ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪೨೬ ಶ್ರೀಮದ್ಭಾಗವತವು [ಅಧ್ಯಾ. ೩. ಆಮೇಲೆ ಸಾಂವರ್ತಕಗಳೆಂಬ ಪ್ರಳಯಮೇಗಳು, ಆನೆಯ ಸುಂಡಿಲಿನಂತಿ ರುವ ದೊಡ್ಡ ಜಲಧಾರೆಗಳಿಂದ, ನೂರು ವರ್ಷಗಳವರೆಗೆ ಎಡಬಿಡದೆ ಮಹಾ ವೃಷ್ಟಿಯನ್ನು ಸುರಿಸುವುವು. ಆಗ ಬ್ರಹ್ಮಾಂಡವೆಲ್ಲವೂ ಜಲದಲ್ಲಿ ಮುಳು ಗಿ ಹೋಗುವುದು. ಆಗ ಜೀವವರ್ಗಗಳೆಲ್ಲವೂ ಪ್ರಳಯಜಲದಲ್ಲಿ ಲೀನ ವಾದ ಆ ಬ್ರಹಾಂಡವನ್ನು ಬಿಟ್ಟು, ಸೌದೆಯಿಲದ ಬೆಂಕಿಯು ಹೇಗೋ ಹಾಗೆ, ಜ್ಞಾನಸಂಕೋಚದಿಂದ ಶಾಂತವಾಗಿ, ಸೂಕ್ಷಾವಸ್ಥೆಯಿಂದ ತಮಸ್ಸೆಂಬ ಪ್ರಧಾನದಲ್ಲಿ ಅಡಗಿಹೋಗುವುದು. ಮತ್ತು ಆಗ ಪಂಚಮ ಹಾಭೂತಗಳಲ್ಲಿ ಒಂದಾದ ಭೂಮಿಯು, ಪ್ರಳಯವಾಯುವಿನಿಂದ ಅಪ ಹುಸಲ್ಪಟ್ಟ ತನ್ನ ಗಂಧಗುಣವುಳ್ಳುದಾಗಿ ಜಲದಲ್ಲಿ ಲಯಿಸುವುದು. ಹಾಗೆಯೇ ಆ ಜಲವೂ ವಾಯುವೇಗದಿಂದ ಸೀರಸವಾಗಿ, ತೇಜಸ್ಸಿನಲ್ಲಿ ಲಯಿಸುವುದು. ಆ ತೇಜಸೂಕೊಡ, ಪ್ರಬಲವಾದ ತಮಸ್ಸಿನಿಂದ ತನ್ನ ರೋಹಗುಣವು ಅಪಹರಿಸಲ್ಪಡಲು, ವಾಯುವಿನಲ್ಲಿ ಲಯಿಸುವುದು. ಆ ವಾಯುವೂ ಆಕಾಶದಿಂದ ಅಪಹರಿಸಲ್ಪಟ್ಟ ತನ್ನ ಸ್ಪರ್ಶಗುಣವಳ್ಳುವಾಗಿ, ಆಕಾಶದಲ್ಲಿಯೇ ಉಡುಗಿಹೋಗುವುದು. ಆ ಆಕಾಶವೂ ಕೂಡ ಕಾಲ ಒಂದ ಕಾಲಾತ್ಮಕನಾದ ಈಶ್ವರನಿಂದ ಅಪಹರಿಸಲ್ಪಟ್ಟ ತನ್ನ ಗುಣವು ಳ್ಳುವಾಗಿ, ಭೂತಾಯಿಯೆಂಬ ತನ್ನ ಕಾರಣದಲ್ಲಿ ಲಯಿಸಿಹೋಗುವುದು. ದಶೇಂದ್ರಿಯಗಳೂ, ಮನಸೂ, ಬುದ್ಧಿಯೂ, ತಮಗೆ ಅಧಿಷ್ಠಾತೃದೇವ ತೆಗಳೊಡನೆ, ತಮಗೆ ಕಾರಣಭೂತವೆನಿಸಿದ ಸಾತ್ವಿಕಾಹಂಕಾರವನ್ನು ಪ್ರ ವೇತಿಸುವುವು. ಸಾತ್ವಿಕ, ರಾಜಸ, ತಾಮಸಗಳೆಂಬ ಮೂರುಬಗೆಯ ಆಹಂ ಕಾರಗಳೂ ತಮಗೆ ಕಾರಣವಾದ ಮಹತ್ತಿನಲ್ಲಿ ಸೇರಿ ಹೋಗುವುವು. ಕೊನೆಗೆ ಆ ಮಹತ್ತೂ ತನಗೆ ಕಾರಣವಾದ ಭಗವಂತನ ಮಾಯೆಯಲ್ಲಿ ಲಯಿಸುವುದು. ಈ ಭಗವನ್ಮಾಯೆಯಲ್ಲಿ ಕ್ರಮವಾಗಿ ಸೃಷ್ಟಿಸ್ಥಿತಿ ಸಂಹಾರಗಳಿಗೆ ಉಪಯುಕ್ತಗಳಾದ, ಕೆಂಪು, ಬಿಳುಪ, ಕಪ್ಪ ಬಣ್ಣವುಳ್ಳ ರಜಸ್ಸತ್ವತಮಸ್ಸುಗಳೆಂಬ ಮೂರುಗುಣಗಳುಂಟು. ರಾಜೇಂದ್ರಾ : ನಾ ನು ಇದುವರೆಗೆ ಆ ಮಾಯೆಯ ಸ್ವರೂಪವನ್ನೂ, ಕಾವ್ಯಗಳನ್ನೂ ನಿನಗೆ ವಿವರಿಸಿದುದಾಯಿತು. ಮುಂದೆ ಇನ್ನೇನಾದರೂ ಕೇಳಬೇಕಾಗಿದ್ದರೆ ಕೇಳ ಬಹುದು.” ಎಂದನು.