ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾ, ೫.] ಏಕಾದಶಸ್ಕಂಧವು. ೨೪೪೭' ಹೋಗಿ, ಅಲ್ಲಿ ಪ್ರಿಯೆಯಾದ ಸೀತಾದೇವಿಯ ಬಯಕೆಯನ್ನು ಸಲ್ಲಿಸುವುದ ಕ್ಯಾಗಿ, ಸುಕುಮಾರವಾದ ಯಾವ ಪಾದಪದ್ಯಗಳಿಂದ ಮಾಯಾಮೃಗ. ವನ್ನು ಬೆನ್ನಟ್ಟಿ ಓಡಿದೆಯೋ, ಅಂತಹ ಪಾದಾರವಿಂದಗಳನ್ನು ನಮಸ್ಕರಿಸು ವೆವು” ಎಂಬಿವೇ ಮೊದಲಾದ ಅವತಾರಚರಿತ್ರಗಳಿಂದ ಭಗವಂತನನ್ನು ಸ್ತುತಿಸುವರು. ಓ ರಾಜಾ ! ಹೀಗೆ ಭಗವಂತನು ಆಯಾಯುಗಕ್ಕೆ ಅನು ರೂಪಗಳಾದ ನಾಮರೂಪಗಳಿಂದ ಕೂಡಿ, ಆಯಾ ಯುಗಧರ ವನ್ನನುಸರಿಸ ತಕ್ಕ ಮನುಷ್ಯರಿಂದ ಪೂಜಿಸಲ್ಪಡುವನು. ದೋಷಗಳೆಷ್ಟಿದ್ದರೂ ಗಣಿಸದೆ, ಕೇವಲಗುಣಗ್ರಾಹಿಗಳಾದ ಆರೈರು ವಿಶೇಷವಾಗಿ ಕಲಿಯುಗವನ್ನೆ ಗೌರ ವಿಸುವರು. ಏಕೆಂದರೆ, ಆ ಯುಗದಲ್ಲಿ ಕೇವಲಭಗವನ್ನಾಮಸಂಕೀರ್ತನ ದಿಂದಲೇ ಇಷ್ಟಾರ್ಥಗಳೆಲ್ಲವೂ ಕೈಗೂಡುವುವು. ಈ ಸಂಸಾರದಲ್ಲಿ ತೊಳ ಲುತ್ತಿರುವ ದೇಹಿಗಳಿಗೆ, ಕಲಿಯುಗದಲ್ಲಿ ಇದಕ್ಕಿಂತಲೂ ಉತ್ತಮವಾದ ಉಪಾಯವಿಲ್ಲ. ಮರಣಾಂತವಾಗಿ ಇದನ್ನಾಚರಿಸಿದವರು ಸಂಸಾರಮು ಕರಾಗಿ, ಉತ್ತಮಶಾಂತಿಯನ್ನು ಹೊಂದುವರು. ಹೀಗೆ ಮೋಕ್ಷಪಾಯ ವು ಬಹುಸುಲಭವಾದುದರಿಂದ, ಕೃತಾದಿಯುಗದವರೂ, ಕಲಿಯುಗದಲ್ಲಿ ತಮಗೆ ಜನ್ಮ ವಾಗಬೇಕೆಂದು ಕೋರುವರು. ಹಾಗೆಯೇ ತಮ್ಮ ಉದ್ದೇಶ ದಂತೆ ಪರಮಭಾಗವತೋತ್ತಮರಾಗಿ ಹುಟ್ಟುವರು. ಇಂತವರನ್ನು ಕ್ರಮಿ ಡದೇಶಗಳಲ್ಲಿ ಹೆಚ್ಚಾಗಿ ಕಾಣಬಹುದು. ಓ ರಾಜಾ! ಅದರಲ್ಲಿಯೂ ತಾಮ್ರ ಹರ್ಣಿ, ಕಾವೇರಿ, ಕೃತಮಾಲೆ, ಪಯಸ್ವಿನಿ, ಪ್ರತೀಚಿ, ಮುಂತಾದ ಪುಣ್ಯ ನದಿಗಳ ಜಲವನ್ನು ಯಾರು ಪಾನಮಾಡುವರೋ, ಅವರು ಶುದ್ಧ ಮನಸ್ಕ ರಾದ ಭಾಗವತೋತ್ತಮರೆನಿಸುವರು. ಇಲ್ಲಿ ತನ್ನನ್ನು ಕೀರ್ತಿಸಿದವರಿಗೆ ಭ ಗವಂತನು ಪುನರ್ಜನ್ಮವಿಲ್ಲದಂತೆ ಮಾಡುವನು. ಯಾವನು ಸಮಸ್ತಕಗಳ ನ್ನೂ ಬಿಟ್ಟು ಆ ಮುಕುಂದವನ್ನೇ ಸತ್ವಭಾವದಿಂದ ಶರಣುಹೊಂದುವನೋ ಅವನು ಅದರಿಂದಲೇ ದೇವರ್ಷಿ ಪಿತೃಬಂಧು ಮಣಮುಕ್ತನಾಗಿ ಯಾರಿಗೂ ತಾನು ಕಿಂಕರನೆನಿಸದೆ, ಭಗವಂತನ ಪ್ರೀತಿಗೆ ಪಾತ್ರನಾಗುವನು. ಅಂತ ವನಿಗೆ ಪ್ರಮಾದವಶದಿಂದ ಯಾವುದಾದರೂ ವಿರುದ್ಧ ಕಠ್ಯಗಳಲ್ಲಿ ಪ್ರವೃ ಆಯುಂಟಾದರೂ, ಅವನ ಹೃದಯದಲ್ಲಿ ನೆಲೆಗೊಂಡ ಭಗವಂತನು, ಆ ಕಮ್ಮ ದೋಷವನ್ನೂ ನೀಗಿಸುವನು.” ಎಂದನು.

  • ಇಲ್ಲಿ “ಧ್ಯಾರ್ಯ ಕೃತೇ, ಯರ್ಜ ಯಜ್ಞೆತಾಯಾಂ ದ್ವಾಪರೇ ರ್ಯ 1 ಯದಾಪೋಲಿ ತದಾ ಪ್ರೋತಿ ಕಲಾ ಸಂಕೀರ್ತ್ಯ ಕೇಶವಮ್" ಎಂಬಂತೆ ಕರೆ ಯುಗದಲ್ಲಿ ಹರಿಸಂಕೀರ್ತನಮಾತ್ರವೇ ಸಕಲ ಪುರುಷರ ಸಾಧಕವೆಂದು ಗ್ರಾಹ್ಯವು.

- - - -