ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪೧೬ ಶ್ರೀಮದ್ಭಾಗವತವು ಅಧ್ಯಾ, ೨. ರಾದರು. ಮತ್ತು ಅವರು ಅಧ್ಯಾತ್ಮ ವಿದ್ಯೆಯನ್ನು ಚೆನ್ನಾಗಿ ಪರಿಶೀಲಿಸಿದವ ರಾಗಿಯೂ, ದಿಗಂಬರರಾಗಿಯೂ ಇದ್ದರು. ಅವರಿಗೆ ಕ್ರಮವಾಗಿ, ಕವಿ, ಹರಿ, ಅಂತರಿಕ್ಷ, ಪ್ರಬುದ್ಧ, ಪಿಪ್ಪಲಾಯನ, ಆವಿರ್ಯೋತ, ಪ್ರಮಿಳ, ಚಮಸ, ಕರಭಾಜನರೆಂದು ಹೆಸರು. ಅವರು ಸ್ಥಾವರಜಂಗಮರೂಪವಾದ ಸಮಸ್ಯಪ್ರಪಂಚವನ್ನೂ ಭಗವಂತನ ರೂಪದಿಂದಲೇ ಭಾವಿಸುತ್ತ, ಲೋಕಸಂಚಾರವನ್ನು ಮಾಡುತಿದ್ದರು. ಅವರಿಗೆ ಯಾವಲೋಕಕ್ಕೆ ಹೋಗು ವುದಕ್ಕೂ ಸ್ವಲ್ಪವಾದರೂ ತಡೆಯಿಲ್ಲ ! ಇಂತಹ ನಿರಂಕುಶವಾದ ಗಮನ ಶಕ್ತಿಯಿಂದ, ಈಗಲೂ ಅವರು, ದೇವ, ದಾನವ, ಸಿದ್ಧ, ಸಾಧ್ಯ, ಗಂಧ, ಯಕ್ಷ, ಕಿನ್ನರ, ನಾಗ, ಪನ್ನಗ, ವಿದ್ಯಾಧರೆ, ಚಾರಣ, ಭೂತನಾಥರೇ ಮೊದಲಾದವರ ಲೋಕಗಳೊಳಗೆಲ್ಲಾ ' ನಿಷ್ಕಾಮರಾಗಿ ಸಂಚರಿಸುತ್ತಿರು ವರು. ಇವರು ಹೀಗೆ ಲೋಕಸಂಚಾರವನ್ನು ಮಾಡುತ್ತಿರುವಾಗ, ಒಮ್ಮೆ ಭಾರತವರ್ಷದಲ್ಲಿ, ಮಹಾತ್ಮನಾದ ಜನಕವಂಶದ ನಿಮಿಯ, ಮಹರ್ಷಿಗಳ ಮೂಲಕವಾಗಿ ಸತ್ರಯಾಗವನ್ನು ಮಾಡಿಸುತ್ತಿದ್ದ ಸ್ಥಳಕ್ಕೆ ಅಕಸ್ಮಾತ್ತಾಗಿ ಬಂದು ಸೇರಿದರು. ಸೂರವರ್ಚಸ್ಸಿನಿಂದ ಪ್ರಕಾಶಿಸುತ್ತಿರುವ ಈ ಭಾಗವ ತೋತ್ತಮರನ್ನು ಕಂಡೊಡನೆ, ಯಜ್ಞಕ್ಷಿತನಾದ ನಿಮಿಯೂ, ಯಾಗ ನಿರ್ವಾಹಕರಾದ ಋಷಿಗಳೂ, ಅಲ್ಲಿ ಪುರುಷಾಕಾರದಿಂದಿದ್ದ ಆಹವನೀಯವೇ ಮೊದಲಾದ ಅಗ್ನಿ ತ್ರಯವೂ, ಎಲ್ಲರೂ ಧಿಗ್ಗನೆ ಇದಿರೆದ್ದುಬಂದು, ಆ ಮಹರ್ಷಿಗಳನ್ನು ಗೌರವಿಸಿ ಬರಮಾಡಿಕೊಂಡರು. ಜನಕನು, ಸಂತೋಷ ದಿಂದ ಅವರಿಗೆ ಉಚಿತಾಸನಗಳನ್ನು ಕೊಟ್ಟು ಸತ್ಕರಿಸಿದನು. ಬೃಗು ಮೊದ ಲಾದ ಬ್ರಹ್ಮಪುತ್ರರಿಗೆ ಸಮಾನರಾಗಿ, ದಿವ್ಯತೇಜಸ್ವಿಗಳಾದ ಆ ಋಷಿಗ ಇನ್ನು ಸತ್ಕರಿಸಿದಮೇಲೆ, ಜನಕನು ಅವರ ಮುಂದೆ ಭಕ್ತಿವಿನಮ್ರನಾಗಿ ಹೀಗೆಂದು ವಿಜ್ಞಾಪಿಸುವನು. ಓ ಮಹಾತ್ಮರೆ ! ನಿಮ್ಮ ಅದ್ಭುತತೇಜ ಸ್ಪನ್ನು ನೋಡಿದರೆ, ನೀವು ಆ ಸಾಕ್ಷಾತ್ಪರಮಪುರುಷನೊಡನೆ ನಿತ್ಯಸಾನ್ನಿಧ್ಯ ದಲ್ಲಿರುವ ಪಾರ್ಷದರಲ್ಲಿ ಸೇರಿದಂತೆಯೇ ತೋರುವುದು. ಹಾಗಿದ್ದರೆ ನಾವು ಈ ಪ್ರಾಕೃತಿಕದಲ್ಲಿ ಸುತ್ತುತಿದ್ದವೆ?” ಎಂದು ನೀವು ಕೇಳ ಬಹುದು. ವಿಷ್ಣು ಭಕ್ತರಾದ ನಿಮ್ಮಂತವರು, ಇತರಲೋಕಗಳನ್ನು ಪಾವನ