ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬಿಜಾಪುರ, ಮೊದಲಾದ ಎಲ್ಲಾ ಪ್ರಾಂತ್ಯಗಳಲ್ಲಿಯೂ ಇವು ಪ್ರಚಾರಗೊಂ ಡಿವೆ. ಅಷ್ಟೇಕೆ? ಮನೆಯಲ್ಲಿ ಇತರಭಾಷೆಗಳನ್ನಾಡುವವರೂಕೂಡ, ಸ್ವ ಲ್ಪ ಮಾತ್ರ ಕನ್ನಡವನ್ನು ತಿಳಿದವರಾಗಿದ್ದರೆ, ಈ ನಮ್ಮ ಪುಸ್ತಕದ ಶೈಲಿ ಯನ್ನೇ ಹೆಚ್ಚಾಗಿ ಆದರಿಸಿ, ಇವುಗಳನ್ನೇ ಓದುತ್ತಿರುವರು. ಇದಲ್ಲದೆ ಅಲ್ಲ ಲ್ಲಿನ ಕೆಲವು ಗ್ರಾಮವಾಸಿಗಳು, ತಮ್ಮ ಗ್ರಾಮ ದೇವಾಲಯಗಳಲ್ಲಿ ಅಕ್ಷ ರಜ್ಞರಿಂದ ಈ ಪುಸ್ತಕವನ್ನೊದಿಸಿ, ಆಗಾಗ ಮಂಗಳಗಳನ್ನೂ ಮಹೋ ತೃವಗಳನ್ನೂ ಮಾಡಿಸುತ್ತಿರುವರೆಂದೂ ನಮಗೆ ತಿಳಿದುಬಂದಿದೆ. ಈ ಕಾರಣಗಳಿಂದ, ನಾನು ಕೈಕೊಂಡ ಈ ಪ್ರಯತ್ನದಲ್ಲಿ, ನಮ್ಮ ಮಾತೃ ಭಾಷೆಯ ಪ್ರಚಾರಗೊಳ್ಳುತ್ತಿರುವುದೊಂದು, ಹೆಂಗಸರು, ಮಕ್ಕಳು ಮೊದಲಾಗಿ ನಮ್ಮ ಕರ್ಣಾಟದೇಶದ ಜನರಲ್ಲಿ ಇಂತಹ ಸತ್ಕಥಾಶ್ರವಣ ದಲ್ಲಿ ಆಸಕ್ತಿಯನ್ನು ಹೆಚ್ಚಿಸುವುದೊಂದು ; ಈ ಎರಡು ದೊಡ್ಡ ಕಾರ್ ಗಳು ಕೈಗೂಡಿ ಬಂದಿವೆ. ಇದಲ್ಲದೆ ನಾನು ಈ ಗ್ರಂಥಗಳನ್ನು ಬರೆಯುವು ದಕ್ಕೆ ತೊಡಗಿದಂದಿನಿಂದ, ಒಂದುದಿನದಲ್ಲಿ ಕ್ಷಣಮಾತ್ರವಾದರೂ ಆ ಭಗವಚ್ಚಂತ್ರವನ್ನು ಮನಸ್ಸಿನಲ್ಲಿ ಮನನಮಾಡಬೇಕಾಗಿದ್ದುದರಿಂದ ಈ ಕಾರಕ್ಕಾಗಿ ಕಳೆದ ಈ ಏಳುವರ್ಷಗಳ ಕಾಲವೇ ನನ್ನ ಜೀವಮಾನದಲ್ಲಿ ಸಾರ್ಥಕ್ಯವನ್ನು ಹೊಂದಿದಂತೆ ಭಾವಿಸುವೆನು. ನಮ್ಮ ಸ್ವದೇಶಭಾಷೆಗಳಿಗೆ ರಾಜರಿಂದ ವಿಶೇಷವಾಗಿ ಪ್ರೋತ್ಸಾಹವು ದೊರೆಯುತ್ತಿದ್ದ ಪೂರೈಕಾಲಗ ಇಲ್ಲಿ, ಇಂತಹ ಗ್ರಂಥಲೇಖಕರಿಗೆ, ರಾಜಾಸ್ಥಾನಗಳಲ್ಲಿ ವಿಶೇಷವಾದ ಗೌರವ ಸನ್ಮಾನಗಳೂ, ಪ್ರೋತ್ಸಾಹವೂ ದೊರೆಯುತ್ತಿತ್ತು. ಈಗ ಅ೦ ತಹ ಗೌರವಗಳಿಗೆ ನಾನು ಪಾತ್ರನಾಗದಿದ್ದರೂ, ಅರಸರ್ ಕುಡುವಾ ಕಾರ್ತ | ಸ್ವರಕಂಕಣರ್ಮಿ! ಸರಸರಾಸ್ವಾದಿಸಿ ಕಾ | ವ್ಯರಸವ ಸೂಸುವ ಸುಖಭಾ | ಸ್ವರಾಶ್ರು ಕಂಕಣಮೆ ಕವಿಗೆ ಕಂಕಣಮಲೈ.”