ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪೩೩ ಅಧ್ಯಾ. ಓ.] ಏಕಾದಶಸ್ಕಂದವು. ಹೇಳಲ್ಪಟ್ಟ ಫಲವೂ ನಮಗೆ ಪ್ರತ್ಯಕ್ಷವಾ ಗೋಚರಿಸತಕ್ಕವುಗಳಲ್ಲ. ಆ ವುಗಳ ಅರ್ಥವೂ ವಾಚ್ಯವಾಗಿ ತೋರತಕ್ಕುದಲ್ಲ. ಅವುಗಳ ಫಲವು ಪರೋ ಕ್ಷವಾಗಿರುವಂತೆ, ಅರ್ಥವೂ ಪರೋಕ್ಷವೇ ಆದುದರಿಂದ, ಅದರ ಅಭಿ ಪ್ರಾಯವನ್ನು ಸುಲಭವಾಗಿ ತಿಳಿಯುವುದು ಕಷ್ಟವು. ವೈದ್ಯನು ಸಮ ಕ್ಕಳಿಗೆ ಲಡ್ಡು ಮೊದಲಾದ ಮಧುರಸವಾರಗಳ ಆಸೆಯನ್ನು ತೋ ರಿಸಿ, ಔಷಧವನ್ನು ಕುಡಿಸಿಬಿಡುವಸೇ ಹೊರತು, ಆಮೇಲೆ ಅನಾರೋಗ್ಯ ಕರಗಳಾದ ಆ ಪದರಗಳನ್ನು ಮರೆಸಿಟ್ಟು, ಅವುಗಳನ್ನು ಆರೋಗ್ಯದಲ್ಲಿರಿಸು ವನಲ್ಲವೆ ? ಅದರಂತೆಯೇ ಪರಮದಯಾಳುವಾದ ಭಗವಂತನು, ವೇದವಾ ಕೈಗಳ ಮೂಲಕವಾಗಿ, ಸ್ವರ್ಗದಲ್ಲಿ ರಂಭಾಸಂಭೋಗವೇ ಮೊದಲಾದ ಫ.ಗಳುಂಟಾಗುವುದಾಗಿ ಆಸೆಯನ್ನು ತೋರಿಸಿ, ಕಾಚರಣೆಗೆ ಪ್ರೊ ತಾಹವನ್ನುಂಟುಮಾಡುವನು. ಆ ಕ್ಷಗಳೇ ಭಕ್ತಿಯೋಗಕ್ಕೆ ಸಾಧಕರ ಳಾಗಿ, ಅದರಿಂದ ಕರಕಯವಾಗುವಂತೆ ಮಾಡುವನು. ಆ ಕರಕಯವೇ ಮೋಕ್ಷಹೇತುವಾಗುವುದು. ಯಾವನು ವೇದವಿಹಿತಗಳಾದ ಕರ ಗಳನ್ನು ಭಗವದರ್ಪರೂಪವ•ಗಿ ನಡೆಸದೆ, ಅಜ್ಞನಾಗಿಯೂ, ಅಜಿತೇಂದ್ರಿಯ ನಾಗಿಯೂ ಇರುವನೋ, ಅವನಿಗೆ, ಕರಭ್ರಷ್ಟತೆಯೊಂದು, ವೇದ ವಿರುದ್ಧಕಾಚರಣೆಯೊ೦ದ, ಇವೆರಡರಿಂದ ಮೃತ್ಯುವಿನಮೇಲೇ ಮೃತ್ಯುವನ್ನೇ ಹೊಂದುತ್ತಿರುವನು. ಹಾಗಿಲ್ಲದೆ ವೇದೋಕ್ತಕಗಳೆಲ್ಲವ ನ್ಯೂ ಫಲಾಪೇಕ್ಷೆಯಿಲ್ಲದೆ ಭಗವದರ್ಪಣರೂಪವಾಗಿಯೇ ನಡೆಸತಕ್ಕವನು, ಅದರಿಂದ ಸಕಲಕರ ಸಿದ್ಧತಿಗೆ ಹೇತುವಾದ ಜ್ಞಾನಸಂಪತ್ತಿಯನ್ನು ಹೊಂದಿ, ಮುಕ್ತನಾಗುವನು. ಹಾಗಿದ್ದರೆ ಶ್ರುತಿಗಳು ಕಶ್ಯಗಳಿಗೆ ಬೇರೆ ಬೇರೆ ಸ್ವರ್ಗಾದಿಫಲಗಳನ್ನು ಹೇಳುವುದೇಕೆ ?” ಎಂದರೆ, ಇವೆಲ್ಲವೂ ಅಜ್ಞ ರಾದವರಿಗೆ ಕರಾಚರಣೆಯಲ್ಲಿ ಆಸೆಹುಟ್ಟಿಸುವುದಕ್ಕಾಗಿಯೇ ಹೊರತು ಬೇರೆಯಲ್ಲ. ವೈದಿಕ ಕರಗಳ ಸ್ಥಿತಿಯು ಹೀಗಾಯಿತಷ್ಟೆ ? ಇದಕ್ಕಿಂತಲೂ ಶೀಘ್ರವಾಗಿ ಭಕ್ತಿಯೋಗವನ್ನು ಹುಟ್ಟಿಸತಕ್ಕೆ ಬೇರೆ ಕೆಲವು ಕರಗಳು ಪಾಂಚರಾತ್ರದಲ್ಲಿ ವಿಧಿಸಲ್ಪಟ್ಟಿರುವುವು. ಅವುಗಳಿಗೆ ತಾಂತ್ರಿಕಕರಗ ಛಂದು ಹೆಸರು. ಈ ತಾಂತ್ರಿಕಕರವೆಂಬುದು, ಭಗವಂತನ ಅರ್ಚಾರೂ