್ಡ ಪಾಪವು, ಸುಳ್ಳಾಡುವುದರಿಂದ ಮನುಷ್ಯ ಜಾತಿಗೆ ಅಪರಾಧ ಮಾಡಿದಂತಾಗುವುದು ಯಾವಜನರಲ್ಲಿ ಸುಳ್ಳಿದೆಯೋ ಅವರಲ್ಲಿ ಪರಸ್ಪರ ಸ್ನೇಹದಿಂದ ಕೂಡಿದ ಒಡನಾಟವಿರಲಾರದು. ಐಕಮತ್ಯವು ತಪ್ಪಿ ಅವರಿಗೆ ಬಲು ಕ್ಷೀಣದಶೆ ಬರುವುದು, ಸುಳ್ಳಾಡುವವ ನಿಗೇ ಅದರಿಂದ ಬಾಧೆಗಳುಂಟು. ಮಾನಭಂಗವಾಗುವುದಲ್ಲದೆ, ಸುಳ್ಳಾಡಲು ಸ್ವಲ್ಪವಾದರೂ ಆವಶ್ಯಕತೆಯಿಲ್ಲದಿದ್ದಾಗಲೂ ಅವನು ಸುಳ್ಳನ್ನು ಬಿಟ್ಟು ದಿಟವನ್ನು ನುಡಿವುದಕ್ಕೆ ಪ್ರಯತ್ನಿಸಿದರೂ ಆಗಲಾರದಷ್ಟು ಅವನ ಮನಸ್ಸು ನೀಚವಾಗುವುದು. ಸುಳ್ಳುಗಾರನು ಒಂದು ವೇಳೆ ದಿಟ ಹೇಳಿದರೂ ಅವನ ಮಾತನ್ನು ಯಾರೂ ನಂಬುವುದಿಲ್ಲ; ಕಡೆಗೆ ತಾನು ಯಾವಾಗ ಸುಳ್ಳಾಡು. ವನೋ ಅದು ಅವನಿಗೇ ತಿಳಿಯದೆ ಹೋಗುವಷ್ಟು ಅವನಲ್ಲಿ ಸುಳ್ಳಾ. ಡುವ ವಾಡಿಕೆ ನೆಲೆಗೊಳ್ಳುವುದು, ಹಿಂದೆ ಹಿಂದೂದೇಶದಲ್ಲಿ ಸತ್ಯಸಂಧತೆ ಬಲು ಪ್ರಧಾನವಾಗಿದ್ದಿತು. ದಶ ರಥರಾಯನು ಸುಳ್ಳುಗಾರನೆಂಬ ಅಪಯಶಸ್ಸು ಬಂದೀತೆಂಬ ಭಯದಿಂದ ಆಡಿದ ಮಾತಿಗೆ ತಪ್ಪದೆ ತನ್ನ ಪ್ರೀತಿಪಾತ್ರನಾದ ಮಗನನ್ನೂ ಕಾಡಿಗೆ ಕಳುಹಿಸಲಿಲ್ಲವೆ? ಹಾಗೆಯೇ ಶಿಬಿಚಕ್ರವರ್ತಿ ತನ್ನ ದೇಹವನ್ನು (ಕಪೋತಪಸ್ಸಿಗಾಗಿ ಕೊಯ್ದು ಕೊಡಲಿಲ್ಲವೆ? ಇಂತಹ ಸತ್ಯಸಂಧರು ಎಷ್ಟೋ ಮಂದಿ ಇದ್ದರೆಂದು ಗ್ರಂಥಗಳಿಂದ ಗೊತ್ತಾಗುತ್ತದೆ. ಸತ್ಯವೊಂದಿದ್ದರೆ, ಧೈರ್ಯ, ಶಮ, ದಮ, ಪರೋಪಕಾರಬುದ್ದಿ ಮುಂತಾದ ಮಿಕ್ಕೆಲ್ಲ ಸುಗುಣಗಳೂ ಜತೆಯಲ್ಲಿ ಯೇ ಬರುವುವು. ಆದುದರಿಂದ ನಮ್ಮ ಪ್ರಾಚೀನರ ಚರಿತ್ರೆಯನ್ನು ಮೇಲ್ಪಜಿಯಾಗಿಟ್ಟುಕೊಂಡು ನಾವೆಲ್ಲರೂ ಸತ್ಯಂವದ ಧರ್ಮಂಚರ' ಎಂಬಪ್ರಸಿದ್ದವಾದ ಉಪನಿಷದ್ವಚನವನ್ನು ಸ್ಮರಿಸಿಕೊಳ್ಳುತ್ತಾ ಪ್ರತಿಯೊಬ್ಬರೂ ಯಾವಾಗಲೂ ಸತ್ಯವನ್ನು ಹೇಳಬೇಕು. ಸತ್ಯವಿದ್ದರೆ ಎತ್ತಲೂ ಭಯವಿಲ್ಲ.”

>: >