ಪುಟ:ಪ್ರಬಂಧಮಂಜರಿ.djvu/೧೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೯ ಸ್ವಾಭಿಮಾನ ದರೆ, ಅವರ ಮೇಲೆ ರೇಗಿಬಿದ್ದು, ಅವರನ್ನು ಸಿಕ್ಕಿದ ಹಾಗೆ ಎನ್ನುವರು. ತಮ್ಮ ಯೋಗ್ಯತೆಯನ್ನು ಅತಿಶಯೋಕ್ತಿಗಳಿಂದ ಬಾರಿಬಾರಿಗೂ ಕೊಚ್ಚಿ ಕೊಳ್ಳುವ ದುರಭ್ಯಾಸದಿಂದ ಸ್ವಾಭಿಮಾನಿಗಳಿಗೆ ತಮ್ಮ ಮಾತಿನಲ್ಲಿ ಸ್ವಲ್ಪ ಹುಳುಕೂ ಗೊತ್ತು ಹತ್ತುವುದಿಲ್ಲ. ಇವರ ಗೆಳೆಯರು ಆ ಹುಳುಕುಗಳನ್ನು ಸೂಚಿಸಿದರೂ ನಂಬದೆ ತಾವು ಎಂದಿಗೂ ಸುಳ್ಳಾಡುವವರಲ್ಲವೆಂತಲೂ, ಪ್ರಪಂಚವೇ ತಮ್ಮ ವಿಷಯದಲ್ಲಿ ತಪ್ಪು ತಿಳಿದುಕೊಂಡಿದೆಯೆಂತಲೂ, ತಮ್ಮ ಶ್ರೇಷ್ಟವಾದ ಯೋ ಗ್ಯತೆಯನ್ನು ಎಲ್ಲರೂ ಉದಾಸೀನಮಾಡಿದ್ದಾರೆಂತಲೂ ಯೋಚಿಸುವರು. ಆದರೆ ಅಂತಹ ಒಳ್ಳೆಯ ಯೋಗ್ಯತೆಯಿದ್ದರೆ, ಅದು ಎಷ್ಟು ದಿನ ಗುಪ್ತವಾಗಿ ದೀತು? ಶೀಘ್ರವಾಗಿಯೇ ಎಲ್ಲರಿಗೂ ವ್ಯಕ್ತವಾಗುವುದು. ಮಧ್ಯಾಹ್ನ ದಲ್ಲಿ ಸೂರ್ಯನು ಪ್ರಜ್ವಲಿಸುತ್ತಿರಲು, ಯಾರಾದರೂ ಅವನು ಆಕಾಶದಲ್ಲಿರುವುದನ್ನು ಪ್ರಕಟಿಸಬೇಕಾಗಿದೆಯೇ? ಒಂದು ವೇಳೆ ನಮ್ಮ ಯೋಗ್ಯತೆಯನ್ನು ಇರುವದಕ್ಕಿಂತ ಕಡಮೆಯಾಗಿ ಯಾರಾದರೂ ತಿಳಿದುಕೊಂಡರೆ, ಅದು ಹೊಟೆಕಿಚ್ಚಿನಿಂದಲೋ ಮನಸ್ತಾಪದಿಂದಲೋ ಆಗಿರಬೇಕು. ಯಾವ ಕಾರಣದಿಂದಲಾಗಿರಲಿ, ನಾವು ದೊಡ್ಡ ಮನುಷ್ಯರೆಂದೂ, ನಮ್ಮನ್ನು ಆವರು ಗೌರವಿಸ ಬೇಕೆಂದೂ ಅವರಿಗೆಮಂದಟ್ಟು ಮಾಡುವುದು ನಮ್ಮಿಂದಾದೀತೆ? ಗೌರವಕ್ಕೆ ಅರ್ಹತೆಯನ್ನು ಸಂಪಾದಿಸುವುದು ನಮ್ಮ ಧೀನ - ಗೌರವಕ್ಕೆ ನಾವು ಪಾಇರು, ಎಲ್ಲರೂ ನಮಗೆ ಮರ್ಯಾದೆ ಕೊಡಬೇಕು” ಎಂದು ಬಾಧ್ಯತೆಯನ್ನು ತೋರಿಸಿಕೊಂಡರೆ, ಮರ್ಯಾದಾ ರ್ಹತೆ ಹೋಗಿಬಿಡುವುದಲ್ಲದೆ, ಇದ್ದ ಮರ್ಯಾದೆಯನ್ನೂ ಹಾಳುಮಾಡಿಕೊಳ್ಳುವೆವ. ಯಾರಿಗಾದರೂ ಅಹಂಕಾರವುಂಟಾಗಬೇಕಾದರೆ, ಅವರು ಯಾವಾಗಲೂ ತಮಗಿಂತಕೀಳಾದವರೊಡನೆಯೇ ಬಹುಕಾಲ ವಾಸಮಾಡಿರಬೇಕು; ಅಥವಾ ಕೂಪಕರ್ಮದಂತೆ ಇದ್ದ ಕಡೆಯೇ ಇದ್ದು ತಮಗಿಂತ ಗಟ್ಟಿ ಗರಲ್ಲಿಗೆ ಹೋಗದಿರಬೇಕು; ಇಲ್ಲವೆ ಅಹಂಕಾರಿಗಳ ಜತೆಯಲ್ಲಿಯೇ ಚಿಕ್ಕಂದಿನಿಂದ ಇದ್ದಿರಬೇಕು. ಅಹಂಕಾರವು ಕಡಮೆಯಾಗಬೇಕಾದರೆ, ನಾಲ್ಕಾರು ದೊಡ್ಡ ಸ್ಥಳಗಳಲ್ಲಿ ಸಂಚರಿಸಿ ಅಲ್ಲಿನ ದೊಡ್ಡವರೊಡನೆ ಓಡಾಡಬೇಕು. ಆಗಲೇ ನಮ್ಮ ಯೋಗ್ಯತೆಯಿಷ್ಟೆಂದು ಗೊತ್ತಾಗುವುದು. ಇದರಿಂದ ಆತ್ಮಪ್ರತಿಷ್ಠೆ ಬಲುಮಟ್ಟಿಗೆ ಶಾಂತವಾದೀತು.