ಪುಟ:ಪ್ರಬಂಧಮಂಜರಿ.djvu/೧೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೮ ಪ್ರಬಂಧಮಂಜರಿ-ಎರಡನೆಯ ಭಾಗ ' 51. ಐಶ್ವರ್ಯ, ಈ ಪ್ರಪಂಚದಲ್ಲಿ ಐಶ್ವರ್ಯವನ್ನೊಲ್ಲದ ಮನುಷ್ಯರೇ ಅಪೂರ್ವ. - ಹಣವೆಂದರೆ ಹೆಣವೂ ಬಾಯಿಬಿಡುವುದು” ಎಂಬಂತೆ ಎಲ್ಲರೂ ಹಣದಲ್ಲಿ ನಿರತರಾಗಿದ್ದಾರೆ. ಆ ಹಣದಿಂದ ಎಲ್ಲಾ ಸುಖಗಳೂ ದೊರೆವುವು; ಬೇಕಾದುದನ್ನೆಲ್ಲಾ ಕಷ್ಟ ಪಡದೆ ಹಣದಿಂದ ಸಂಪಾದಿಸಿಕೊಳ್ಳಬಹುದು ಎಂದೆಣಿಸುವುದೇ ಇದಕ್ಕೆ ಮುಖ್ಯ ಕಾರಣ. ಚೆನ್ನಾಗಿ ಯೋಚಿಸಿದಲ್ಲಿ, ಐಶ್ವರ್ಯವು ಬಗೆಬಗೆಯ ತೊಂ. ದರೆಗಳಿಗೆ ಕಾರಣವಾಗಿದೆ. ಮೊದಲು ಅದನ್ನು ಸಂಪಾದಿಸುವುದೇ ಎಷ್ಟೋ ಕಷ್ಟ. ಸಂಪಾದಿಸಿದಮೇಲೆ ಅದನ್ನು ಕಳೆಯದೆಕಾಪಾಡಿಕೊಳ್ಳುವುದು ಇನ್ನೂ ಕಷ್ಟ. ಮನಸ್ಸಿಗೆ ಬಲು ಚಿಂತೆಯ, ಭಯವೂ, ಕಳವಳವೂ ಉಂಟಾಗುವುವು. ಪ್ರಪಂಚದಲ್ಲಿ ಉಂಟಾಗುವ ಎಲ್ಲಾ ವಿಧವಾದ ತೊಂದರೆಗಳಿಗೂ, ಗಲಾಟೆಗಳಿಗೂ ಹಣವೇ ಮಲ, ಐಶ್ವರ್ಯವು ಹೆಚ್ಚಿದಹಾಗೆಲ್ಲ ಜನರಲ್ಲಿ ಅಹಂಕಾರವೂ, ಜಂಭವೂ ಹೆಚ್ಚುತ್ತವೆ; ದುಂದೂ, ವಿಷಯಾಸಕ್ತಿಯೂ ಹುಟ್ಟುತ್ತವೆ. ಹೆರರನ್ನು ಜರೆವ ಬಡವರನ್ನು ಹಾಸ್ಯ ಮಾಡುವ ದುರ್ಗುಣಗಳು ಬಂದೊದಗುವುವು. ಆಗರ್ಭ ಶ್ರೀಮಂತರಾದವರಿಗೆ ಬಡಬಗ್ಗರ ಕಷ್ಟ ಸುಖಗಳೇ ತಿಳಿಯದಿರುವುದರಿಂದ, ಯಾರಾದರೂ ಕಷ್ಟದಲ್ಲಿ ನರಳುತ್ತಿದ್ದರೆನೋಡಿ ಕನಿಕರಪಡುವುದು ಕೂಡ ಅವರಿಗೆ ಬರುವುದಿಲ್ಲ. ಕುರುಡನಿಗೆ ಕಣ್ಣ ಮುಂದೆ ಇರುವುದು ಹೇಗೆ ಕಾಣುವುದಿಲ್ಲವೋ ಹಾಗೆಯೇ ಧನಾಥನಿಗೆ ಎದುರಾಗಿರುವುದೂ ಕಣ್ಣಿಗೆ ಬೀಳದಷ್ಟು ಮದಾಂಧತೆ ಹುಟ್ಟಿ ತನ್ನ ಮೈ ಮೇಲೆ ಕೂಡ ಜ್ಞಾನ ತಪ್ಪುವುದು ಸಿರಿ ಹೆಚ್ಚಿದ ಹಾಗೆಲ್ಲ ಹಣದ ಆಸೆಯು ಹೆಚ್ಚು ವುದು, ಈ ದುರಾಶೆಯನು ಪೂರೈಸಿಕೊಳ್ಳಲು, ಕೆಲವು ವೇಳೆ ಮನುಷ್ಯನು ದುರ್ಮಾ ರ್ಗಕ್ಕೆ ಬಿದ್ದು ಹಣವನ್ನು ಸಂಪಾದಿಸುವುದುಂಟು. ಆದರೆ ಹಣವು ಯಾವಾಗಲೂ ಕೇಡನ್ನೆ ಮಾಡುವುದೆಂದು ಹೇಳಲಾಗದು. ಅದನ್ನು ಪ್ರಯೋಗಿಸುವ ರೀತಿ ಕೆಟ್ಟುದಾದರೆ ಫಲವೂ ಕೆಟ್ಟು ದಾಗುವುದು ಸರಿಯಾದ ರೀತಿಯಲ್ಲಿ ಬಳಸಿದರೆ, ಹಣದಿಂದ ಲೋಕಕ್ಕೆ ಎಷ್ಟೋ ಉಪಕಾರವುಂಟು. ಹಣವಿರುವವರು ಪುಸ್ತಕಭಂಡಾರ, ಸ್ಕೂಲು, ಆಸ್ಪತ್ರೆ, ಚತ್ರ ಮುಂತಾದುವನ್ನು ಕಟ್ಟಿಸಬಹುದು; ಅನಾಥರಿಗೆ ಸಹಾಯಮಾಡ ಬಹುದು; ಬಡಹುಡುಗರಿಗೆ ವೇತನಗಳನ್ನೂ ಬಹುಮಾನಗಳನ್ನೂ ಕೊಟ್ಟು,